
[lazy-load-videos-and-sticky-control id=”TQmdz-iQ_I”]
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಬಂಧಿಯಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಅನೇಕ ಕಾರಣಗಳಿಂದ ಇವರಿಬ್ಬರಲ್ಲಿ ಪುರಾತನ ಭಿನ್ನಮತ ಇತ್ತು. ಆದ್ರೆ ಈ ಪ್ರಕರಣದಿಂದಾಗಿ ಇವರಿಬ್ಬರಲ್ಲಿ ಹೊಂದಾಣಿಕೆ ನಡೆದಿದೆ.

ನಾವೇ ಜಗಳವಾಡಿಕೊಂಡ್ರೆ CCB ಪೊಲೀಸರಿಗೆ ಲಾಭವಾಗುತ್ತೆ. ಮತ್ತಷ್ಟು ದಂಧೆಯ ವಿಚಾರಗಳು ಬಯಲಿಗೆ ಬರುತ್ತೆ. ಹೀಗಾಗಿ ನಾವು ಈ ವಿಚಾರದಲ್ಲಿ ಒಂದಾದ್ರೆ ಸೇಫ್ ಆಗುತ್ತೇವೆ. ಯಾವುದೇ ವಿಚಾರಗಳು ಬಯಲಿಗೆ ಬರುವುದಿಲ್ಲ ಎಂದು ಹಳೆ ವಿಚಾರಗಳನ್ನ ಮರೆತು ಗಂಟೆಗಟ್ಟಲೆ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಪೊಷಕರು, ವಕೀಲರು ಹಾಗೂ ಹಿತೈಷಿಗಳು ಸಹ ತಿಳಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.
Published On - 10:56 am, Fri, 11 September 20