Ramya Divya Spandana: ಯುರೋಪ್ ರಾಷ್ಟ್ರದಿಂದ ನಟಿ ರಮ್ಯಾ ಹಂಚಿಕೊಂಡ ಫೋಟೋ ಹುಟ್ಟುಹಾಕಿದೆ ಭಾರೀ ಚರ್ಚೆ; ಅಂಥದೇನಿದೆ?

ರಮ್ಯಾ ಸೋಶಿಯಲ್ ಮೀಡಿಯಾ ಹಾಗೂ ನಟನೆ ಎರಡಕ್ಕೂ ಮರಳಿದ್ದಾರೆ. ಅವರು ಆಗಾಗ ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ.

Ramya Divya Spandana: ಯುರೋಪ್ ರಾಷ್ಟ್ರದಿಂದ ನಟಿ ರಮ್ಯಾ ಹಂಚಿಕೊಂಡ ಫೋಟೋ ಹುಟ್ಟುಹಾಕಿದೆ ಭಾರೀ ಚರ್ಚೆ; ಅಂಥದೇನಿದೆ?
ರಮ್ಯಾ

Updated on: Jul 06, 2023 | 2:28 PM

ನಟಿ ರಮ್ಯಾ ದಿವ್ಯಾ ಸ್ಪಂದನ (Ramya Divya Spandana) ನಟನೆಗೆ ಮರಳಿದ್ದಾರೆ. ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯುವ ಅವರು ಆಗಾಗ ವಿದೇಶ ಪ್ರಯಾಣ ಮಾಡುತ್ತಾರೆ. ಈಗ ಅವರು ಯುರೋಪ್ ರಾಷ್ಟ್ರಕ್ಕೆ ತೆರಳಿದ್ದಾರೆ. ಅಲ್ಲಿಂದ ಅವರು ಕೆಲ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಒಂದಷ್ಟು ಮಂದಿ ಟೀಕೆ ಮಾಡಿದ್ದಾರೆ. ಕೆಲವರು ರಮ್ಯಾ ಅವರನ್ನು ಹೊಗಳಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದ್ದಂತೂ ಸತ್ಯ.

ರಮ್ಯಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಮೊದಲು ಸಿನಿಮಾಗಳಲ್ಲಿ ನಟಿಸಿದ್ದ ಅವರು ನಂತರ ರಾಜಕೀಯದಲ್ಲಿ ತೊಡಗಿಕೊಂಡರು. ಅದನ್ನು ತೊರೆದ ಬಳಿಕ ಅವರು ಯಾರ ಕಣ್ಣಿಗೂ ಕಾಣಿಸಿಕೊಳ್ಳಲೇ ಇಲ್ಲ. ಸೋಶಿಯಲ್ ಮೀಡಿಯಾದಿಂದಲೂ ರಮ್ಯಾ ದೂರ ಆದರು. ಈಗ ರಮ್ಯಾ ಸೋಶಿಯಲ್ ಮೀಡಿಯಾ ಹಾಗೂ ನಟನೆ ಎರಡಕ್ಕೂ ಮರಳಿದ್ದಾರೆ. ಅವರು ಆಗಾಗ ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ.

ರಮ್ಯಾ ಅವರು ಶರ್ಟ್ ಧರಿಸಿ ಫೋಟೋ ಹಾಕಿದ್ದಾರೆ. ಕೆಳ ಭಾಗದಲ್ಲಿ ಅವರು ಪ್ಯಾಂಟ್ ಆಗಲೀ ಶಾರ್ಟ್ಸ್ ಆಗಲೀ ಹಾಕಿಲ್ಲ. ಇದು ಅನೇಕರ ಕಣ್ಣು ಕುಕ್ಕಿದೆ. ಟ್ರೋಲ್ ಮಾಡಲೆಂದೇ ಕಾದು ಕೂತ ಅನೇಕರು ಈ ಫೋಟೋ ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ಈ ರೀತಿಯ ಫೋಟೋ ಹಂಚಿಕೊಳ್ಳುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ: ಕೊನೆಗೂ ಬಿಡುಗಡೆ ದಿನಾಂಕ ಘೋಷಿಸಿದ ಹಾಸ್ಟೆಲ್ ಹುಡುಗರು: ಏಳು ವರ್ಷದ ಬಳಿಕ ರಮ್ಯಾ ಮರು ಎಂಟ್ರಿ

ರಮ್ಯಾ ಈ ಬಾರಿ ಹಂಚಿಕೊಂಡ ಪೋಸ್ಟ್​​ನಲ್ಲಿ ಸ್ಥಳಗಳ ಫೋಟೋ ಇದೆ. ನಾಲ್ಕನೇ ಸ್ಲೈಡ್​ನಲ್ಲಿ ಮಾತ್ರ ರಮ್ಯಾ ಕಾಣಿಸಿದ್ದಾರೆ. ಅವರು ಮತ್ತೊಂದು ಮಹಿಳೆ ಜೊತೆ ನಿಂತು ಮಿರರ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಅವರ ಅವತಾರ ನೋಡಿ ಅನೇಕರು ಟೀಕೆ ಮಾಡಿದ್ದಾರೆ. ‘ನಾಲ್ಕನೇ ಫೋಟೋದಲ್ಲಿ ಇರೋದು ಏನು? ಆ ರೀತಿಯ ಫೋಟೋ ಏಕೆ ಬೇಕಿತ್ತು’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ನಾಲ್ಕನೇ ಫೋಟೋ ಮಿಸ್ ಆಗಿ ಬಂದಿದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:27 pm, Thu, 6 July 23