‘ನಾನು ಸಾವನ್ನು ಮಾರಲ್ಲ’; ಅಜಯ್ ದೇವಗನ್, ಶಾರುಖ್​ಗೆ ಟಾಂಟ್ ಕೊಟ್ಟ ಜಾನ್ ಅಬ್ರಹಾಂ

ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುವವರು. ಇವರು ಪಾನ್ ಮಸಾಲ ಸೇವನೆ ಮಾಡುವುದಿಲ್ಲ. ಆದಾಗ್ಯೂ ವಿಮಲ್ ಪ್ರಚಾರದಲ್ಲಿ ಇವರು ಭಾಗಿ ಆಗುತ್ತಿದ್ದಾರೆ. ಹೀರೋಗಳು ಪಾನ್ ಮಸಾಲಾ ಜಾಹೀರಾತಲ್ಲಿ ಭಾಗಿ ಆಗೋದು ಅವರಿಗೆ ಇಷ್ಟ ಇಲ್ಲ.

‘ನಾನು ಸಾವನ್ನು ಮಾರಲ್ಲ’; ಅಜಯ್ ದೇವಗನ್, ಶಾರುಖ್​ಗೆ ಟಾಂಟ್ ಕೊಟ್ಟ ಜಾನ್ ಅಬ್ರಹಾಂ
ಜಾನ್​ ಅಬ್ರಹಾಂ-ಶಾರುಖ್,ಅಜಯ್ ದೇವಗನ್
Follow us
ರಾಜೇಶ್ ದುಗ್ಗುಮನೆ
|

Updated on: Aug 10, 2024 | 11:04 AM

ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದವರು. ಅವರು ಯಾವಾಗಲೂ ಸಸ್ಯಾಹಾರ ಸೇವನೆ ಮಾಡುತ್ತಾರೆ. ಅವರು ಸಿಹಿ ಪದಾರ್ಥ, ತಂಪು ಪಾನೀಯಗಳಿಂದಲೂ ದೂರವೇ ಇದ್ದಾರೆ. ಅವರು ತಂಬಾಕು ಬ್ರ್ಯಾಂಡ್​ಗಳ ಪ್ರಚಾರದಿಂದಲೂ ದೂರ ಇದ್ದಾರೆ. ಅವರು ಇತ್ತೀಚೆಗೆ ರಣವೀರ್ ಅಲಹಾಬಾದಿಯಾಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಜಾನ್ ಅಬ್ರಹಾಂ ಪಾನ್ ಮಸಾಲ ಬ್ರ್ಯಾಂಡ್​ನ ಪ್ರಚಾರ ಮಾಡುವವರ ವಿರುದ್ಧ ಟೀಕೆ ಹೊರಹಾಕಿದ್ದಾರೆ.

ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಟೈಗರ್ ಶ್ರಾಫ್ ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುವವರು. ಇವರು ಪಾನ್ ಮಸಾಲ ಸೇವನೆ ಮಾಡುವುದಿಲ್ಲ. ಆದಾಗ್ಯೂ ವಿಮಲ್ ಪ್ರಚಾರದಲ್ಲಿ ಇವರು ಭಾಗಿ ಆಗುತ್ತಿದ್ದಾರೆ. ಇದನ್ನು ಜಾನ್ ಅಬ್ರಹಾಂ ಟೀಕಿಸಿದ್ದಾರೆ. ನೇರವಾಗಿ ಹೆಸರನ್ನು ಹೇಳದೆ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಪಾನ್ ಮಸಾಲ ಮಾರುವುದನ್ನು ಸಾವನ್ನು ಮಾರಾಟ ಮಾಡಿದಂತೆ’ ಎಂದು ಅವರು ಹೇಳಿದ್ದಾರೆ.

‘ಜನರು ಫಿಟ್ನೆಸ್ ಬಗ್ಗೆ ಮಾತನಾಡುತ್ತಾರೆ. ಆ ಬಳಿಕ ಅದೇ ವ್ಯಕ್ತಿಗಳು ಪಾನ್ ಮಸಾಲ ಪ್ರಚಾರ ಮಾಡುತ್ತಾರೆ. ನಾನು ಇಂಡಸ್ಟ್ರಿಯ ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಅವರನ್ನು ಅಗೌರವಿಸುತ್ತಿಲ್ಲ. ಒಂದು ವಿಚಾರವನ್ನು ನಾನು ಸ್ಪಷ್ಟಪಡಿಸಬೇಕು. ನಾನು ನನ್ನ ಬಗ್ಗೆ ಮಾತನಾಡುತ್ತೇನೆ. ನಾನು ಸಾವನ್ನು ಮಾರಾಟ ಮಾಡಲ್ಲ. ಇದಕ್ಕೆ ನಾನು ಹಾಕಿಕೊಂಡ ಪ್ರಿನ್ಸಿಪಲ್ ಕಾರಣ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಶಾರುಖ್ ಖಾನ್ ಬಳಿ ಇದೆ ನೂರಾರು ಅವಾರ್ಡ್ಸ್​; ಇದರಲ್ಲಿ ಖರೀದಿಸಿದ್ದೆಷ್ಟು?

ಪ್ರತಿ ವರ್ಷ ತಂಬಾಕು ಇಂಡಸ್ಟ್ರಿ 45 ಸಾವಿರ ಕೋಟಿ ರೂಪಾಯಿ ಬಿಸ್ನೆಸ್​ಮಾಡುತ್ತದೆ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆ. ಇದೇ ಕಾರಣಕ್ಕೆ ಪಾನ್ ಮಸಾಲ ಕಂಪನಿಗಳಿಂದ ಸೆಲೆಬ್ರಿಟಿಗಳಿಗೆ ದೊಡ್ಡ ಮಟ್ಟದಲ್ಲಿ ಹಣ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

ಜಾನ್ ಅಬ್ರಹಾಂ ಅವರು ‘ವೇದ’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ. ಜಾತಿ ವಿಚಾರಗಳ ಬಗ್ಗೆ ಈ ಸಿನಿಮಾ ಇದೆ. ಈ ಚಿತ್ರದ ಜೊತೆಗೆ ‘ಸ್ತ್ರೀ 2’ ಸೇರಿ ಹಲವು ಚಿತ್ರಗಳು ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.