AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಲ ಸಾಗರದಲ್ಲಿ ನೀಳಕಾಯದ ಅನುಷ್ಕಾ ಹಾಟ್​ ಲುಕ್​ಗೆ ಎಲ್ಲಾ ಫಿದಾ!

ಲಾಕ್​ಡೌನ್​ನಿಂದ ತಮ್ಮ ನೆಚ್ಚಿನ ನಟಿಯರನ್ನ ಬೆಳ್ಳಿ ಪರದೆಯ ಮೇಲೆ ನೋಡೋಕಾಗದೆ ಕಂಗೆಟ್ಟು ಹೋಗಿದ್ದ ಪಡ್ಡೆ ಹುಡುಗರ ಮನಸ್ಸಿಗೆ ಈಗ ಕೊಂಚ ನಿರಾಳತೆ. ಅದಕ್ಕೆ ಕಾರಣ ಲಾಕ್​ಡೌನ್​ ಮೈಗೊಡವಿ ಮತ್ತೊಮ್ಮೆ ತಮ್ಮ ಸುಂದರ ನೀಳಕಾಯವನ್ನ ಪ್ರದರ್ಶಿಸಲು ಮುಂದಾಗುತ್ತಿರುವ ನಟಿಮಣಿಯರು! ನೀಲಿ Monokiniಯಲ್ಲಿ ಕಂಗೊಳಿಸಿದ ಅನುಷ್ಕಾ..! ಅಂತೆಯೇ, ಪ್ರತಿಷ್ಠಿತ ವೋಗ್ (Vogue) ಫ್ಯಾಷನ್​ ಮ್ಯಾಗಜೀನ್​ ಮುಖಪುಟದ ಮೇಲೆ ರಾರಾಜಿಸಲು ಬಾಲಿವುಡ್​ ಚೆಲುವೆ, ಭಾರತದ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯ ಹೃದಯ ರಮಣಿ ಅನುಷ್ಕಾ ಶರ್ಮ ಒಂದು ಹಾಟ್​ ಫೋಟೋಶೂಟ್​ […]

ನೀಲ ಸಾಗರದಲ್ಲಿ ನೀಳಕಾಯದ ಅನುಷ್ಕಾ ಹಾಟ್​ ಲುಕ್​ಗೆ ಎಲ್ಲಾ ಫಿದಾ!
KUSHAL V
| Edited By: |

Updated on: Jul 01, 2020 | 5:37 PM

Share

ಲಾಕ್​ಡೌನ್​ನಿಂದ ತಮ್ಮ ನೆಚ್ಚಿನ ನಟಿಯರನ್ನ ಬೆಳ್ಳಿ ಪರದೆಯ ಮೇಲೆ ನೋಡೋಕಾಗದೆ ಕಂಗೆಟ್ಟು ಹೋಗಿದ್ದ ಪಡ್ಡೆ ಹುಡುಗರ ಮನಸ್ಸಿಗೆ ಈಗ ಕೊಂಚ ನಿರಾಳತೆ. ಅದಕ್ಕೆ ಕಾರಣ ಲಾಕ್​ಡೌನ್​ ಮೈಗೊಡವಿ ಮತ್ತೊಮ್ಮೆ ತಮ್ಮ ಸುಂದರ ನೀಳಕಾಯವನ್ನ ಪ್ರದರ್ಶಿಸಲು ಮುಂದಾಗುತ್ತಿರುವ ನಟಿಮಣಿಯರು!

ನೀಲಿ Monokiniಯಲ್ಲಿ ಕಂಗೊಳಿಸಿದ ಅನುಷ್ಕಾ..! ಅಂತೆಯೇ, ಪ್ರತಿಷ್ಠಿತ ವೋಗ್ (Vogue) ಫ್ಯಾಷನ್​ ಮ್ಯಾಗಜೀನ್​ ಮುಖಪುಟದ ಮೇಲೆ ರಾರಾಜಿಸಲು ಬಾಲಿವುಡ್​ ಚೆಲುವೆ, ಭಾರತದ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯ ಹೃದಯ ರಮಣಿ ಅನುಷ್ಕಾ ಶರ್ಮ ಒಂದು ಹಾಟ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಬೇರೆ ನಟಿಯರಂತೆ ಸಾಮಾನ್ಯವಾಗಿ ಬಿಕಿನಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳದ ಅನುಷ್ಕಾ, ಗಾಢ ನೀಲಿ ಬಣ್ಣದ ಮೋನೊಕಿನಿ (Monokini) ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ನೀಲ ಸಮುದ್ರದ ತಟದಲ್ಲಿ ಮಾದಕ ನೋಟವ ಬೀರುತ್ತಾ, ಒದ್ದೆ ಮುದ್ದೆಯಾಗಿದ್ರೂ ಮೈಮಾಟದಲ್ಲೇ ಹುಡುಗಿಯರ ಮನದಲ್ಲಿ ಈರ್ಷೆ ಹಾಗೂ ಹುಡುಗರ ಬಾಯಲ್ಲಿ ಊ ಲಾ ಲಾ ಅಂತಾ ಹೇಳಿಸಿಯೇ ಬಿಟ್ರು ಅನುಷ್ಕಾ. ಅದರಲ್ಲೂ ಎಲ್ಲಾ ಕನ್ಯಾಮಣಿಗಳ ಕಣ್ಣೂ ಕುಕ್ಕಿರುವುದು ಅನುಷ್ಕಾ ವಾಲೆ ಮತ್ತು ಡಿಸೈನರ್​ ಬಳೆಗಳು. ಇವೆರಡು ಮುಂದಿನ ಫ್ಯಾಷನ್​ ಟ್ರೆಂಡ್​ ಆಗೋದ್ರಲ್ಲಿ ನೋ ಡೌಟ್​.

ಈ ಮದನಾರಿಯ ಮೋಹಕ​ ಪೋಸ್​ ಕ್ಲಿಕ್​ ಮಾಡಿರೋದು ಖ್ಯಾತ ಛಾಯಾಗ್ರಾಹಕ ಬಿಲ್ಲಿ ಕಿಡ್​. ಮುಖಪುಟದ ವಿನ್ಯಾಸ ಮಾಡಿರುವುದು ಅನಿತಾ ಶ್ರಾಫ್​ ಅಡ್ಜಾನಿಯಾ.

ಒಟ್ಟಾರೆ, ಇಷ್ಟು ದಿನ ನಿದ್ದೆಗೆಡಿಸಿದ್ದ ಹಾಳು ಕೊರೊನಾದಿಂದ ಹುಡುಗರಿಗೆ ಕೊಂಚ ರಿಲೀಫ್​ ಸಿಕ್ಕಂತಾಗಿದೆ. ಮದನಾರಿಯ ಮೈಮಾಟವನ್ನ ಕಣ್ಣುಗಳಲ್ಲಿ ತುಂಬಿಸಿಕೊಂಡ ಪಡ್ಡೆಗಳಿಗೆ ಇನ್ಮೇಲೆ ಒಳ್ಳೇ ಕನಸುಗಳು ಬೀಳೋದಂತೂ ಗ್ಯಾರಂಟಿ.

https://www.instagram.com/p/CCFdXqdJ2db/?utm_source=ig_web_copy_link

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು