ವೀರಪ್ಪನ್ ಜೊತೆ ಇದ್ದು ಮರಳಿ ಬಂದಾಗ ರಾಜ್​ಕುಮಾರ್​ಗೆ ಸಿಕ್ಕ ಸ್ವಾಗತ ಹೇಗಿತ್ತು? ಇಲ್ಲಿದೆ ಹಳೆಯ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Oct 07, 2024 | 7:37 AM

2000ನೇ ಇಸ್ವಿಯ ಜುಲೈ 30ರಂದು ರಾಜ್​ಕುಮಾರ್ ಅವರು ಗಾಜನೂರಿನಲ್ಲಿ ಇದ್ದರು. ಅವರು ಗಾಜನೂರಿನ ಮನೆಯಲ್ಲಿ ಇರುವಾಗ ರಾತ್ರಿ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದರು. ಅವರು 108 ದಿನ ಕಸ್ಟಡಿಯಲ್ಲಿ ಇದ್ದರು. ಅದೇ ವರ್ಷ ನವೆಂಬರ್ 15ರಂದು ಅವರನ್ನು ಬಿಡಲಾಯಿತು.

ವೀರಪ್ಪನ್ ಜೊತೆ ಇದ್ದು ಮರಳಿ ಬಂದಾಗ ರಾಜ್​ಕುಮಾರ್​ಗೆ ಸಿಕ್ಕ ಸ್ವಾಗತ ಹೇಗಿತ್ತು? ಇಲ್ಲಿದೆ ಹಳೆಯ ವಿಡಿಯೋ
ರಾಜ್​ಕುಮಾರ್
Follow us on

ಕಾಡುಗಳ್ಳ ವೀರಪ್ಪನ್ ನಮ್ಮ ವರನಟ ಡಾಕ್ಟರ್ ರಾಜ್​ಕುಮಾರ್ ಅವರನ್ನು ಅಪಹರಿಸಿಬಿಟ್ಟಿದ್ದರು. ಹಲವು ದಿನಗಳ ಕಾಲ ಕಾಡಲ್ಲಿ ಅವರು ಇದ್ದರು. ಅವರಿಗೆ ವೀರಪ್ಪನ್ ಏನೂ ಮಾಡಿರಲಿಲ್ಲ ಎಂಬುದು ಖುಷಿಯ ವಿಚಾರ. ಬೆಂಗಳೂರಿಗೆ ರಾಜ್​ಕುಮಾರ್ ಬಂದಾಗ ಪರಿಸ್ಥಿತಿ ಹೇಗಿತ್ತು? ಈ ಅಪರೂಪದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರ ಖುಷಿಯ ಪಾರವನ್ನು ಕಂಟ್ರೋಲ್ ಮಾಡಲು ಯಾರಿಗೂ ಸಾಧ್ಯವೇ ಇರಲಿಲ್ಲ.

2000ನೇ ಇಸ್ವಿಯ ಜುಲೈ 30ರಂದು ರಾಜ್​ಕುಮಾರ್ ಅವರು ಗಾಜನೂರಿನಲ್ಲಿ ಇದ್ದರು. ಅವರು ಗಾಜನೂರಿನ ಮನೆಯಲ್ಲಿ ಇರುವಾಗ ರಾತ್ರಿ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದರು. ಅವರು 108 ದಿನ ಕಸ್ಟಡಿಯಲ್ಲಿ ಇದ್ದರು. ಅದೇ ವರ್ಷ ನವೆಂಬರ್ 15ರಂದು ಅವರನ್ನು ಬಿಡಲಾಯಿತು. 100+ ದಿನ ಅವರು ಟೆನ್ಷನ್​ನಲ್ಲಿಯೇ ಇದ್ದರು.

108 ದಿನಗಳು ರಾಜ್​ಕುಮಾರ್ ಅವರು ವೀರಪ್ಪನ್ ಜೊತೆ ಕಾಡಿನಲ್ಲಿ ಇದ್ದರು. ಕಾಡುಗಳಲ್ಲಿ ಸುತ್ತಾಟ ನಡೆಸಿದ್ದರು. ರಾಜ್​ಕುಮಾರ್ ಕಾಡಿನಲ್ಲಿ ಇದ್ದಂಥ ಸಂದರ್ಭದ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರ ಕಾಣುತ್ತಿದ್ದವು. ಅವರು ಜೈಲಿನಲ್ಲಿ ಇದ್ದಷ್ಟು ದಿನ ಇಡೀ ಕರ್ನಾಟಕ ಆತಂಕ ಒಳಗಾಗಿತ್ತು. ಥಿಯೇಟರ್​ಗಳು ಬಂದ್ ಆಗಿದ್ದವು. ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಇತ್ತು.

ಬಿಡುಗಡೆ ಬಳಿಕ ರಾಜ್​ಕುಮಾರ್ ಅವರು ಹೆಲಿಕ್ಯಾಪ್ಟರ್​ನಲ್ಲಿ ಬಂದು ಇಳಿಯುತ್ತಾರೆ. ಬೆಂಗಳೂರಿನ ಹೈಕೋರ್ಟ್​ ಎದುರು ಜನ ಸಾಗರವೇ ನೆರೆದಿರುತ್ತದೆ. ಪಟಾಕಿ ಸಿಡಿಸಲಾಗುತ್ತದೆ. ರಾಜ್​ಕುಮಾರ್ ಬರುವಾಗ ಶಿವಣ್ಣ ಅವರು ಕ್ಯಾಮೆರಾ ನೋಡುವಂತೆ ಹೇಳುತ್ತಾರೆ. ಆಗ ಅಣ್ಣಾವ್ರು ಕ್ಯಾಮೆರಾ ಕಡೆಗೆ ನೋಡುತ್ತಾರೆ ಮತ್ತು ಕೈ ಮುಗಿಯುತ್ತಾರೆ. ಜನರು ಪಟಾಕಿ ಸಿಡಿಸುತ್ತಾರೆ. ಈ ಅಪರೂಪದ ವಿಡಿಯೋನ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.


ರಾಜ್​ಕುಮಾರ್ ಅವರ ಅಪಹರಣವು ಅತಿ ದೊಡ್ಡ ಮಟ್ಟದಲ್ಲಿ ಚರ್ಚೆ ಆದ ವಿಚಾರ ಆಗಿತ್ತು. 24 ವರ್ಷಗಳ ಹಿಂದೆ ಈ ಘಟನೆಯು ನಡೆದಿತ್ತು ಎನ್ನಬಹುದು. ಈ ಘಟನೆಯು ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ಚರ್ಚೆ ಆಗಿತ್ತು. ರಾಜ್​​ಕುಮಾರ್ ಅವರು ಕನ್ನಡದಲ್ಲಿ ಆಗ ಬೇಡಿಕೆಯ ಹೀರೋ ಎನಿಸಿಕೊಂಡಿದ್ದರು. ರಾಜ್​ಕುಮಾರ್ ಕುಟುಂಬವು ಹಣವನ್ನು ನೀಡಿ ಬಿಡುಗಡೆ ಆಗಿದೆ ಎನ್ನುವ ಮಾತು ಇತ್ತು. ಆದರೆ, ಇದನ್ನು ರಾಜ್​ಕುಮಾರ್ ಕುಟುಂಬದವರು ಅಲ್ಲಗಳೆದಿದೆ.

ಇದನ್ನೂ ಓದಿ: ಸಿನಿಮಾ ಗೆದ್ದಿದ್ದು ನನ್ನಿಂದಲೇ ಅನ್ನೋ ಹೀರೋಗಳು ರಾಜ್​ಕುಮಾರ್ ಹೇಳಿದ ಈ ಮಾತನ್ನು ಕೇಳಿ

ಪುನೀತ್ ರಾಜ್​​ಕುಮಾರ್ ಅವರು ಈ ಅಪಹರಣದ ಬಗ್ಗೆ ಒಮ್ಮೆ ಮಾತನಾಡಿದ್ದರು. ತಮಗೆ ಸಾಕಷ್ಟು ಭಯ ಆಗಿದ್ದಾಗಿಯೂ, ಜನರ ಬೆಂಬಲ ನೋಡಿ ಸಾಕಷ್ಟು ಖುಷಿಪಟ್ಟಿದ್ದಾಗಿಯೂ ಅವರು ಹೇಳಿಕೊಂಡಿದ್ದರು. ಅವರು ಬಿಡುಗಡೆ ಆದ ಬಳಿಕ ಎಲ್ಲರೂ ಖುಷಿಪಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.