
ಆ್ಯಂಕರ್ ಅನುಶ್ರೀ (Anushree) ಅವರು ಇತ್ತೀಚೆಗೆ ವಿವಾಹ ಆದರು. ಅವರು ರೋಷನ್ ಹೆಸರಿನ ವ್ಯಕ್ತಿ ಜೊತೆ ಹಸಮಣೆ ಏರಿದ್ದಾರೆ. ಇಬ್ಬರೂ ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಅನ್ನೋದು ವಿಶೇಷ. ವಿವಾಹದ ಬಳಿಕ ಅನುಶ್ರೀ ಸ್ವಲ್ಪ ಸಮಯ ಹಾಯಾಗಿ ಕಳೆದರು. ಈಗ ಅವರು ತಮ್ಮ ಕೆಲಸಕ್ಕೆ ಮರಳೋ ಸಮಯ ಬಂದಿದೆ. ಈ ವೇಳೆ ಅವರು ಸಂಪ್ರದಾಯ ಮುರಿಯಲಿಲ್ಲ ಅನ್ನೋದು ವಿಶೇಷ. ಈ ವಿಚಾರದಲ್ಲಿ ಅನುಶ್ರೀ ಅವರನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.
ಅನುಶ್ರೀ ಅವರು ಜೀ ಕನ್ನಡದ ಕೆಲ ರಿಯಾಲಿಟಿ ಶೋಗಳಿಗೆ ಆ್ಯಂಕರಿಂಗ್ ಮಾಡುತ್ತಾರೆ. ‘ಸರಿಗಮಪ’ ಬಳಿಕ ಅವರು ಬ್ರೇಕ್ನಲ್ಲಿ ಇದ್ದರು. ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು’ ಶೋಗಳು ಬರುತ್ತಿದ್ದು, ಆಡಿಷನ್ ನಡೆಯುತ್ತಿದೆ. ಈ ಶೋಗಳ ಪೈಕಿ ಅವರು ಡಿಕೆಡಿಯ ಭಾಗ ಆಗೋ ಸಾಧ್ಯತೆ ಇದೆ. ಆಡಿಷನ್ ಬಗ್ಗೆ ಅಪ್ಡೇಟ್ ನೀಡಲು ಅನುಶ್ರೀ ಅವರು ಆಗಮಿಸಿದ್ದರು. ಈ ವೇಳೆ ಅವರ ಕತ್ತಿನಲ್ಲಿ ಮಾಂಗಲ್ಯ ಸರ ಕಂಡಿದೆ. ಅನೇಕರು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಂಪ್ರದಾಯ ಮರೆಯದ ಅನುಶ್ರೀಯನ್ನು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: ಮದುವೆ ಬಳಿಕ ಗುಡ್ ನ್ಯೂಸ್ ನೀಡಿದ ನಿರೂಪಕಿ ಅನುಶ್ರೀ
ವಿವಾಹ ಆದ ಬಳಿಕ ಕೆಲ ಸೆಲೆಬ್ರಿಟಿಗಳು ಶೋಗಳಲ್ಲಿ ಕಾಣಿಸಿಕೊಳ್ಳುವಾಗ ಮಾಂಗಲ್ಯ ಧರಿಸಲು ಹೆಚ್ಚು ಆದ್ಯತೆ ನೀಡೋದಿಲ್ಲ. ಕೆಲವರು ವಿವಾಹ ಆಗಿದೆ ಎಂದು ಕೂಡ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಬೇಡಿಕೆ ಕಡಿಮೆ ಆಗಬಹುದು ಎಂಬ ಭಯ ಇದಕ್ಕೆ ಕಾರಣ. ಆದರೆ, ಅನುಶ್ರೀ ಮಾತ್ರ ಇದಕ್ಕೆ ಭಿನ್ನ. ಅವರು ಮಾಂಗಲ್ಯ ಸರ ಧರಿಸಿಯೇ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಅನೇಕರಿಗೆ ಖುಷಿ ಕೊಟ್ಟಿದೆ. ಕಮೆಂಟ್ ಬಾಕ್ಸ್ನಲ್ಲಿ ಅನೇಕರು ಈ ವಿಚಾರವನ್ನು ಹೇಳಿದ್ದಾರೆ. ‘ಮಾಂಗಲ್ಯ ನೋಡಿ ಖುಷಿ ಆಯ್ತು’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, ‘ನೀವು ತುಂಬಾ ಲಕ್ಷಣವಾಗಿ ಕಾಣಿಸುತ್ತಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.
‘ಡಿಕೆಡಿ’ ಹಾಗೂ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋಗೆ ಸದ್ಯ ಆಡಿಷನ್ ನಡೆಯುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ತೆರಳಿ ಆಡಿಷನ್ ಮಾಡಲಾಗುತ್ತಿದೆ. ಆಸಕ್ತರು ಜೀ ಕನ್ನಡ ಸೂಚಿಸಿದ ಸ್ಥಳಕ್ಕೆ ತೆರಳಿ ಆಡಿಷನ್ ನೀಡಬಹುದು. ಅದರಲ್ಲಿ ಆಯ್ಕೆ ಆದರೆ, ನಿಮ್ಮ ಪ್ರತಿಭೆಯನ್ನು ರಾಜ್ಯದ ಮುಂದೆ ಅನಾವರಣ ಮಾಡುವ ಅವಕಾಶ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.