ಭೀಕರ ರಸ್ತೆ ಅಪಘಾತ: ನಟಿ ರಂಭಾ ಪ್ರಾಣಾಪಾಯದಿಂದ ಪಾರು; ಮಗಳು ಆಸ್ಪತ್ರೆಗೆ ದಾಖಲು

| Updated By: ರಾಜೇಶ್ ದುಗ್ಗುಮನೆ

Updated on: Nov 01, 2022 | 10:51 AM

ಅಪಘಾತದ ಬಗ್ಗೆ ರಂಭಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಮಕ್ಕಳನ್ನು ಶಾಲೆಯಿಂದ ಕರೆತರುವಾಗ ಈ ಅಪಘಾತ ಸಂಭವಿಸಿದೆ.

ಭೀಕರ ರಸ್ತೆ ಅಪಘಾತ: ನಟಿ ರಂಭಾ ಪ್ರಾಣಾಪಾಯದಿಂದ ಪಾರು; ಮಗಳು ಆಸ್ಪತ್ರೆಗೆ ದಾಖಲು
ರಂಭಾ ಕಾರು ಅಪಘಾತ
Follow us on

ನಟಿ ರಂಭಾ (Rambaha) ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕನ್ನಡ ಮೊದಲಾದ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಸದ್ಯ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಈಗ ರಂಭಾ ಅವರು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಈ ವೇಳೆ ನಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಮಗಳು ಸಶಾ (Sasha) ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳಿಗೆ ಚಿಕಿತ್ಸೆ ಮುಂದುವರಿದಿದೆ. ಅವರ ಕುಟುಂಬದವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಕೋರುತ್ತಿದ್ದಾರೆ.

ರಂಭಾ ಅವರು ದಕ್ಷಿಣ ಭಾರತದಲ್ಲಿ ಸಖತ್ ಫೇಮಸ್. ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ಗ್ಲಾಮರ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕನ್ನಡದಲ್ಲಿ ರವಿಚಂದ್ರನ್ ಸೇರಿ ಕೆಲ ಹೀರೋಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಮೊದಲಾದ ಸ್ಟಾರ್​ಗಳ ಜತೆ ರಂಭಾ ತೆರೆ ಹಂಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಬೆಂಗಾಲಿ ಮೊದಲಾದ ಭಾಷೆಗಳಲ್ಲೂ ಬಣ್ಣ ಹಚ್ಚಿದ್ದಾರೆ ಅವರು. 2010ರಲ್ಲಿ ಅವರು ಕೆನಡಾ ಮೂಲದ ಉದ್ಯಮಿ ಇಂದ್ರಕುಮಾರ್ ಅವರನ್ನು ಮದುವೆ ಆದರು. ನಟಿಗೆ ಮೂವರು ಮಕ್ಕಳು. ಸದ್ಯ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿಯೇ ಅವರಿಗೆ ಅಪಘಾತ ಉಂಟಾಗಿದೆ.

ಅಪಘಾತದ ಬಗ್ಗೆ ರಂಭಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಮಕ್ಕಳನ್ನು ಶಾಲೆಯಿಂದ ಕರೆತರುವಾಗ ಈ ಅಪಘಾತ ಸಂಭವಿಸಿದೆ. ಕಾರಿನ ಏರ್​ಬ್ಯಾಗ್ ತೆಗೆದುಕೊಂಡಿದ್ದರಿಂದ ದೊಡ್ಡ ಮಟ್ಟದ ತೊಂದರೆ ಉಂಟಾಗಿಲ್ಲ. ಕಾರು ಜಖಂಗೊಂಡಿದ್ದು, ಸಶಾಗೆ ಗಾಯಗಳಾಗಿವೆ.

ರಂಭಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಕಾರಿಗೆ ಮತ್ತೊಂದು ಕಾರು ಬಂದು ಗುದ್ದಿದೆ. ಎಲ್ಲರೂ ಸೇಫ್ ಆಗಿದ್ದೇವೆ. ಸಶಾ ಆಸ್ಪತ್ರೆಯಲ್ಲೇ ಇದ್ದಾರೆ. ಬ್ಯಾಡ್ ಟೈಮ್​. ದಯವಿಟ್ಟು ಪ್ರಾರ್ಥಿಸಿ’ ಎಂದು ಅವರು ಕೋರಿದ್ದಾರೆ. ಕಮೆಂಟ್ ಬಾಕ್ಸ್​ನಲ್ಲಿ ನಟಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿದೆ. ಅನೇಕ ಸೆಲೆಬ್ರಿಟಿಗಳು ನಟಿಯ ಬಳಿ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ: ರಂಭಾ ಫ್ಯಾಮಿಲಿ ಜತೆ ಖುಷ್ಬೂ ಪೋಸ್​; ಹಳೇ ಗೆಳೆತಿ ಭೇಟಿ ಮಾಡಿ ಖುಷಿಪಟ್ಟ ‘ರಣಧೀರ’ ಚೆಲುವೆ

ಈ ವರ್ಷ ಆಗಸ್ಟ್ ತಿಂಗಳಲ್ಲಿ ರಂಭಾ ಹಾಗೂ ಖುಷ್ಬೂ ಭೇಟಿ ಆಗಿದ್ದರು. ಈ ಫೋಟೋಗಳನ್ನು ಹಂಚಿಕೊಂಡು ರಂಭಾ ಸಂಭ್ರಮಿಸಿದ್ದರು.

Published On - 10:51 am, Tue, 1 November 22