ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಮದುವೆ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಪಾಲಿಗೆ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶೆಟ್ಟಿ ಬಗ್ಗೆ ಹೊಸ ಗಾಸಿಪ್ ಹುಟ್ಟಿಕೊಂಡಿದೆ. ಅವರು ಸ್ಯಾಂಡಲ್ವುಡ್ ನಿರ್ಮಾಪಕರೊಬ್ಬನನ್ನು ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಿಗೆ ಈ ವಿಚಾರವನ್ನು ನಂಬಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ.
ಅನುಷ್ಕಾ ಶೆಟ್ಟಿಗೆ ಈಗ 42 ವರ್ಷ. ಈವರೆಗೆ ಅವರು ಮದುವೆ ಬಗ್ಗೆ ನಿರ್ಧಾರ ಮಾಡಿಲ್ಲ. ಈ ಮೊದಲು ಅವರು ಪ್ರಭಾಸ್ನ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ವಿಚಾರ ನಿಜವಾಗಿಲ್ಲ. ಇಬ್ಬರೂ ಮದುವೆ ಆಗೋ ನಿರ್ಧಾರದಿಂದ ಹಿಂದೆ ಸರಿದರು. ಈಗ ಅನುಷ್ಕಾ ಹೆಸರು ಸ್ಯಾಂಡಲ್ವುಡ್ ನಿರ್ಮಾಪಕನ ಜೊತೆ ತಳುಕು ಹಾಕಿಕೊಂಡಿದೆ.
ಸದ್ಯ ನಿರ್ಮಾಪಕ ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಆ ನಿರ್ಮಾಪಕ ಯಾರು ಅನ್ನೋದಕ್ಕೆ ಸದ್ಯ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ಮೊದಲು ಅನುಷ್ಕಾ ಶೆಟ್ಟಿ ಬಗ್ಗೆ ಈ ರೀತಿಯ ಹಲವು ಸುದ್ದಿಗಳು ಹುಟ್ಟಿಕೊಂಡಿದ್ದು ಇದೆ. ಹೀಗಾಗಿ, ಈಗ ಹೊಸದಾಗಿ ಹುಟ್ಟಿಕೊಂಡಿರೋ ಸುದ್ದಿಯನ್ನು ನಂಬೋಕೆ ಫ್ಯಾನ್ಸ್ ರೆಡಿ ಇಲ್ಲ.
ಇದನ್ನೂ ಓದಿ: Chandu Death: ಶಾಕಿಂಗ್; ಪವಿತ್ರಾ ಜಯರಾಮ್ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ
2005ರಲ್ಲಿ ರಿಲೀಸ್ ಆದ ತೆಲುಗಿನ ‘ಸೂಪರ್’ ಸಿನಿಮಾ ಮೂಲಕ ಅನುಷ್ಕಾ ಬಣ್ಣದ ಬದುಕು ಆರಂಭಿಸಿದರು. ‘ಬಾಹುಬಲಿ’, ‘ಮಿರ್ಚಿ’, ‘ಅರುಂಧತಿ’ ಅಂಥ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದರು. ಸದ್ಯ ಅವರು ಒಂದು ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಆದಾಗ್ಯೂ ಕನ್ನಡದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅವರ ತಾಯಿ ಮಂಗಳೂರು ಮೂಲದವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.