AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುನಿಲ್ ಶೆಟ್ಟಿ ಆಸ್ತಿ ಮೌಲ್ಯ, ಹೂಡಿಕೆ ಮತ್ತು ಐಶಾರಾಮಿ ಕಾರು ಸಂಗ್ರಹದ ಮಾಹಿತಿ

ಮಂಗಳೂರಿನ ಮುಲ್ಕಿಯಲ್ಲಿ ಜನಿಸಿ ಹಲವು ದಶಕಗಳಿಂದಲು ಬಾಲಿವುಡ್​ನಲ್ಲಿ ಸಕ್ರಿಯರಾಗಿರುವ ಸುನಿಲ್ ಶೆಟ್ಟಿ ಆಸ್ತಿ ಮೌಲ್ಯ ಎಷ್ಟು? ಅವರ ಬಳಿ ಇರುವ ಐಶಾರಾಮಿ ಕಾರುಗಳು ಯಾವುವು? ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ಇಲ್ಲಿದೆ ಮಾಹಿತಿ.

ಸುನಿಲ್ ಶೆಟ್ಟಿ ಆಸ್ತಿ ಮೌಲ್ಯ, ಹೂಡಿಕೆ ಮತ್ತು ಐಶಾರಾಮಿ ಕಾರು ಸಂಗ್ರಹದ ಮಾಹಿತಿ
Follow us
ಮಂಜುನಾಥ ಸಿ.
|

Updated on: Aug 11, 2024 | 7:29 AM

ಮಂಗಳೂರಿನ ಮುಲ್ಕಿಯಲ್ಲಿ 1962, ಆಗಸ್ಟ್ 11 ರಂದು ಜನಿಸಿದ ಸುನಿಲ್ ಶೆಟ್ಟಿ ಹಲವು ದಶಗಳಿಂದಲೂ ಬಾಲಿವುಡ್​ನಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. ಈಗ ಸುನಿಲ್ ಶೆಟ್ಟಿಗೆ 62 ವರ್ಷ ವಯಸ್ಸು ಆದರೆ ಈಗಲೂ ಸಹ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಫಿಟ್​ನೆಸ್. ಚಿತ್ರರಂಗಕ್ಕೆ ಕಾಲಿರಿಸಿದಾಗಿನಿಂದಲೂ ಫಿಟ್​ನೆಸ್​ ಮೇಲೆ ಗಮನ ಹರಿಸಿರುವ ಸುನಿಲ್ ಶೆಟ್ಟಿ ಇಂದಿಗೂ ಜಿಮ್​ ಅನ್ನು ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ದಶಕಗಳ ಕಾಲ ಬಾಲಿವುಡ್​ನಲ್ಲಿ ಸಕ್ರಿಯರಾಗಿರುವ ಸುನಿಲ್ ಶೆಟ್ಟಿ, ಒಂದು ಸಮಯದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್​ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಅಂದಹಾಗೆ ಸುನಿಲ್ ಶೆಟ್ಟಿಯ ಈಗಿನ ಆಸ್ತಿ ಮೌಲ್ಯ ಎಷ್ಟು? ಅವರು ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಶೆಟ್ಟಿ ಅವರ ಬಳಿ ಇರುವ ಸಂಗ್ರಹದಲ್ಲಿ ಎಂಥಹಾ ಐಶಾರಾಮಿ ಕಾರುಗಳಿವೆ? ಇಲ್ಲಿದೆ ಇಣುಕು ನೋಟ….

90ರ ದಶಕದಲ್ಲಿ ಸುನಿಲ್ ಶೆಟ್ಟಿ ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟ. ಒಂದು ಸಮಯದಲ್ಲಿ ಆಕ್ಷನ್ ಸಿನಿಮಾಗಳ ಬಿರುಗಾಳಿ ಬೀಸಿತ್ತು. ಆಗ ಸುನಿಲ್ ಶೆಟ್ಟಿ, ಅಕ್ಷಯ್ ಕುಮಾರ್, ಅಜಯ್ ದೇವಗನ್ ಅಂಥಹಾ ನಟರಿಗೆ ಬೇಡಿಕೆ ಹುಟ್ಟಿತ್ತು. ಆ ಸಮಯದಲ್ಲಿ ಶಾರುಖ್, ಸಲ್ಮಾನ್​ಗಿಂತಲೂ ಶೆಟ್ಟಿ, ಅಕ್ಷಯ್, ಅಜಯ್ ಅವರಿಗೆ ಸಂಭಾವನೆ ಹೆಚ್ಚಿತ್ತು. ಮಂಗಳೂರು ಮೂಲಕ ಸುನಿಲ್ ಶೆಟ್ಟಿ ಮೊದಲಿನಿಂದಲೂ ಜಾಣ ಹೂಡಿಕೆದಾರ. ಅವರೇ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಅನವಶ್ಯಕವಾಗಿ ಖರ್ಚು ಮಾಡುವುದು ಅವರಿಗೆ ಮೊದಲಿನಿಂದಲೂ ಹಿಡಿಸುತ್ತಿರಲಿಲ್ಲ.

ಇದನ್ನೂ ಓದಿ:IPL ಮುಗಿಯೋವರೆಗೂ ನೀ ನನ್ನ ಮಗನೇ ಅಲ್ಲ: ಸುನಿಲ್ ಶೆಟ್ಟಿ-ಕೆಎಲ್ ರಾಹುಲ್ ವಿಡಿಯೋ ವೈರಲ್

ಸುನಿಲ್ ಶೆಟ್ಟಿ ಅವರ ಮೆಚ್ಚಿನ ಹೂಡಿಕೆ ಕ್ಷೇತ್ರ ರಿಯಲ್ ಎಸ್ಟೇಟ್. ಇದರಿಂದಾಗಿ ದೊಡ್ಡ ಲಾಭವನ್ನು ಸಹ ಸುನಿಲ್ ಶೆಟ್ಟಿ ಗಳಿಸಿದ್ದಾರೆ. ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಹಾಗೂ ಕೆಎಲ್ ರಾಹುಲ್ ವಿವಾಹವಾದ ಫಾರಂ ಹೌಸ್ ನೆನಪಿದೆಯೇ? ಅದು ಸುನಿಲ್ ಶೆಟ್ಟಿ ಅವರದ್ದೆ. ಈ ಫಾರಂ ಹೌಸ್ ಮುಂಬೈನ ಹೊರವಲಯದಲ್ಲಿದ್ದು, ಫಾರಂ ಹೌಸ್​ನ ಮೌಲ್ಯ ಸುಮಾರು 100 ಕೋಟಿ ಎನ್ನಲಾಗುತ್ತದೆ. ಇದರ ಹೊರತಾಗಿ ಮುಂಬೈನಲ್ಲಿ ಕೆಲವು ಅಪಾರ್ಟ್​ಮೆಂಟ್​ಗಳ ಮೇಲೂ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಕೆಲ ಫ್ಲ್ಯಾಟ್​ಗಳನ್ನು ಸಹ ಶೆಟ್ಟಿ ಖರೀದಿ ಮಾಡಿದ್ದರು. ಅದರಲ್ಲಿ ಒಂದನ್ನು ಕೆಎಲ್ ರಾಹುಲ್ ಹಾಗೂ ಅಥಿಯಾಗೆ ನೀಡಿದರು. ಕರ್ನಾಟಕದಲ್ಲಿಯೂ ಸಹ ಸುನಿಲ್ ಶೆಟ್ಟಿ ರಿಯಲ್ ಎಸ್ಟೇಟ್​ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತದೆ.

ಸುನಿಲ್ ಶೆಟ್ಟಿ ಅವರು, ಪಾಪಾ ಕಾರ್ನ್ ಮೀಡಿಯಾ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದರು. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸುನಿಲ್ ಶೆಟ್ಟಿ ತಮ್ಮ ಪುತ್ರನ ಸಿನಿಮಾವನ್ನು ಇದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಇನ್ನು ಶೆಟ್ಟಿ ಅವರು ಫಿಟ್​ನೆಸ್​ಗೆ ಸಂಬಂಧಿಸಿದ ಕೆಲವು ಸ್ಟಾರ್ಟ್​ ಅಪ್​ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಶೆಟ್ಟಿ ಅವರದ್ದು ಮುಂಬೈನಲ್ಲಿ ಕೆಲವು ಕಡೆಗಳಲ್ಲಿ ಜಿಮ್ ಸಹ ಇದೆ.

ಇನ್ನು ಕಾರುಗಳ ಸಂಗ್ರಹಕ್ಕೆ ಬಂದರೆ, ಸುನಿಲ್ ಶೆಟ್ಟಿ ಅವರಿಗೆ ಬಹಳ ಕಾರಿನ ಹುಚ್ಚಿಲ್ಲವಂತೆ. ಆದರೆ ಕಂಫರ್ಟ್​ ನೀಡುವ, ಐಶಾರಾಮಿ ಫೀಲ್ ನೀಡುವ ಕೆಲವು ಕಾರುಗಳನ್ನು ಶೆಟ್ಟಿ ಹೊಂದಿದ್ದಾರೆ. ಶೆಟ್ಟರ ಬಳಿ ಮರ್ಸಿಡೀಸ್ ಬೆಂಜ್ ಜಿಎಲ್​ಎಸ್, ಬಿಎಂಡಬ್ಲು ಎಕ್ಸ್​5, ಹಮ್ಮರ್ ಎಚ್​2, ರೇಂಜ್ ರೋವರ್ ವೋಗ್, ಜೀಪ್ ವ್ರಾಂಗ್ಲರ್ ಇನ್ನೂ ಕೆಲವು ದುಬಾರಿ ಕಾರುಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ