ನಟ ಅನಂತ್ ನಾಗ್ (Anant Nag) ಅವರಿಗೆ ಇಂದು (ಸೆಪ್ಟೆಂಬರ್ 4) ಜನ್ಮದಿನ. ಎಲ್ಲರೂ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಈ ವರ್ಷ ಅವರಿಗೆ ಜನ್ಮದಿನೋತ್ಸವ ಸಖತ್ ವಿಶೇಷ ಎನಿಸಿಕೊಂಡಿದೆ. ಇದಕ್ಕೆ ಕಾರಣ ಅವರು ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷ ಕಳೆದಿರುವುದು. ಹೀಗಾಗಿ, ಅವರಿಗೆ ಇದು ಎಂದೂ ಮರೆಯಲಾರದ ಜನ್ಮದಿನ ಆಗಿದೆ. ನಟನಿಗೆ ಆಯಸ್ಸು ಹಾಗೂ ಆರೋಗ್ಯವನ್ನು ದೇವರು ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಅನಂತ್ ನಾಗ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1973ರಲ್ಲಿ. ‘ಸಂಕಲ್ಪ’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರ ತೆರೆಗೆ ಬಂದು 50 ವರ್ಷ ಕಳೆದಿದೆ. ಐದು ದಶಕಗಳಲ್ಲಿ ನೂರಾರು ರೀತಿಯ ಪಾತ್ರಗಳನ್ನು ಮಾಡಿ ಅನಂತ್ ನಾಗ್ ಜನಮೆಚ್ಚುಗೆ ಪಡೆದಿದ್ದಾರೆ. ಹಾಸ್ಯ, ಗಂಭೀರ, ಪ್ರೇಮಕಥೆ, ಹಾರರ್, ಕಲಾತ್ಮಕ ಸಿನಿಮಾ ಸೇರಿ ಎಲ್ಲಾ ವಿಧದ ಚಿತ್ರಗಳಲ್ಲಿ ಅವರು ನಟಿಸಿ ಜನಮನ ಗೆದ್ದಿದ್ದಾರೆ.
1979ರಲ್ಲಿ ಬಂದ ‘ನಾನಿನ್ನ ಬಿಡಲಾರೆ’ ಚಿತ್ರ ಸೂಪರ್ ಹಿಟ್ ಆಯಿತು. ಹಾರರ್ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾ ಜನಮೆಚ್ಚುಗೆ ಪಡೆಯಿತು. ಹೀರೋ ಆಗಿ ಮಿಂಚಿದ್ದ ಅನಂತ್ ನಾಗ್ ಅವರು ಇತ್ತೀಚೆಗೆ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಕೆಜಿಎಫ್’ ಚಿತ್ರದಲ್ಲಿ ಅವರು ಮಾಡಿದ್ದ ಕಥೆಯ ನಿರೂಪಣೆ ಗಮನ ಸೆಳೆಯಿತು. ‘ಕೆಜಿಎಫ್’ ಚಿತ್ರ ಹಿಟ್ ಆಗಲು ಅವರ ನಿರೂಪಣೆಯೂ ಕಾರಣವಾಗಿತ್ತು. ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರದಲ್ಲಿ ಅವರು ಮಾಡಿದ ಅನಂತ್ ಪದ್ಮನಾಭ ಪಿ. ಪಾತ್ರ ಅನೇಕರಿಗೆ ಇಷ್ಟವಾಗಿದೆ. ಕವಲು ದಾರಿ ಚಿತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಅವರು ಗಮನ ಸೆಳೆದರು.
ಅನಂತ್ ನಾಗ್ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅನೇಕರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಹಲವು ಕಡೆಗಳಲ್ಲಿ ಅವರನ್ನು ಕರೆದು ಸನ್ಮಾನಿಸುವ ಕೆಲಸ ಕೂಡ ಆಗುತ್ತಿದೆ. ಅನಂತ್ ನಾಗ್ ಅವರು ಸದ್ಯ ಒಂದೆರಡು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ಎಲ್ಲರೊಂದಿಗೆ ಬೆರೆಯುವ ಗುಣ ಅನೇಕರಿಗೆ ಇಷ್ಟವಾಗುತ್ತದೆ.
ಇದನ್ನೂ ಓದಿ: ಹೆಂಡತಿ ಹೇಳಿದ್ದು ನಿಜ, ಹೌದು ನನಗೆ ಸಿಟ್ಟು ಜಾಸ್ತಿ: ಅನಂತ್ ನಾಗ್
ಅನಂತ್ ನಾಗ್ ಅವರು 1987ರಲ್ಲಿ ಗಾಯತ್ರಿ ಅವರನ್ನು ಮದುವೆ ಆದರು. ಗಾಯತ್ರಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಮದುವೆ ಆದ ಬಳಿಕ ಅವರು ಸಿನಿಮಾ ಕೆಲಸಗಳಿಂದ ದೂರವೇ ಉಳಿದುಕೊಂಡಿದ್ದಾರೆ. ಪತಿಗೆ ಬೆಂಬಲವಾಗಿ ಅವರು ನಿಂತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:56 am, Mon, 4 September 23