AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದುವೆ ಆಗುವುದು ಅಷ್ಟು ಮುಖ್ಯವಲ್ಲ’: ಖಡಕ್ ನಿರ್ಧಾರ ತಿಳಿಸಿದ ನಟಿ ರಮ್ಯಾ

ನಟಿ ರಮ್ಯಾ ಅವರು ಇಂದಲ್ಲ ನಾಳೆ ಮದುವೆಯ ಬಗ್ಗೆ ಸಿಹಿ ಸುದ್ದಿ ನೀಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಮದುವೆ ಕುರಿತು ತಮ್ಮ ನಿರ್ಧಾರ ಏನು ಎಂಬುದನ್ನು ರಮ್ಯಾ ಅವರು ಸ್ಪಷ್ಟಪಡಿಸಿದ್ದಾರೆ. ವಿವಾಹದ ಬಗ್ಗೆ ಅವರು ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

‘ಮದುವೆ ಆಗುವುದು ಅಷ್ಟು ಮುಖ್ಯವಲ್ಲ’: ಖಡಕ್ ನಿರ್ಧಾರ ತಿಳಿಸಿದ ನಟಿ ರಮ್ಯಾ
Ramya
ಮದನ್​ ಕುಮಾರ್​
|

Updated on: Sep 07, 2026 | 4:42 PM

Share

ಖ್ಯಾತ ನಟಿ ರಮ್ಯಾ ಅವರಿಗೆ ಈಗ 43 ವರ್ಷ ವಯಸ್ಸು. ಸಿನಿಮಾದಲ್ಲಿ ಅವರು ಅಷ್ಟೇನೂ ಬ್ಯುಸಿ ಆಗಿಲ್ಲ. ಆದರೂ ಕೂಡ ಅವರು ಮದುವೆ ಬಗ್ಗೆ ಗಮನ ಹರಿಸಿಲ್ಲ. ರಮ್ಯಾ ಅವರು ಯಾವಾಗ ಮದುವೆ ಆಗಬಹುದು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಕಾರ್ಯಕ್ರಮವೊಂದರಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಪತ್ರಕರ್ತೆ ನಬಿಲಾ ಜಮಾಲ್ ಕೇಳಿದ ಪ್ರಶ್ನೆಗೆ ರಮ್ಯಾ ಅವರು ಉತ್ತರಿಸಿದ್ದಾರೆ. ಮದುವೆಯ ಬಗ್ಗೆ ತಮಗೆ ಇರುವ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೇ ನಾವು ಖುಷಿಯಾಗಿದ್ದೇವೆ ಅಲ್ಲವಾ? ಅಷ್ಟೇ.. ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ, ನೀವು ಮದುವೆ ಆಗಿರಬೇಕು ಅಥವಾ ಖುಷಿಯಾಗಿರಬೇಕು ಅಂತ ಹೇಳಲಾಗುತ್ತೆ. ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ’ ಎಂದು ರಮ್ಯಾ ಅವರು ಹೇಳಿದ್ದಾರೆ.

ಮದುವೆ ಬಗ್ಗೆ ಮಾತನಾಡಿದ ರಮ್ಯಾ:

‘ತುಂಬಾ ಮಹಿಳೆಯವರಿಗೆ ಈ ಮಾತು ಅನ್ವಯ ಆಗದೇ ಇರಬಹುದು. ಮದುವೆ ಆಗಿಯೂ ನೀವು ಖುಷಿಯಾಗಿ ಇರಬಹುದು. ನಿಮಗೆ ಹೊಂದಿಕೆ ಆಗುವಂತಹ ಸಂಗಾತಿ ಸಿಕ್ಕರೆ ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರ ಜೊತೆ ಇಡೀ ಜೀವನ ಕಳೆಯಲು ಬಯಸಿದರೆ ಅದು ಉತ್ತಮ’ ಎಂದು ಕೂಡ ರಮ್ಯಾ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೇ ನಾವು ಖುಷಿಯಾಗಿದ್ದೇವೆ ಅಲ್ಲವಾ? ಅಷ್ಟೇ.. ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ, ನೀವು ಮದುವೆ ಆಗಿರಬೇಕು ಅಥವಾ ಖುಷಿಯಾಗಿರಬೇಕು ಅಂತ ಹೇಳಲಾಗುತ್ತೆ. ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ’ ಎಂದು ರಮ್ಯಾ ಅವರು ಹೇಳಿದ್ದಾರೆ.

ರಮ್ಯಾ ವೈರಲ್ ವಿಡಿಯೋ:

ಮುಂದುವರಿದು ಮಾತನಾಡಿದ ರಮ್ಯಾ ಅವರು, ‘ಮನುಷ್ಯರಾಗಿ ನಮ್ಮ ಬದುಕಿನಲ್ಲಿ ಬದಲಾವಣೆ ಎಂಬುದು ನಿರಂತರವಾಗಿರುತ್ತದೆ. ನಾವು ಸದಾ ಬದಲಾಗುತ್ತಾ ಇರುತ್ತೇವೆ. ಅಲ್ಲೇ ಸಮಸ್ಯೆ ಎದುರಾಗುತ್ತದೆ. ನೀವು ಉತ್ತಮ ಸ್ನೇಹಿತರಾಗಿದ್ದು, ನಿಮ್ಮ ಮೌಲ್ಯಗಳು ಒಂದೇ ರೀತಿ ಇದ್ದರೆ ಮದುವೆ ಆಗುವುದು ಉತ್ತಮ ಎನಿಸುತ್ತದೆ. ಮದುವೆ ಆಗಿ ಖುಷಿಯಾಗಿ ಇರುವವರು ನನ್ನ ಈ ಮಾತನ್ನು ಒಪ್ಪುತ್ತಾರೆ ಎನಿಸುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಕೇಸ್ ಹಿಂಪಡೆಯಿರಿ’: ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್; ಆದರೂ ಇಲ್ಲ ಕ್ಷಮೆ

‘ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ನಾನು ಬ್ಯುಸಿ ಆಗಿದ್ದೇನೆ. ರಿಲೇಷನ್​ಶಿಪ್​ಗೆ ಸಮಯ ಬೇಕು’ ಎಂದು ರಮ್ಯಾ ಅವರು ಹೇಳಿದ್ದಾರೆ. ಆದಷ್ಟು ಬೇಗ ಅವರು ಮದುವೆ ಬಗ್ಗೆ ಗುಡ್ ನ್ಯೂಸ್ ನೀಡಲಿ ಎಂಬುದು ಅಭಿಮಾನಿಗಳ ಆಸೆ ಆಗಿದೆ. ಅದೇ ರೀತಿ, ಸಿನಿಮಾದಲ್ಲಿ ಕೂಡ ಅವರು ಮೊದಲಿನ ರೀತಿ ಸಕ್ರಿಯವಾಗಿ ತೊಡಗಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More