ನಟ ದರ್ಶನ್ ಬಂದ ವಿಚಾರ ಕೇಳಿ ಬಳ್ಳಾರಿಯ ಕೆಲ ಖೈದಿಗಳು ಸಂಭ್ರಮಿಸಿದ್ದರು. ದರ್ಶನ್ ಎಲ್ಲಾದರೂ ನೋಡಲು ಸಿಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಈಗ ಅವರಿಗೆ ದರ್ಶನ್ನಿಂದಲೇ ಸಂಕಷ್ಟ ಎದುರಾಗಿದೆ. ದರ್ಶನ್ ಬರುತ್ತಿದ್ದಂತೆ ಜೈಲ್ ಒಳಭಾಗದಲ್ಲಿದ್ದ ಕ್ಯಾಂಟೀನ್ ಕ್ಲೋಸ್ ಮಾಡಿಸಲಾಗಿದೆ. ಹೀಗಾಗಿ, ಜೈಲಿನಲ್ಲಿ ಏನು ಕೊಡುತ್ತಾರೋ ಅದನ್ನೇ ತಿಂದು ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ.
ಒಪ್ಪಿಗೆ ಇರುವ ಕೆಲ ವಸ್ತುಗಳನ್ನು ಕ್ಯಾಂಟೀನ್ನಲ್ಲಿ ಇಡಲಾಗುತ್ತಿತ್ತು. ಇದನ್ನು ಖೈದಿಗಳು ಖರೀದಿ ಮಾಡುತ್ತಿದ್ದರು. ಈಗ ಕ್ಯಾಂಟೀನ್ ಇಲ್ಲದೆ ಕೇವಲ ಜೈಲು ಊಟ ಮಾಡುವ ಪರಿಸ್ಥಿತಿ ಬಂದೊದಗಿದೆ. ದರ್ಶನ್ ಅವರು ಬೆಂಗಳೂರಿನ ಜೈಲಿನಲ್ಲಿ ಇದ್ದಾಗ ಅವರಿಗೆ ಸಾಕಷ್ಟು ಸೌಕರ್ಯ ಮಾಡಿಕೊಡಲಾಗಿತ್ತು. ಹೀಗಾಗಿ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಲ್ಲಿ ಆ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಎಚ್ಚರಿಕೆ ವಹಿಸಲಾಗುತ್ತಿದೆ.
ಬಳ್ಳಾರಿ ಸೆಂಟ್ರಲ್ ಜೈಲನಲ್ಲಿ ದರ್ಶನ ಸೊಳ್ಳೆ ಕಾಟಕ್ಕೆ ಒದ್ದಾಡಿದ್ದಾರೆ. ಆಗಸ್ಟ್ 31ರ ರಾತ್ರಿ ಹೈ ಸೆಕ್ಯುರಿಟಿ ಜೈಲು ವಿಭಾಗದ ಪ್ಯಾಸೇಜ್‌ನಲ್ಲಿ ವಾಕ್ ಮಾಡಿದ್ದಾರೆ. ರಾತ್ರಿ ಅವರಿಗೆ ನಿದ್ದೆ ಬರುತ್ತಿಲ್ಲ. ಸದ್ಯ ಅವರು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಆ ಪಾತ್ರದಲ್ಲಿ ನಟಿಸಿದ್ದಕ್ಕೆ ದರ್ಶನ್ಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆಯಂತೆ!
ದರ್ಶನ್ ಇರುವ ಹೈ ಸೆಕ್ಯುರಿಟಿ ಜೈಲ್ ವಿಭಾಗದಿಂದ ಐದು ಕೈದಿಗಳನ್ನು ಬೇರೆ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಹೈ ಸೆಕ್ಯುರಿಟಿ ಸೆಲ್ನಲ್ಲಿ ಈಗ ದರ್ಶನ ಸೇರಿ ಕೇವಲ ಮೂವರು ಖೈದಿಗಳು ಮಾತ್ರ ಇದ್ದಾರೆ. ಅವರಿಗೆ ಒಂಟಿತನ ಬಹುವಾಗಿ ಕಾಡುತ್ತಿದೆ. ದರ್ಶನ್ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಶೀಘ್ರವೇ ಬಳ್ಳಾರಿಗೆ ಬರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:26 am, Sat, 31 August 24