ಆ ಪಾತ್ರದಲ್ಲಿ ನಟಿಸಿದ್ದಕ್ಕೆ ದರ್ಶನ್‌ಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆಯಂತೆ!
ಪೌರಾಣಿಕ ನಾಟಕದಲ್ಲಿ ಅದೊಂದು ಪಾತ್ರ ಮಾಡಿದ್ರೆ ಆತನ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ತವೆಯಂತೆ. ಇದೀಗ ನಟ ದರ್ಶನ್ ಸಹ ಆ ಒಂದು ಪಾತ್ರವನ್ನ ಮಾಡಿಯೇ ಕೊಲೆ ಪ್ರಕರಣ ಹಾಗೂ ಇತರ ಗಲಾಟೆ, ವಿವಾದ ಪ್ರಕರಣಗಳಲ್ಲಿ ಸಿಲುಕಿದ್ದಾರೆ . ಹಾಗಿದ್ರೆ ಆ ಪೌರಾಣಿಕ ನಾಟವಾದರೂ ಯಾವುದು. ಅದರಲ್ಲಿ ಇರುವ ಪಾತ್ರ ಯಾವುದು? ಆ ಪಾತ್ರಕ್ಕೂ ದರ್ಶನ್ ಜೈಲು ಸೇರಿರೋದಕ್ಕೂ ಏನು ಸಂಬಂಧ ಅಂತೀರಾ ಈ ಸ್ಟೋರಿ ನೋಡಿ.
ಮಂಡ್ಯ, (ಆಗಸ್ಟ್ 30): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇದ್ದ ದರ್ಶನ್‌ಗೆ ರಾಜಾತೀಥ್ಯ ನೀಡಿದ ಕಾರಣಕ್ಕೆ ದಾಸನನ್ನ ಬಳ್ಳಾರಿ ಕೇಂದ್ರ ಕಾರಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಫೀಕ್ ಲೆವೆಲ್‌ನಲ್ಲಿ ಇದ್ದ ದರ್ಶನ್ ಪರಿಸ್ಥಿತಿ ನೋಡಿ ಅವರ ಅಭಿಮಾನಿಗಳು ಕಣ್ಣೀರು ಹಾಕ್ತಾ ಇದ್ರೆ, ಮತ್ತೊಂದು ಕಡೆ ಇಂತಹ ದುರಂಕಾರಿಗೆ ಯಾವ ಶಿಕ್ಷೆ ಕೊಟ್ಟರು ಕಡಿಮೆ ಎನ್ನೋರು ಇದ್ದಾರೆ. ಹಾಗಾದ್ರೆ ದರ್ಶನ್ ಈ ಪರಿಸ್ಥಿತಿಗೆ ಹಾಗೂ ದುರಂಕಾರದ ನಡೆಗೆ, ದರ್ಶನ್ ಮಾಡಿದ ಆ ಒಂದು ಪಾತ್ರದ ಮಹಿಮೆ ಕಾರಣ ಆಯ್ತ ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಗ್ರಾಮೀಣ ಭಾಗದಲ್ಲಿ ಪೌರಣಿಕ ನಾಟಕಗಳಲ್ಲಿ ಅಭಿನಯಿಸೋ ಗ್ರಾಮೀಣ ಕಲಾವಿದರು ಹೇಳುವ ಮಾತನ್ನ ಕೇಳಿದ್ರೆ ನಿಜಾ ಇರಬಹುದು ಅನ್ನಿಸುತ್ತದೆ.
ಹೌದು …ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಸಖತ್ ಆಗಿಯೇ ಹಿಟ್ ಆಯ್ತು. ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡ ನಟ ದರ್ಶನ್‌ಗೆ, ಅಭಿಮಾನಿಗಳು ಶಬ್ಬಾಸ್‌ಗಿರಿಯನ್ನು ಸಹ ನೀಡಿದ್ರೆ. ಇದೇ ದರ್ಶನ್ ಆ ದುರ್ಯೋಧನನ ಪಾತ್ರವನ್ನು ನಿಜ ಜೀವದಲ್ಲೂ ಪರಕಾಯ ಮಾಡಿಕೊಂಡಿರೋದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದ್ಯಾವುದನ್ನು ನಾವು ಹೇಳ್ತಾ ಇಲ್ಲ, ಸ್ವತಃ ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನನ ಪಾತ್ರವನ್ನು ಮಾಡಿರುವವರು ಹೇಳುವ ಮಾತು ಇದು.
ಇದನ್ನೂ ಓದಿ: Darshan Thoogudeepa: ಬಳ್ಳಾರಿ ಜೈಲಿನಲ್ಲಿ ದರ್ಶನ್: ಹೇಗಿತ್ತು ಮೊದಲ ದಿನ?
ಅಂದಹಾಗೆ ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮದ ಹಾಗೂ ಸುತ್ತಮುತ್ತಿನ ಗ್ರಾಮಗಳಲ್ಲಿ ನಾಟಕ ಮಾಡಿದ ಜನರು ತಾವು ಎದುರಿಸಿದ ಸಂಗತಿಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ದುರ್ಯೋಧನನ ಪಾತ್ರ ನಿರ್ವಹಿಸಿದ ಬಳಿಕ ನಾನು, ನನ್ನದು, ನನ್ನ ಮುಂದೆ ಯಾರು, ನಾನೇ ಎಲ್ಲಾ ಎಂಬ ದುರಂಕರಾದ ಮನೋಭಾವ ಪಾತ್ರ ನಿರ್ವಹಿಸಿದರಿಗೆ ಬರುತ್ತವಂತೆ. ಇಂತಹ ಸ್ಥಿತಿಯಿಂದ ಆ ಪಾತ್ರಧಾರಿಗಳು ಅನೇಕ ಸಮಸ್ಯೆಗಳನ್ನು ಸಹ ಎದುರಿಸಿದ್ದಾರಂತೆ.
ದುರ್ಯೋಧನ ಪಾತ್ರ ನಿರ್ವಹಿಸಿ ತಮ್ಮ ದುರಂಕಾರ ನಡೆಯಿಂದ ಅನೇಕ ಸಂಷ್ಟಗಳನ್ನು ಎದುರಿಸಿ ಬಳಿಕ ಯಾವುದಾದರೂ ದೇವರ ಪಾತ್ರ ನಿರ್ವಹಿಸಿದ ಬಳಿಕ ಅವರ ಬದುಕು ಎಂದಿನಂತೆ ಸುಗಮ ಆಗುತ್ತಿತ್ತಂತೆ. ಅದೇ ರೀತಿಯ ದುವರ್ತನೆಯಿಂದ ದರ್ಶನ್‌ಗೆ ಈ ಪರಿಸ್ಥಿತಿ ಬಂದಿದೆ ಎಂದು ಹೇಳಲಾಗುತ್ತಿದೆ. ದರ್ಶನ್ ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನನಾಗಿ ಬಣ್ಣ ಹಚ್ಚಿದ ಬಳಿಕ ಹಲವು ಸಮಸ್ಯೆ ಎದುರಿಸಿ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತಗಲಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದುರ್ಯೋಧನನ ಪಾತ್ರ ಮಾಡಿದವರಿಗೆ ಕಂಟಕ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಕುರುಕ್ಷೇತ್ರ ಸಿನಿಮಾದ ಬಳಿಕ ದರ್ಶನ್ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕಿ ಚರ್ಚೆಯಲ್ಲಿದ್ದಾರೆ. 25 ಕೋಟಿ ಲೋನ್ ವಿವಾದ, ವೈಟರ್ ಮೇಲೆ ಹಲ್ಲೆ ವಿವಾದ, ನಿರ್ದೇಶಕ ಪ್ರೇಮ ಬಗೆಗಿನ ಹೇಳಿಕೆ ವಿವಾದ. ನಿರ್ಮಾಪಕ ಉಮಾಪತಿ ಜೊತೆಗಿನ ವಿವಾದ, ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್. ಹೀಗೆ ಸಾಲು ಸಾಲು ವಿವಾದ-ಸಂಕಷ್ಟಗಳು ದರ್ಶನ್ ಸುತ್ತ ಸುತ್ತಿಕೊಂಡಿವೆ.
ಒಟ್ಟಾರೆ ದುರ್ಯೋಧನನ ಪಾತ್ರ ಮಾಡಿದವರಿಗೆ ಸಂಕಷ್ಟ ಎದುರಾಗುತ್ತಿದ್ದು, ನಟ ದರ್ಶನ್ ಗೂ ಸಹ ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿದ್ದಕ್ಕೆ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ