ಬೆಂಗಳೂರಿನ ಪಾರ್ಟಿಯಲ್ಲಿ ಭಾಗಿಯಾಗಿದ್ದರಂತೆ! ಹಾಗಾದ್ರೆ ಸುಳ್ಳು ಹೇಳ್ತಿದ್ದಾರಾ ಅನುಶ್ರೀ..
ಮಂಗಳೂರು: ಡ್ರಗ್ಸ್ ಕೇಸ್ ಸಂಬಂಧ ಅರೆಸ್ಟ್ ಆಗಿರುವ ಆರೋಪಿ ತರುಣ್ ರಾಜ್ ವಿಚಾರಣೆ ವೇಳೆ ಅನುಶ್ರೀ ಬಗ್ಗೆ ಕೆಲ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಪಾರ್ಟಿಯಲ್ಲಿ ಅನುಶ್ರೀ ಕೂಡ ಡ್ರಗ್ ತಗೋಳ್ತಾ ಇದ್ಲು ಎಂದಿದ್ದ. ಈ ಹೇಳಿಕೆ ಸಂಬಂಧ ನಟಿ ಕಮ್ ಖ್ಯಾತ ಆ್ಯಂಕರ್ ಅನುಶ್ರೀ ಪ್ರತಿಕ್ರಿಯೆಸಿದ್ದಾರೆ. ತರುಣ್ ಬಗ್ಗೆ ಟಿವಿ9ಗೆ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ತರುಣ್ ಕೇವಲ ನನ್ನ ಕೊರಿಯೋಗ್ರಾಫರ್ ಎಂದಿದ್ದಾರೆ. ಸ್ನೇಹವಿತ್ತಾ? ಜೊತೆಯಲ್ಲೇ ಪಾರ್ಟಿ ಮಾಡ್ತಿದ್ರಾ? ಅನ್ನೋ ಪ್ರಶ್ನೆಗೆ ಅನುಶ್ರೀ ಉತ್ತರಿಸಿಲ್ಲ. ಸಿಸಿಬಿ ನೋಟಿಸ್ ಹಿನ್ನೆಲೆಯಲ್ಲಿ ಸದ್ಯ […]
ಮಂಗಳೂರು: ಡ್ರಗ್ಸ್ ಕೇಸ್ ಸಂಬಂಧ ಅರೆಸ್ಟ್ ಆಗಿರುವ ಆರೋಪಿ ತರುಣ್ ರಾಜ್ ವಿಚಾರಣೆ ವೇಳೆ ಅನುಶ್ರೀ ಬಗ್ಗೆ ಕೆಲ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಪಾರ್ಟಿಯಲ್ಲಿ ಅನುಶ್ರೀ ಕೂಡ ಡ್ರಗ್ ತಗೋಳ್ತಾ ಇದ್ಲು ಎಂದಿದ್ದ. ಈ ಹೇಳಿಕೆ ಸಂಬಂಧ ನಟಿ ಕಮ್ ಖ್ಯಾತ ಆ್ಯಂಕರ್ ಅನುಶ್ರೀ ಪ್ರತಿಕ್ರಿಯೆಸಿದ್ದಾರೆ. ತರುಣ್ ಬಗ್ಗೆ ಟಿವಿ9ಗೆ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.
ತರುಣ್ ಕೇವಲ ನನ್ನ ಕೊರಿಯೋಗ್ರಾಫರ್ ಎಂದಿದ್ದಾರೆ. ಸ್ನೇಹವಿತ್ತಾ? ಜೊತೆಯಲ್ಲೇ ಪಾರ್ಟಿ ಮಾಡ್ತಿದ್ರಾ? ಅನ್ನೋ ಪ್ರಶ್ನೆಗೆ ಅನುಶ್ರೀ ಉತ್ತರಿಸಿಲ್ಲ. ಸಿಸಿಬಿ ನೋಟಿಸ್ ಹಿನ್ನೆಲೆಯಲ್ಲಿ ಸದ್ಯ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇಂದೇ ವಿಚಾರಣೆಗೆ ಹಾಜರಾಗಲಿದ್ದಾರೆ.
ಸುಳ್ಳು ಹೇಳ್ತಾ ಇದ್ದಾರಾ ಅನುಶ್ರೀ? ಕಿಶೋರ್ ಶೆಟ್ಟಿ ಮತ್ತು ತರುಣ್ ರಾಜ್ ಸಿಕ್ಕಿ ಮೂರು ವರ್ಷ ಆಯ್ತು ಎಂದು ಟಿವಿ9 ಜೊತೆ ಮಾತನಾಡುವಾಗ ಅನುಶ್ರೀ ಹೇಳಿದ್ದರು. ಆದರೆ ವಿಚಾರಣೆ ಮೇಳೆ ಆರೋಪಿ ತರುಣ್ ರಾಜ್ ಅನುಶ್ರೀ ಕೂಡ ನಮ್ಮ ಜೊತೆ ಪಾರ್ಟಿ ಮಾಡಿದ್ದರು ಎಂದು ಹೇಳಿದ್ದಾನೆ. ಆದ್ರೆ ಆ ಪಾರ್ಟಿ ನಡೆದಿದ್ದು ಲಾಕ್ಡೌನ್ಗೂ ಮೊದಲು. ಹೀಗಾಗಿ ಅನುಶ್ರೀ ಸುಳ್ಳು ಹೇಳ್ತಾ ಇದ್ದಾರಾ? ಬೆಂಗಳೂರಿನಲ್ಲಿ ಡ್ರಗ್ ಪಾರ್ಟಿಯಲ್ಲಿ ಅನುಶ್ರೀ ಭಾಗವಹಿಸಿದ್ರಾ ಎಂಬ ಅನುಮಾನ ಶುರುವಾಗಿದೆ.
ಮೂರು ಹಂತಗಳಲ್ಲಿ ಅನುಶ್ರೀಗೆ ಪ್ರಶ್ನೆ ಕೇಳಲಿರುವ ಸಿಸಿಬಿ: ತನಿಖಾಧಿಕಾರಿಗಳು ಅನುಶ್ರೀಗೆ ಹಲವು ಪ್ರಶ್ನಾವಳಿ ತಯಾರು ಮಾಡಿಕೊಂಡಿದ್ದಾರೆ. ಸಿಸಿಬಿ ಮತ್ತು ನಾರ್ಕೋಟಿಕ್ ಟೀಮ್ ಮೂರು ಹಂತಗಳಲ್ಲಿ ಪ್ರಶ್ನೆ ಕೇಳಲಿದ್ದಾರೆ. ಸಮಂಜಸ ಉತ್ತರ ನೀಡದಿದ್ರೆ ಮಾತ್ರ ಎರಡನೇ ಹಂತದ ಪ್ರಶ್ನಾವಳಿಗಳನ್ನು ಕೇಳಲಾಗುತ್ತೆ.
ಬೆಂಗಳೂರು ಸಿಸಿಬಿ ನಡೆಸುತ್ತಿರುವ ತನಿಖೆಗೆ ಅನುಶ್ರಿ ಲಿಂಕ್ ಇಲ್ಲ: ಇನ್ನು ಅನುಶ್ರಿಯನ್ನ ಮಂಗಳೂರು ಸಿಸಿಬಿ ತನಿಖೆಗೆ ಕರೆದಿದ್ದಾರೆ. ಮಂಗಳೂರಿಗೆ ಡ್ರಗ್ ಸಪ್ಲೈ ಲಿಂಕ್ ಬೇರೆಯೇ ಇದ್ದು, ಬೆಂಗಳೂರಿನ ಡ್ರಗ್ ಸಪ್ಲೈ ಲಿಂಕ್ ಬೇರೆಯೇ ಇದೆ. ಹೀಗಾಗಿ ಬೆಂಗಳೂರು ಸಿಸಿಬಿ ವಿಚಾರಣೆ ವೇಳೆ ಅನುಶ್ರಿ ಹೆಸರು ಪ್ರಸ್ತಾಪವಿಲ್ಲ.
ಯಾರೂ ಕೂಡಾ ಸದ್ಯಕ್ಕೆ ಅನುಶ್ರಿ ಹೆಸರು ಪ್ರಸ್ತಾಪ ಮಾಡಿಲ್ಲ. ಮಂಗಳೂರು ಸಿಸಿಬಿಯಲ್ಲಿ ಕಿಶೋರ್ ಶೆಟ್ಟಿ ಪ್ರಸ್ತಾಪ ಮಾಡಿದ್ದಾನೆ. ಹಾಗೊಂದು ವೇಳೆ ಅನುಶ್ರಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೆಂಗಳೂರು ಸಿಸಿಬಿ ಕೂಡಾ ಅನುಶ್ರಿಯನ್ನ ತನಿಖೆಗೆ ಕರೆಯಬಹುದು.
ಮಂಗಳೂರಿನಲ್ಲಿ ಸಿಸಿಬಿ ತನಿಖೆಯ ವೇಳೆ ಅನುಶ್ರಿ ಹೇಳಿಕೆ ಮುಖ್ಯವಾಗುತ್ತೆ. ಆ ಹೇಳಿಕೆ ಹಾಗೂ ಮಂಗಳೂರು ಸಿಸಿಬಿ ತನಿಖೆಯ ಬಳಿಕ ವಿಚಾರಣೆಗೆ ಕರೆಯುವ ಬಗ್ಗೆ ಬೆಂಗಳೂರು ಸಿಸಿಬಿ ತೀರ್ಮಾನ ತೆಗೆದುಕೊಳ್ಳುತ್ತೆ.
Published On - 9:27 am, Fri, 25 September 20