‘ನನಗೆ ಪರವಾಗಿಲ್ಲ’; ಗುಟ್ಕಾ ಜಾಹೀರಾತಿನ ಪ್ರಚಾರದ ಬಗ್ಗೆ ಅಜಯ್ ದೇವಗನ್ ಮಾತು

ಅಜಯ್ ದೇವಗನ್ ಜೊತೆಗೆ ಶಾರುಖ್ ಖಾನ್, ಅಕ್ಷಯ್ ಕುಮಾರ್ ಕೂಡ ಪಾನ್ ಮಸಾಲಾ ಪ್ರಚಾರ ಮಾಡಿದ್ದರು. ಆದರೆ ನಂತರ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿ ಈ ಜಾಹೀರಾತಿನಿಂದ ಹಿಂದೆ ಸರಿದಿದ್ದರು. ಈ ಕಾರಣಕ್ಕೆ ಅವರು ಸಾಕಷ್ಟು ಟ್ರೋಲ್ ಆಗಿದ್ದರು.

‘ನನಗೆ ಪರವಾಗಿಲ್ಲ’; ಗುಟ್ಕಾ ಜಾಹೀರಾತಿನ ಪ್ರಚಾರದ ಬಗ್ಗೆ ಅಜಯ್ ದೇವಗನ್ ಮಾತು
ಅಜಯ್-ಶಾರುಖ್
Edited By:

Updated on: Nov 11, 2024 | 7:41 AM

ಬಾಲಿವುಡ್ ನಟರು ಚಲನಚಿತ್ರಗಳ ಜೊತೆಗೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಅವರು ಸಾಕಷ್ಟು ಹಣವನ್ನು ಕೂಡ ಪಡೆಯುತ್ತಾರೆ. ಆದರೆ ಕೆಲವೊಮ್ಮೆ ಈ ಜಾಹೀರಾತುಗಳಿಂದ ಟ್ರೋಲ್‌ಗೆ ಒಳಗಾಗಬೇಕಾಗುತ್ತದೆ. ಪಾನ್​ ಮಸಾಲ ಜಾಹೀರಾತಿನಿಂದ ಸಾಕಷ್ಟು ಟ್ರೋಲ್ ಅನುಭವಿಸಿದ ನಟರಿದ್ದಾರೆ. ನಟ ಅಜಯ್ ದೇವಗನ್ ಅವರ ವಿಮಲ್ ಎಲೈಚಿ ಪಾನ್ ಮಸಾಲಾ ಪ್ರಚಾರಕ್ಕಾಗಿ ಯಾವಾಗಲೂ ಟ್ರೋಲ್ ಆಗುತ್ತಾರೆ. ಜಾಹೀರಾತಿನಲ್ಲಿ ಅವರೊಂದಿಗೆ ನಟರಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಿಂದಾಗಿ ಈ ನಟರು ಯಾವಾಗಲೂ ಟ್ರೋಲ್ ಆಗುತ್ತಾರೆ. ಕೊನೆಗೂ ಈ ವಿಚಾರದಲ್ಲಿ ಅಜಯ್ ದೇವಗನ್ ಮೌನಮುರಿದಿದ್ದಾರೆ.

ಅಜಯ್ ದೇವಗನ್ ಇತ್ತೀಚೆಗೆ ಬಿಡುಗಡೆಯಾದ ‘ಸಿಂಗಮ್ ಎಗೇನ್’ಗಾಗಿ ಹಲವಾರು ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್ ಈ ವಿಷಯದ ಬಗ್ಗೆ ತಮ್ಮ ಮೌನವನ್ನು ಮುರಿದಿದ್ದಾರೆ. ರಣವೀರ್ ಅಲಹಬಾದಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಕಾಣಿಸಿಕೊಂಡರು. ಈ ಬಗ್ಗೆ ಅವರಿಗೆ ಕೇಳಲಾಗಿದೆ.

ರಣವೀರ್ ಅವರು ಟ್ರೋಲಿಂಗ್ ಬಗ್ಗೆ ಅಜಯ್ ದೇವಗನ್ ಅವರನ್ನು ಕೇಳಿದಾಗ, ಅಜಯ್ ದೇವಗನ್ ನೇರವಾಗಿ ಈ ಬಗ್ಗೆ ಹೇಳಿದ್ದರು. ‘ನನಗೆ ಅದು ಪರವಾಗಿಲ್ಲ, ಆ ಬಗ್ಗೆ ಚಿಂತಿಸಲ್ಲ’ ಎಂದರು ಅಜಯ್ ದೇವಗನ್. ಈ ಕಾರಣಕ್ಕೆ ಟ್ರೋಲ್ ಮಾಡಿದರೂ ಅವರು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.  ‘ಈಗ ಎಲ್ಲರೂ ಮೀಮ್‌ಗಳನ್ನು ಆನಂದಿಸುತ್ತಾರೆ’ ಎಂದರು ರೋಹಿತ್.

ಅಜಯ್ ದೇವಗನ್ ಜೊತೆಗೆ ಶಾರುಖ್ ಖಾನ್, ಅಕ್ಷಯ್ ಕುಮಾರ್ ಕೂಡ ಪಾನ್ ಮಸಾಲಾ ಪ್ರಚಾರ ಮಾಡಿದ್ದರು. ಆದರೆ ನಂತರ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿ ಈ ಜಾಹೀರಾತಿನಿಂದ ಹಿಂದೆ ಸರಿದಿದ್ದರು. ಈ ಕಾರಣಕ್ಕೆ ಅವರು ಸಾಕಷ್ಟು ಟ್ರೋಲ್ ಆಗಿದ್ದರು.

ಇದನ್ನೂ ಓದಿ: ಆಕೆಗೆ ನಾನು ಬೇಕು, ಆದ್ರೆ ಅದು ಸಾಧ್ಯವಿಲ್ಲ: ತಬು ಮದುವೆ ಆಗದೇ ಇರಲು ಕಾರಣ ತಿಳಿದ ಅಜಯ್ ದೇವಗನ್

ಅಜಯ್ ದೇವಗನ್ ನಟನೆಯ ‘ಸಿಂಗಮ್ ಅಗೇನ್’ ಮೊದಲ ಎರಡು ದಿನಗಳಲ್ಲಿ 100 ಕೋಟಿ ಗಳಿಸಿತು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ 200 ಕೋಟಿ ರೂಪಾಯಿ ದಾಟಿದೆ. ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.