Ambareesh Birthday: ಸರಳವಾಗಿ ನೆರವೇರಿದ ಅಂಬರೀಷ್​ ಜನ್ಮದಿನ; ಇಲ್ಲಿವೆ ಚಿತ್ರಗಳು

|

Updated on: May 29, 2021 | 4:59 PM

ಈ ಬಾರಿ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಿದೆ. ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಕರೆ ನೀಡಿದ್ದರು.

1 / 5
ಇಂದು ಅಂಬರೀಷ್​ ಬದುಕಿದ್ದರೆ 69ನೇ ವಯಸ್ಸಿಗೆ ಕಾಲಿಡುತ್ತಿದ್ದರು. ಆದರೆ, ಅವರು ನಮ್ಮೊಂದಿಗಿಲ್ಲ. ಅಂಬಿ ಇಲ್ಲದೆಯೇ ಜನ್ಮದಿನವನ್ನು ಸಿಂಪಲ್​ ಆಗಿ ಆಚರಿಸಲಾಗಿದೆ.

2 / 5
ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್​ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು.

3 / 5
ಈ ಬಾರಿ ಸರ್ಕಾರ ಕೊವಿಡ್​ ನಿಯಂತ್ರಣಕ್ಕೆ ಲಾಕ್​ಡೌನ್​ ಘೋಷಣೆ ಮಾಡಿದೆ. ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್​ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಕರೆ ನೀಡಿದ್ದರು.

4 / 5
ಅಂತೆಯೇಯೇ ಅಂಬರೀಷ್​ ಜನ್ಮದಿನವನ್ನು ಇಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್​ ಸ್ಮಾರಕಕ್ಕೆ   ಸುಮಲತಾ ಅಂಬರೀಷ್​, ಅವರ ಪುತ್ರ ಅಭಿಷೇಕ್ ಅವರು ಭೇಟಿ ನೀಡಿ, ಮೇರುನಟನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

5 / 5
ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಚಿತ್ರ ನಟ ದೊಡ್ಡಣ್ಣ ಮತ್ತಿತ್ತರರು ಉಪಸ್ಥಿತರಿದ್ದರು.

Published On - 4:54 pm, Sat, 29 May 21