Sreeleela Birthday: ಶ್ರೀಲೀಲಾ ಬರ್ತ್​ಡೇಗೆ ಪೋಸ್ಟರ್​ಗಳ ಸುರಿಮಳೆ; ರಶ್ಮಿಕಾ ಹಿಂದಿಕ್ಕಿದ ನಟಿ

|

Updated on: Jun 14, 2023 | 12:52 PM

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​ನ ಬೇಡಿಕೆಯ ನಟಿ ಆಗಿದ್ದಾರೆ. ಹಲವು ಸಿನಿಮಾ ಒಪ್ಪಿ ಅವರು ನಟಿಸಿದ್ದಾರೆ. ಈಗ ಟಾಲಿವುಡ್​ನಲ್ಲಿ ಶ್ರೀಲೀಲಾ ಬೇಡಿಕೆ ಹೆಚ್ಚುತ್ತಿದೆ.

Sreeleela Birthday: ಶ್ರೀಲೀಲಾ ಬರ್ತ್​ಡೇಗೆ ಪೋಸ್ಟರ್​ಗಳ ಸುರಿಮಳೆ; ರಶ್ಮಿಕಾ ಹಿಂದಿಕ್ಕಿದ ನಟಿ
ಶ್ರೀಲೀಲಾ-ಅಲ್ಲು ಅರ್ಜುನ್
Follow us on

ಟಾಲಿವುಡ್​ನ ಬೇಡಿಕೆಯ ಹೀರೋಯಿನ್​ಗಳ ಪೈಕಿ ಕನ್ನಡದ ನಟಿ ಶ್ರೀಲೀಲಾ (Sreeleela) ಮುಂಚೂಣಿಯಲ್ಲಿದ್ದಾರೆ. ಇಂದು (ಜೂನ್ 14) ಅವರ ಜನ್ಮದಿನ. ಈ ವಿಶೇಷ ದಿನಂದು ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಇಷ್ಟೇ ಅಲ್ಲ, ಅವರ ನಟನೆಯ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿದೆ. ಅವರು ಅಲ್ಲು ಅರ್ಜುನ್ (Allu Arjun) ಚಿತ್ರಕ್ಕೆ  ನಾಯಕಿ ಆಗಿದ್ದಾರೆ ಅನ್ನೋದು ವಿಶೇಷ. ಐದಕ್ಕೂ ಹೆಚ್ಚು ಸಿನಿಮಾ ತಂಡದಿಂದ ನಟಿಗೆ ಬರ್ತ್​ಡೇ ವಿಶ್ ಬಂದಿದೆ. ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರನ್ನು ಹಿಂದಿಕ್ಕಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​ನ ಬೇಡಿಕೆಯ ನಟಿ ಆಗಿದ್ದಾರೆ. ಹಲವು ಸಿನಿಮಾ ಒಪ್ಪಿ ಅವರು ನಟಿಸಿದ್ದಾರೆ. ಈಗ ಟಾಲಿವುಡ್​ನಲ್ಲಿ ಶ್ರೀಲೀಲಾ ಬೇಡಿಕೆ ಹೆಚ್ಚುತ್ತಿದೆ. ಅಲ್ಲು ಅರ್ಜುನ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಶ್ರೀಲೀಲಾ ಸಿನಿಮಾ ಲೈನಪ್​ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಇದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ನಿತಿನ್ 32ನೇ ಚಿತ್ರಕ್ಕೆ ಅವರು ನಾಯಕಿ. ಇದರ ಪೋಸ್ಟರ್​ ಕೂಡ ರಿಲೀಸ್ ಆಗಿದೆ. ‘ಬೋಯಪತಿ ರ್ಯಾಪೋ’ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದು, ಪೋಸ್ಟರ್​ ಬಿಡುಗಡೆ ಆಗಿದೆ.

ಅಲ್ಲು ಅರ್ಜುನ್ ಅವರು ಸ್ಟಾರ್ ಡೈರೆಕ್ಟರ್ ತ್ರಿವಿಕ್ರಂ ಶ್ರೀನಿವಾಸ್​ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಆಹಾ’ ನಿರ್ಮಾಣದ ಮೊದಲ ಸಿನಿಮಾ ಇದು. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ‘ಆಹಾ’ ಕಡೆಯಿಂದ ಒಂದು ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಈ ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್ ಅವರು ಶ್ರೀಲೀಲಾ ಅವರನ್ನು  ತೋಳುಗಳಲ್ಲಿ ಎತ್ತುಕೊಂಡಿದ್ದಾರೆ. ಇವರ ಕಾಂಬಿನೇಷನ್​​ನಲ್ಲಿ ಇದು ಮೊದಲ ಸಿನಿಮಾ.

ಇದನ್ನೂ ಓದಿ: ಗ್ಲಾಮರ್ ಪಾತ್ರಕ್ಕೆ ನೋ ಎಂದ ಶ್ರೀಲೀಲಾ? ಮಹತ್ವದ ನಿರ್ಧಾರ ತೆಗೆದುಕೊಂಡ ನಟಿ

ಶ್ರೀಲೀಲಾ ಕನ್ನಡದ ನಟಿ. ಸದ್ಯ ಅವರ ಕೈಯಲ್ಲಿ ಅಧಿಕೃತವಾಗಿ 7ಕ್ಕೂ ಹೆಚ್ಚು ತೆಲುಗು ಸಿನಿಮಾಗಳಿವೆ. ‘ಜೂನಿಯರ್​’ ಹೆಸರಿನ ಕನ್ನಡ ಸಿನಿಮಾಗೆ ಅವರು ನಾಯಕಿ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:40 pm, Wed, 14 June 23