ನಟಿ ಸಂಜನಾಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ; ಹೀಗಾಗಿ ಜಾಮೀನು ಮಂಜೂರು

ನಟಿ ಸಂಜನಾ ಗಲ್ರಾಣಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ‘ನಟಿ ಸಂಜನಾಗೆ ಗೈನಕಾಲಜಿಗೆ (Gynecology) ಸಂಬಂಧಿಸಿದ ಚಿಕಿತ್ಸೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ’ ಎಂದು ಸಂಜನಾ ಪರ ವಕೀಲರು ಡಾಕ್ಟರ್​​ ಸರ್ಟಿಫಿಕೇಟ್​ ಜೊತೆಗೆ ಕೋರ್ಟ್​​ಗೆ ಮನವಿ ಸಲ್ಲಿಸಿದ್ದರು. ಅದನ್ನು ಅಂಗೀಕರಿಸಿದ ನ್ಯಾಯಧೀಶರು ಅನಾರೋಗ್ಯ ಕಾರಣಕ್ಕಾಗಿ ನಟಿ ಸಂಜನಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಡೀಲ್ ಲಿಂಕ್ ಆರೋಪ ಹಿನ್ನೆಲೆ ಸಂಜನಾ ಬಂಧನವಾಗಿತ್ತು. ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಗೆ ಜಾಮೀನು […]

ನಟಿ ಸಂಜನಾಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ; ಹೀಗಾಗಿ ಜಾಮೀನು ಮಂಜೂರು
ಸಾಧು ಶ್ರೀನಾಥ್​ Edited By:

Updated on: Dec 11, 2020 | 5:09 PM

ನಟಿ ಸಂಜನಾ ಗಲ್ರಾಣಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ‘ನಟಿ ಸಂಜನಾಗೆ ಗೈನಕಾಲಜಿಗೆ (Gynecology) ಸಂಬಂಧಿಸಿದ ಚಿಕಿತ್ಸೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ’ ಎಂದು ಸಂಜನಾ ಪರ ವಕೀಲರು ಡಾಕ್ಟರ್​​ ಸರ್ಟಿಫಿಕೇಟ್​ ಜೊತೆಗೆ ಕೋರ್ಟ್​​ಗೆ ಮನವಿ ಸಲ್ಲಿಸಿದ್ದರು. ಅದನ್ನು ಅಂಗೀಕರಿಸಿದ ನ್ಯಾಯಧೀಶರು ಅನಾರೋಗ್ಯ ಕಾರಣಕ್ಕಾಗಿ ನಟಿ ಸಂಜನಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಡೀಲ್ ಲಿಂಕ್ ಆರೋಪ ಹಿನ್ನೆಲೆ ಸಂಜನಾ ಬಂಧನವಾಗಿತ್ತು.

ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಗೆ ಜಾಮೀನು
ಡಾರ್ಕ್‌ವೆಬ್ ಮೂಲಕ ಡ್ರಗ್ ಡೀಲ್ ಆರೋಪ ಕೇಸ್​ಗೆ ಸಂಬಂಧಿಸಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಗೆ ಜಾಮೀನು ಮಂಜೂರಾಗಿದೆ. NDPS ಜಡ್ಜ್ ಜಿ.ಎಂ.ಶೀನಪ್ಪ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ದರ್ಶನ್​ ಜೊತೆಗೆ ಇತರೆ ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಹೆಗ್ಡೆಗೂ ಜಾಮೀನು ಮಂಜೂರಾಗಿದೆ.

ಕ್ರಿಸ್‌ಮಸ್ ದಿನದ್ದೇ ಕೊನೆ ಪಾರ್ಟಿ: ಗ್ರಹಚಾರ ಅಂದು ಆ ಜಾಗಕ್ಕೆ ಹೋಗಬೇಕಾಯ್ತು-ಸಂಜನಾ

ಜಾಮೀನಿಗಾಗಿ ನಟಿಯರ ಸರ್ಕಸ್​: ಸುಪ್ರೀಂ ಮೆಟ್ಟಿಲೇರಿದ ರಾಗಿಣಿ, ಹೈಕೋರ್ಟ್​ ಮೊರೆಹೋದ ಸಂಜನಾ

Published On - 3:44 pm, Fri, 11 December 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us