AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗಸ್ತ್ಯ ನಟನೆ, ನಿರ್ದೇಶನದ ‘ಮಾರಿಗೆ ದಾರಿ’ ಸಿನಿಮಾದ ಫಸ್ಟ್​ ಲುಕ್​ ಟೀಸರ್​​ ಬಿಡುಗಡೆ

‘ಮಾರಿಗೆ ದಾರಿ’ ಸಿನಿಮಾದಲ್ಲಿ ಅಗಸ್ತ್ಯ ಅವರು ಹೀರೋ ಆಗಿ ನಟಿಸಿದ್ದಾರೆ. ನಿರ್ದೇಶನ ಕೂಡ ಅವರದ್ದೇ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್​ ಮುಕ್ತಾಯ ಆಗಿದೆ. ಈಗ ಫಸ್ಟ್​ ಲುಕ್​ ಟೀಸರ್​ ಬಿಡುಗಡೆ ಮಾಡಲಾಗಿದೆ. ‘ರಾಧಾ ಫಿಲ್ಮ್ಸ್​’ ಮೂಲಕ ‘ಮಾರಿಗೆ ದಾರಿ’ ಸಿದ್ಧವಾಗಿದೆ. ಮಹಾಲಕ್ಷ್ಮಿ, ವರ್ಧನ್, ಕಾಕ್ರೋಚ್ ಸುಧಿ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಗಸ್ತ್ಯ ನಟನೆ, ನಿರ್ದೇಶನದ ‘ಮಾರಿಗೆ ದಾರಿ’ ಸಿನಿಮಾದ ಫಸ್ಟ್​ ಲುಕ್​ ಟೀಸರ್​​ ಬಿಡುಗಡೆ
ಅಗಸ್ತ್ಯ
ಮದನ್​ ಕುಮಾರ್​
|

Updated on: May 28, 2024 | 8:37 PM

Share

ಪ್ರತಿದಿನವೂ ಚಿತ್ರರಂಗ ಹೊಸ ಪ್ರತಿಭೆಗಳನ್ನು ಕೈಬೀಸಿ ಕರೆಯುತ್ತದೆ. ಅಂತಹ ಆಕರ್ಷಣೆ ಈ ಬಣ್ಣದ ಲೋಕಕ್ಕೆ ಇದೆ. ಕನ್ನಡ ಚಿತ್ರರಂಗದಲ್ಲಿ (Kannada Film Industry) ಹೊಸಬರು ಆಗಾಗ ಕಮಾಲ್​ ಮಾಡುತ್ತಾರೆ. ಈಗ ಸ್ಯಾಂಡಲ್​ವುಡ್ ಅಂಗಳಲ್ಲಿ ಇನ್ನೊಂದು ಹೊಸ ಟೀಮ್​ನ ಎಂಟ್ರಿ ಆಗಿದೆ. ‘ಮಾರಿಗೆ ದಾರಿ’ (Maarige Daari) ಎಂದು ಟೈಟಲ್​ ಇಟ್ಟುಕೊಂಡು ಈ ತಂಡದವರು ಸಿನಿಮಾ ಮಾಡಿದ್ದಾರೆ. ರಾಜ್​ ಬಿ. ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾದಲ್ಲಿ ‘ಮಾರಿಗೆ ದಾರಿ..’ ಎಂಬ ಲೈನ್​ ಫೇಮಸ್​ ಆಗಿತ್ತು. ಅದೇ ಈಗ ಹೊಸ ಸಿನಿಮಾಗೆ (Kannada Cinema) ಶೀರ್ಷಿಕೆ ಆಗಿದೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

‘ಮಾರಿಗೆ ದಾರಿ’ ಸಿನಿಮಾಗೆ ಈಗಾಗಲೇ ಶೂಟಿಂಗ್​ ಮುಕ್ತಾಯ ಆಗಿದೆ. ಈಗ ಈ ಚಿತ್ರತಂಡದವರು ಫಸ್ಟ್​ಲುಕ್​ ಟೀಸರ್​ ಬಿಡುಗಡೆ ಮಾಡಿದ್ದಾರೆ. ಟೈಟಲ್ ಹಾಗೂ ಫಸ್ಟ್​ ಲುಕ್ ನೋಡಿದರೆ ಹೊಸತನ ಕಾಣಿಸುತ್ತಿದೆ. ಚಿತ್ರದ ಟೀಸರ್​ನಲ್ಲಿ ತಂಡದವರು ಕಥೆಯ ಎಳೆಯನ್ನು ಬಿಟ್ಟುಕೊಟ್ಟಿಲ್ಲ. ಬದಲಿಗೆ, ಕಥಾನಾಯಕನ ಪಾತ್ರದ ಝಲಕ್​ ನೀಡಲಾಗಿದೆ. ಈ ಸಿನಿಮಾದಲ್ಲಿ ಮಾಸ್​ ಕಥಾಹಂದರ ಇದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಚಂದನ್​ ಶೆಟ್ಟಿ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಟ್ರೇಲರ್​ ಹೇಗಿದೆ ನೋಡಿ..

ಅಗಸ್ತ್ಯ ಅವರು ‘ಮಾರಿಗೆ ದಾರಿ’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಅವರೇ ಹೀರೋ ಆಗಿಯೂ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಕೆಲವು ಲುಕ್​ಗಳು ಫಸ್ಟ್ ಲುಕ್ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಈ ಸಿನಿಮಾದಲ್ಲಿ ಕನ್ನಡದ ಸೊಗಡಿನ ಕಹಾನಿ ಇರಲಿದೆ ಎಂಬ ಝಲಕ್​ ಕಾಣಿಸಿದೆ. ಫಸ್ಟ್​ ಲುಕ್ ಮೂಲಕ ಸಿನಿಪ್ರಿಯರ ಕೌತುಕ ಹೆಚ್ಚಿಸಲಾಗಿದೆ.

‘ಮಾರಿಗೆ ದಾರಿ’ ಸಿನಿಮಾದ ಫಸ್ಟ್​ಲುಕ್​ ಟೀಸರ್​:

‘ಮಾರಿಗೆ ದಾರಿ’ ಚಿತ್ರವು ‘ರಾಧಾ ಫಿಲ್ಮ್ಸ್​’ ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ. ಕನ್ನಡದ ಸಿನಿಪ್ರಿಯರಿಗೆ ಹೊಸತು ಎನಿಸುವ ಕಥೆಯನ್ನು ಈ ಸಿನಿಮಾ ಮೂಲಕ ತೋರಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ. ಟೀಸರ್​ನಲ್ಲಿ ಆ ಸೂಚನೆ ಕಾಣಿಸಿದೆ. ಅಗಸ್ತ್ಯ ಜೊತೆ ಮಹಾಲಕ್ಷ್ಮಿ, ವರ್ಧನ್, ಕಾಕ್ರೋಚ್ ಸುಧಿ, ಪ್ರದೀಪ್ ಪೂಜಾರಿ, ಬಾಲರಾಜ ವಾಡಿ, ಬೆನಕ ನಂಜಪ್ಪ ಮುಂತಾದ ಕಲಾವಿದರು ನಟಿಸಿದ್ದಾರೆ. ‘ಮಾರಿಗೆ ದಾರಿ’ ಸಿನಿಮಾಗೆ ಜಗದೀಶ್ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ಸ್ವಾಮಿನಾಥನ್ ಆರ್.ಕೆ. ಅವರು ಸಂಗೀತ ನಿರ್ದೇಶನ ಮಾಡಿದ್ದು, ಜಗದೀಶ್ ಗೌಡ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮೇಷ, ಕರ್ಕಾಟಕ ರಾಶಿಗೆ ಭಾರಿ ಧನಯೋಗ
ಮೇಷ, ಕರ್ಕಾಟಕ ರಾಶಿಗೆ ಭಾರಿ ಧನಯೋಗ
ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ