AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ

‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ

ರಾಜೇಶ್ ದುಗ್ಗುಮನೆ
|

Updated on:Sep 05, 2026 | 9:38 AM

Share

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗಾಗಿ ನಡೆಸಿದ ಕಠಿಣ ದೈಹಿಕ ತರಬೇತಿಯ ವೀಡಿಯೋ ವೈರಲ್ ಆಗಿದೆ. ಜಿಮ್‌ನಲ್ಲಿ ತರಬೇತುದಾರರ ಮಾರ್ಗದರ್ಶನದಲ್ಲಿ ಯಶ್ ಅವರು ತಮ್ಮ ಶರೀರವನ್ನು ಅತ್ಯಂತ ಶಕ್ತಿಶಾಲಿಯಾಗಿ ರೂಪಿಸಿಕೊಂಡಿದ್ದು, ಅವರ ರಗಡ್ ಲುಕ್ ಅಭಿಮಾನಿಗಳನ್ನು ಸಖತ್ ಆಕರ್ಷಿಸುತ್ತಿದೆ .

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರಕ್ಕಾಗಿ ಯಶ್ ಮಾಡಿರೋ ವರ್ಕೌಟ್ ಹಾಗೂ ಕಠಿಣ ದೈಹಿಕ ತರಬೇತಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್‌ನಲ್ಲಿ ಯಶ್ ನಡೆಸಿದ ಬಿಡುವಿಲ್ಲದ ತರಬೇತಿಯು ಅವರ ಶ್ರಮವನ್ನು ತೋರಿಸುತ್ತದೆ. ಭಾರವಾದ ತೂಕ ಎತ್ತುವುದು ಮತ್ತು ವಿವಿಧ ಮಾದರಿಯ ವರ್ಕೌಟ್‌ಗಳನ್ನು ಮಾಡಿ ಅವರು ತಮ್ಮ ದೇಹವನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಪಾನಿಪುರಿ ಕಿಟ್ಟಿ ಮಾರ್ಗದರ್ಶನದಲ್ಲಿ ಯಶ್ ಅವರು ಟ್ರೇನ್ ಆಗಿದ್ದರು. ಸೆಟ್‌ನಲ್ಲಿ ಹಾಗೂ ಶೂಟಿಂಗ್ ವೇಳೆಯೂ ಯಶ್ ಅವರು ವರ್ಕೌಟ್ ಮಾಡುತ್ತಿದ್ದರು. ಯಶ್ ಅವರ ಈ ಕಠಿಣ ಪರಿಶ್ರಮಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Sep 05, 2026 09:38 AM

Follow Us