ಯಶ್ ಅನ್ನು ‘ಬಾಸ್’ ಎಂದ ಬಾಲಿವುಡ್ ನಟ, ‘ಟಾಕ್ಸಿಕ್’ ಬಗ್ಗೆ ಮಾತು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ಐವರು ನಾಯಕಿಯರು ನಟಿಸಿದ್ದರು. ಜೊತೆಗೆ ಕೆಲವು ಪ್ರತಿಭಾವಂತ ನಟರೂ ಸಹ ಇದ್ದರು. ಅದರಲ್ಲೂ ಸುದೇವ್ ನಾಯರ್ ಮತ್ತು ಅಕ್ಷಯ್ ಒಬೆರಾಯ್ ನಿರ್ವಹಿಸಿದ್ದ ಪಾತ್ರಗಳು ಗಮನ ಸೆಳೆದಿದ್ದವು. ಇದೀಗ ನಟ ಅಕ್ಷಯ್ ಒಬೆರಾಯ್ ಅವರು ನಟ ಯಶ್ ಬಗ್ಗೆ, ನಿರ್ದೇಶಕ ಗೀತೂ ಮೋಹನ್​​ದಾಸ್ ಬಗ್ಗೆ ಮತ್ತು ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಯಶ್ ಅನ್ನು ‘ಬಾಸ್’ ಎಂದ ಬಾಲಿವುಡ್ ನಟ, ‘ಟಾಕ್ಸಿಕ್’ ಬಗ್ಗೆ ಮಾತು
Akshay Oberoi Toxic

Updated on: Sep 05, 2026 | 10:01 PM

ಮುಖ್ಯಾಂಶಗಳು

  • ಯಶ್ ಈಗ ಗ್ಲೋಬಲ್ ಸ್ಟಾರ್ ಆಗಿದ್ದಾರೆ
  • ಟಾಕ್ಸಿಕ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ
  • ಯಶ್ ಅವರನ್ನು ಬಾಲಿವುಡ್ ಹೀರೋ ‘ಬಾಸ್’ ಎಂದಿದ್ದಾರೆ.

ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಾಗುತ್ತಾ ಬರುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಸಿನಿಮಾದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ಸಿನಿಮಾ ಅನ್ನು ಬಹಳ ಚೆನ್ನಾಗಿದೆ ಎಂದರೆ ಕೆಲವರು ಸಿನಿಮಾದ ಬಗ್ಗೆ ಭರಪೂರ ಟೀಕೆಗಳನ್ನು ಸಹ ಮಾಡಿದ್ದಾರೆ. ಏನೇ ಆದರು ಸಿನಿಮಾ ಉತ್ತಮ ಗಳಿಕೆಯನ್ನೇ ಬಾಕ್ಸ್ ಆಫೀಸ್​​ನಲ್ಲಿ ಮಾಡಿದೆ. ಸಿನಿಮಾನಲ್ಲಿ ದೊಡ್ಡ ತಾರಾಗಣವೇ ಇತ್ತು, ಅದರಲ್ಲೂ ಐವರು ನಟಿಯರನ್ನು ಗೀತೂ ಮೋಹನ್​​ದಾಸ್ ಹಾಕಿಕೊಂಡಿದ್ದರು. ಸಿನಿಮಾನಲ್ಲಿ ಯಶ್ ಮತ್ತು ನಾಯಕಿಯರ ಜೊತೆಗೆ ಯಶ್ ಅವರ ಆಪ್ತನ ಪಾತ್ರದಲ್ಲಿ ನಟಿಸಿದ್ದ ಸುದೇವ್ ನಾಯರ್ ಮತ್ತು ಅಕ್ಷಯ್ ಒಬೆರಾಯ್ ಪಾತ್ರಗಳು ಗಮನ ಸೆಳೆದಿವೆ.

ಬಾಲಿವುಡ್​ ನಟರಾಗಿರುವ ಅಕ್ಷಯ್ ಒಬೆರಾಯ್, ‘ಟಾಕ್ಸಿಕ್’ ಸಿನಿಮಾನಲ್ಲಿ ವಿಲನ್ ಶೇಡಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅವರು ಎಲಿಜಬೆತ್ (ಹುಮಾ ಖುರೇಷಿ) ಪಾತ್ರದ ಸಹೋದರನ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರ ಕತೆಗೆ ಪರೋಕ್ಷ ತಿರುವನ್ನು ಸಹ ನೀಡುವ ಪಾತ್ರ ಆಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಕ್ಷಯ್ ಒಬೆರಾಯ್, ಯಶ್ ಹಾಗೂ ಗೀತೂ ಮೋಹನ್​​ದಾಸ್ ಜೊತೆಗೆ ನಟಿಸಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಬಗ್ಗೆ ಮಾತನಾಡಿರುವ ಅಕ್ಷಯ್ ಒಬೆರಾಯ್, ‘ಇದು (ಟಾಕ್ಸಿಕ್) ತಮ್ಮಲ್ಲಿ ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸಿದ ಒಂದು ಪರಿವರ್ತನಾಕಾರಿ ಪ್ರಯಾಣ ಎಂದು ಅವರು ಬಣ್ಣಿಸಿದರು. ನನಗೆ ‘ಟಾಕ್ಸಿಕ್’ ಸಿನಿಮಾ ತುಂಬಾ ಮುಖ್ಯವಾದದ್ದು. ನನ್ನ ವೈಯಕ್ತಿಕ ವೃತ್ತಿಯ ಭವಿಷ್ಯದ ಬಗ್ಗೆ ನಾನು ಯೋಚಿಸುವ ವಿಧಾನವನ್ನು ಇದು ಬದಲಿಸಿದೆ ಮತ್ತು ದೊಡ್ಡದಾಗಿ ಕನಸು ಕಾಣಲು ಹಾಗೂ ದೊಡ್ಡದಾಗಿ ಯೋಚಿಸಲು ಇದು ನನಗೆ ಕಲಿಸಿದೆ. ಕೆಲವೊಮ್ಮೆ ನಾವು ನಮ್ಮದೇ ಆದ ಭಯ ಮತ್ತು ಮಿತಿಗಳಿಂದಾಗಿ ಸಿಲುಕಿಕೊಳ್ಳುತ್ತೇವೆ. ‘ಬಾಸ್’ (ಯಶ್) ಮತ್ತು ಗೀತು ಅವರೊಂದಿಗೆ ಕೆಲಸ ಮಾಡುವುದರಿಂದ ಯಾವುದೇ ಮಿತಿಗಳಿಲ್ಲ ಎಂಬುದು ನನಗೆ ತಿಳಿಯಿತು’ ಎಂದಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಇಂಗ್ಲಿಷ್ ವರ್ಷನ್‌ಗೆ ಶಾಕ್; ಮೊದಲ ದಿನ ಮಾರಾಟವಾಗಿದ್ದು ಕೇವಲ 450 ಟಿಕೆಟ್

‘ಟಾಕ್ಸಿಕ್’ ಭಾಗವಾಗುವ ಮೂಲಕ ದೊಡ್ಡ ಪಾಠವನ್ನು ಕಲಿತಿದ್ದು ನನ್ನೊಂದಿಗೆ ಎಂದೆಂದಿಗೂ ಉಳಿಯುತ್ತದೆ, ವಿಶೇಷವಾಗಿ ಇನ್ನುಮುಂದಿನ ವರ್ಷಗಳಲ್ಲಿ ನಾನು ‘ಟಾಕ್ಸಿಕ್’ ಚಿತ್ರದ ಬಗ್ಗೆ ಯೋಚಿಸಿದಾಗ ಆ ಪಾಠ ನೆನಪಾಗುತ್ತದೆ. ‘ಟಾಕ್ಸಿಕ್’ ನನಗೆ ಕೇವಲ ಒಂದು ಸಿನಿಮಾವಲ್ಲ, ಬದಲಿಗೆ ಅದೊಂದು ಸಂಪೂರ್ಣ ಅನುಭವ ಆಗಿತ್ತು. ಈ ಚಿತ್ರವನ್ನು ಮಾಡುವಾಗ ನಾನು ನನ್ನ ಇಡೀ ಜೀವನವನ್ನೇ ಜೀವಿಸಿದ ಅನುಭವವಾಯಿತು, ಏಕೆಂದರೆ ಇದು ನನ್ನ ಸ್ವಂತ ವೃತ್ತಿಜೀವನವನ್ನು ನಾನು ನೋಡುವ ದೃಷ್ಟಿಕೋನವನ್ನೇ ಬದಲಿಸಿತು’ ಎಂದಿದ್ದಾರೆ ಅಕ್ಷಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us