AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳ ಸಂಗಾತಿಯ ಪರಿಚಯಿಸಿದ ಡಾಲಿ ಧನಂಜಯ್; ಹುಡುಗಿ ಯಾರು?

ಪ್ರಸಿದ್ಧ ಕನ್ನಡ ನಟ ಡಾಲಿ ಧನಂಜಯ್ ಅವರು ಧನ್ಯತಾ ಎಂಬ ವೈದ್ಯೆಯನ್ನು ವಿವಾಹವಾಗುತ್ತಿದ್ದಾರೆ. ಫೆಬ್ರುವರಿ 16 ರಂದು ಮೈಸೂರಿನಲ್ಲಿ ಅದ್ದೂರಿ ಮದುವೆ ನಡೆಯಲಿದೆ. ಧನ್ಯತಾ ಚಿತ್ರದುರ್ಗ ಮೂಲದವರು ಮತ್ತು ಮೈಸೂರಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಬಾಳ ಸಂಗಾತಿಯ ಪರಿಚಯಿಸಿದ ಡಾಲಿ ಧನಂಜಯ್; ಹುಡುಗಿ ಯಾರು?
ಧನಂಜಯ್ ಜೋಡಿ
ರಾಜೇಶ್ ದುಗ್ಗುಮನೆ
|

Updated on:Nov 01, 2024 | 9:08 AM

Share

ಡಾಲಿ ಧನಂಜಯ್ ಅವರ ಕೈ ಹಿಡಿಯೋ ಹುಡುಗಿ ಯಾರು ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅವರ ಬಾಳ ಸಂಗಾತಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ತಮ್ಮ ಬಾಳ ಸಂಗಾತಿಯನ್ನು ಧನಂಜಯ್ ಅವರು ಪರಿಚಯಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಧನಂಜಯ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಫೆಬ್ರವರಿ 16ರಂದು ಮದುವೆ ನಡೆಯಲಿದೆ. ವಿಶೇಷ ಎಂದರೆ ಧನಂಜಯ್ ಮದುವೆ ಆಗುತ್ತಿರುವ ಹುಡುಗಿ ಚಿತ್ರರಂಗದವರಲ್ಲ.

ಧನಂಜಯ್ ಅವರ ಮದುವೆ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆಗಳು ಎದುರಾಗುತ್ತಿದ್ದವು. ಮದುವೆ ಯಾವಾಗ ಎಂದು ಅವರನ್ನು ಕೇಳಲಾಗುತ್ತಿತ್ತು. ಇದೀಗ ಆ ಪ್ರಶ್ನೆಗೆ ಡಾಲಿ ಧನಂಜಯ ಕಡೆಯಿಂದ ಉತ್ತರ ಸಿಕ್ಕಿದೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋನ ಅವರು ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ್ ಅವರು ವೈದ್ಯೆಯನ್ನು ಕೈ ಹಿಡಿಯುತ್ತಿದ್ದಾರೆ. ಹೌದು ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಸ್ತ್ರೀರೋಗ ತಜ್ಞೆ ಆಗಿರುವ ಧನ್ಯತಾ, ಧನಂಜಯ್​ಗೆ ಜೊತೆಯಾಗುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಮಧ್ಯೆ ಅನೇಕ ವರ್ಷಗಳ ಪರಿಚಯ ಇದೆ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.

ಧನ್ಯತಾ ಚಿತ್ರದುರ್ಗ ಮೂಲದವರು. ಅವರು ಅಪ್ಪಟ ಕನ್ನಡತಿ. ಇವರು ಓದಿದ್ದು ಮೈಸೂರಿನಲ್ಲಿ. ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಧನಂಜಯ್ ಅವರು ಭಾವಿ ಪತ್ನಿಗೆ ಸುಂದರ ಸಾಲುಗಳನ್ನು ಕೂಡ ಬರೆದಿದ್ದಾರೆ. ಇಬ್ಬರ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಪ್ರೀತಿಯ ಶುಭಾಶಯ ಹರಿದುಬರುತ್ತಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಮೊದಲ ಸಂಭಾವನೆ ಎಷ್ಟು? ಇಲ್ಲಿದೆ ವಿವರ..

ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ವಿವಾಹ ನೆರವೇರಲಿದೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗದವರು, ರಾಜಕೀಯ ಕ್ಷೇತ್ರದವರು ಸೇರಿ ಅನೇಕ ಗಣ್ಯರು ಹಾಜರಾಗಲಿದ್ದಾರೆ. ಬೆಳಿಗ್ಗೆ ವಿವಾಹ ನಡೆಯಲಿದ್ದು, ಅದೇ ದಿನ ಅದೇ ವೇದಿಕೆ ಮೇಲೆ ಆರತಕ್ಷತೆ ಸಮಾರಂಭ ಕೂಡ ಜರುಗಲಿದೆ. ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಮೈಸೂರು ಎಮೋಷನಲಿ ಕನೆಕ್ಟ್ ಆದ ಸ್ಥಳ. ಹೀಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:33 am, Fri, 1 November 24