AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕೆಗೆ ನಾನು ಬೇಕು, ಆದ್ರೆ ಅದು ಸಾಧ್ಯವಿಲ್ಲ: ತಬು ಮದುವೆ ಆಗದೇ ಇರಲು ಕಾರಣ ತಿಳಿದ ಅಜಯ್ ದೇವಗನ್

52 ವರ್ಷದ ಬಾಲಿವುಡ್ ನಟಿ ತಬು ಅವರು ಇನ್ನೂ ಮದುವೆಯಾಗಿಲ್ಲ. ಅವರ ಸ್ನೇಹಿತ ಅಜಯ್ ದೇವಗನ್ ಅವರು ಒಂದು ಹಳೆಯ ಸಂದರ್ಶನದಲ್ಲಿ ತಬು ಮದುವೆಯಾಗದಿರುವ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದ ವಿಡಿಯೋ ತುಣುಕು ಈಗ ವೈರಲ್ ಆಗಿದೆ. ‘ತಬುಗೆ ನಾನೇ ಬೇಕು’ ಎಂದು ಹೇಳಿ ಅಜಯ್ ನಗುತ್ತಾರೆ. ಆದರೆ ಇಡೀ ಪ್ರಪಂಚದಲ್ಲಿ ತನ್ನಂತೆ ಬೇರೆ ಯಾರೂ ಇಲ್ಲ ಎಂದು ಕೂಡ ಅವರು ಹೇಳುತ್ತಾರೆ.

ಆಕೆಗೆ ನಾನು ಬೇಕು, ಆದ್ರೆ ಅದು ಸಾಧ್ಯವಿಲ್ಲ: ತಬು ಮದುವೆ ಆಗದೇ ಇರಲು ಕಾರಣ ತಿಳಿದ ಅಜಯ್ ದೇವಗನ್
ಅಜಯ್ ದೇವಗನ್, ತಬು
ಮದನ್​ ಕುಮಾರ್​
|

Updated on: Oct 25, 2024 | 3:21 PM

Share

ಬಾಲಿವುಡ್ ನಟಿ ತಬು ಅವರಿಗೆ ಈಗ 52 ವರ್ಷ. ಹಾಗಿದ್ದರೂ ಕೂಡ ಅವರು ಮದುವೆ ಆಗಿಲ್ಲ. ಬಣ್ಣದ ಲೋಕದಲ್ಲಿ ಅವರಿಗೆ ತುಂಬ ಬೇಡಿಕೆ ಇದೆ. ಹಲವಾರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ತಬು ಅವರಿಗೆ ಆಪ್ತತೆ ಇದೆ. ಅನೇಕ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದ್ದಾರೆ. ಅಷ್ಟಕ್ಕೂ ತಬು ಅವರು ಇಷ್ಟ ವರ್ಷಗಳು ಕಳೆದರೂ ಮದುವೆ ಆಗದೇ ಇರಲು ಕಾರಣ ಏನು? ಆ ಬಗ್ಗೆ ಹಳೆಯ ಸಂದರ್ಶನವೊಂದರಲ್ಲಿ ಅಜಯ್ ದೇವಗನ್ ಅವರು ಮಾತನಾಡಿದ್ದರು. ಆ ಸಂದರ್ಶನದ ವಿಡಿಯೋ ತುಣುಕು ಈಗ ಮತ್ತೆ ವೈರಲ್ ಆಗುತ್ತಿದೆ.

‘ದೇ ದೇ ಪ್ಯಾರ್ ದೇ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ತಬು ಮತ್ತು ಅಜಯ್ ದೇವಗನ್ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು. ಆ ಚಿತ್ರದ ಪ್ರಚಾರದ ವೇಳೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟಬು ಮದುವೆ ಬಗ್ಗೆ ಪ್ರಸ್ತಾಪ ಆಯಿತು. ತಬು ಯಾಕೆ ಇಂದಿಗೂ ಸಿಂಗಲ್ ಆಗಿದ್ದಾರೆ ಎಂಬ ವಿಷಯಕ್ಕೆ ಅಜಯ್ ದೇವಗನ್ ಅವರು ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಅಜಯ್ ದೇವಗನ್​ಗೆ ನಮಸ್ಕಾರ ಮಾಡಿಲ್ಲ ಅಂತ ಹಿರಿಯ ನಟನನ್ನೇ ಸಿನಿಮಾದಿಂದ ತೆಗೆದ ನಿರ್ಮಾಪಕ

‘ತಬು ಮದುವೆ ಆಗಬೇಕು ಅಂದರೆ ನೀವು ಹುಡುಗನನ್ನು ಹೇಗೆ ಹುಡುಕುತ್ತೀರಿ? ತಬುಗೆ ಯಾವ ರೀತಿಯ ಹುಡುಗ ಬೇಕು ಅಂತ ನನಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು ಉತ್ತರಿಸಿದ್ದೆ. ತಬುಗೆ ನಾನು ಬೇಕು. ಆದರೆ ಆಕೆಗೆ ನಾನು ಸಿಗುವುದಿಲ್ಲ’ ಎಂದು ಹೇಳಿ ಅಜಯ್ ದೇವಗನ್ ಅವರು ನಕ್ಕಿದ್ದರು. ಅವರ ಮಾತು ಕೇಳಿ ತಬು ಕೂಡ ನಗುನಗುತ್ತಲೇ ಹುಸಿ ಕೋಪ ಮಾಡಿಕೊಂಡರು.

View this post on Instagram

A post shared by ehsas (@eh_sas12)

ಅಜಯ್​ ದೇವಗನ್ ಅವರು ತಮ್ಮ ಮಾತಿಗೆ ಕೂಡಲೇ ಸ್ಪಷ್ಟನೆ ನೀಡಿದರು. ‘ನಾನು ಬೇಕು ಅಂದರೆ, ನನ್ನ ರೀತಿಯ ಹುಡುಗ ಬೇಕು ಅಂತ. ಆದರೆ ಇಡೀ ಪ್ರಪಂಚದಲ್ಲಿ ನನ್ನ ರೀತಿ ಬೇರೆ ಯಾರೂ ಇಲ್ಲ’ ಎಂದು ಅಜಯ್​ ದೇವಗನ್ ಹೇಳಿದರು. ‘ನೀವು ಹೇಳಿದ್ದು ನನಗೆ ಅರ್ಥ ಆಯ್ತು’ ಎನ್ನುತ್ತಾ ಅಜಯ್ ದೇವಗನ್ ಕೈಗೆ ತಬು ಕಿಸ್ ಮಾಡಿದರು. ತಬು ಮತ್ತು ಅಜಯ್ ದೇವಗನ್ ಅವರು ಫ್ಯಾಮಿಲಿ ಫ್ರೆಂಡ್ಸ್​ ಕೂಡ ಹೌದು. ಅವರಿಬ್ಬರ ಒಡನಾಟ ಹಲವು ವರ್ಷಗಳದ್ದು. ಸಂದರ್ಶನದಲ್ಲಿ ಅವರಿಬ್ಬರ ನಡುವೆ ನಡೆದ ಮಾತುಕಥೆ ಕೇವಲ ತಮಾಷೆಯಾಗಿತ್ತು. ಆದರೆ ತಬು ಸಿಂಗಲ್ ಆಗಿ ಉಳಿದುಕೊಳ್ಳಲು ಕಾರಣ ಏನು ಎಂಬುದು ಕಡೆಗೂ ಬಹಿರಂಗ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ