‘ಮನೆ ಸಮೀಪ ಬೇಡ’; ಬರ್ತ್​ಡೇ ಆಚರಣೆಯ ಸ್ಥಳದ, ಸಮಯದ ಬಗ್ಗೆ ಮಾಹಿತಿ ಕೊಟ್ಟ ಸುದೀಪ್

ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಅವರು ಇಂದು ಮುಂಜಾನೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಅವರು ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ ಎನ್ನುವ ಕುತೂಹಲ ಫ್ಯಾನ್ಸ್​ಗೆ ಮೂಡಿತ್ತು. ಅವರು ಬರ್ತ್​ಡೇ ಬಗ್ಗೆ, ಸಿನಿಮಾ ಬಗ್ಗೆ ಮಾಹಿತಿ ನೀಡಿದೆ.

‘ಮನೆ ಸಮೀಪ ಬೇಡ’; ಬರ್ತ್​ಡೇ ಆಚರಣೆಯ ಸ್ಥಳದ, ಸಮಯದ ಬಗ್ಗೆ ಮಾಹಿತಿ ಕೊಟ್ಟ ಸುದೀಪ್
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Aug 31, 2024 | 11:26 AM

ಕಿಚ್ಚ ಸುದೀಪ್ ಅವರಿಗೆ ಸೆಪ್ಟೆಂಬರ್ 2 ಜನ್ಮದಿನ. ಅವರ ಬರ್ತ್​ಡೇ ಆಚರಣೆಗೆ ಫ್ಯಾನ್ಸ್ ಕಾದಿದ್ದಾರೆ. ಈ ಬಾರಿ ಅವರು ಮನೆಯ ಸಮೀಪ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಜನ ಬರುವುದರಿಂದ ತೊಂದರೆ ಆಗುತ್ತದೆ ಎಂದು ಅಕ್ಕ-ಪಕ್ಕದ ಮನೆಯವರು ದೂರಿದ್ದರು. ಈ ಕಾರಣಕ್ಕೆ ಬೇರೆ ಕಡೆ ಬರ್ತ್​ಡೇ ಆಚರಣೆ ಮಾಡಲು ಸುದೀಪ್ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿ ಮಾಹಿತಿ ನೀಡಿದ್ದಾರೆ.

‘ಕಳೆದ ತಿಂಗಳು ಬರ್ತ್​ಡೇ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಆಯ್ತು. ಅಕ್ಕ-ಪಕ್ಕದ ಮನೆಯವರು ರಿಕ್ವೆಸ್ಟ್ ಮಾಡಿದ್ದರು. ಮನೆಯ ಬಳಿ ಆಚರಣೆ ಬೇಡ. ಜಯನಗರದಲ್ಲಿರುವ ಟೆಲಿಫೋನ್​ ಎಕ್ಸ್​ಚೇಂಜ್ ಎದುರು MES ಗ್ರೌಂಡ್ ಇದೆ. ಬೆಳಿಗ್ಗೆ 10 ಗಂಟೆಯಿಂದ 12ವರೆಗೆ ಇರುತ್ತೇನೆ. ಬರುವ ಸ್ನೇಹಿತರು ಅಲ್ಲಿ ಭೇಟಿ ಮಾಡುತ್ತೇನೆ. ಇದಾದಮೇಲೂ ಮನೆಯವರ ಬಳಿ ಬರುತ್ತಾರೆ. ಆದರೆ, ಅಲ್ಲಿ ಒಪ್ಪಿಗೆ ಇಲ್ಲ. ಎಂಇಎಸ್ ಗ್ರೌಂಡ್​ನಲ್ಲೂ ಪ್ರೋಟೋಕಾಲ್​ ಇದೆ’ ಎಂದಿದ್ದಾರೆ ಸುದೀಪ್.

‘ಕಳೆದ ಬಾರಿ ಬ್ಯಾರಿಕೇಡ್ ಒಡೆದು ಫ್ಯಾನ್ಸ್ ಬಂದಿದ್ದರು. ಅನೇಕರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಬಾರಿ ಶಾಸಕ ಸಿಕೆ ರಾಮಮೂರ್ತಿ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ’ ಎಂದು ಕೇಳಿದ್ದಾರೆ ಸುದೀಪ್. ‘ಕೇಕ್ ತರಬೇಡಿ. ಕಟ್ ಮಾಡಿದಮೇಲೆ ಅದರಷ್ಟು ಅನಾಥ ಮತ್ತೊಬ್ಬರು ಇಲ್ಲ. ಆತರಹ ಸಂಭ್ರಮ ಬೇಡ. ಆ ಹಣದಲ್ಲಿ ಯಾರಿಗಾದರೂ ಊಟ ಹಾಕಿ’ ಎಂದು ಕೋರಿದ್ದಾರೆ ಅವರು.

ಇದನ್ನೂ ಓದಿ: ಕಿಚ್ಚ ಸುದೀಪ್ ಬರ್ತ್​​ಡೇ ಅನೂಪ್ ಭಂಡಾರಿ ಜೊತೆಗಿನ ಹೊಸ ಸಿನಿಮಾ ಅನೌನ್ಸ್

‘ನಿರ್ಮಾಪಕರು, ನಿರ್ದೇಶಕರು ಇದ್ದಾರೆ. ಅವರು ನಿರ್ಧಾರ ಮಾಡುತ್ತಾರೆ. ಇಷ್ಟು ವರ್ಷ ಒಂದೇ ಸಿನಿಮಾ ಮಾಡಿಕೊಂಡು ಬರ್ತಾ ಇದ್ದೆ. 2-3 ಸಿನಿಮಾ ಒಟ್ಟಿಗೆ ಮಾಡ್ತೀನಿ. ನನಗೂ ಬೇಗ ಬರಬೇಕು ಎಂದಿದೆ. ಶೀಘ್ರವೇ ರಿಲೀಸ್ ಮಾಡುತ್ತೇವೆ. ಸಿನಿಮಾ ಕೆಲಸ ಕೊನೆಯ ಹಂತದಲ್ಲಿದೆ ಇದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.