ದರ್ಶನ್​ಗೆ ವಂಚನೆ ಯತ್ನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ನೀಡಿದ ಆರೋಪಿ ಅರುಣಾ ಕುಮಾರಿ

| Updated By: ರಾಜೇಶ್ ದುಗ್ಗುಮನೆ

Updated on: Jul 14, 2021 | 7:43 PM

‘ಪ್ರತಿಯೊಂದು ಸ್ಟೇಟ್​​ಮೆಂಟ್ ನಾನು ಪೊಲೀಸರಿಗೆ ಕೊಟ್ಟಿದ್ದೀನೆ. ಎರಡು ದಿನ ಕಾಯಿರಿ. ನಿಮಗೆ ರಿಸಲ್ಟ್​​ ಗೊತ್ತಾಗುತ್ತದೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ’ ಎಂದು ಅರುಣಾ ಕೈಮುಗಿದು ಹೋಗಿದ್ದಾರೆ.

ದರ್ಶನ್​ಗೆ ವಂಚನೆ ಯತ್ನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ನೀಡಿದ ಆರೋಪಿ ಅರುಣಾ ಕುಮಾರಿ
ದರ್ಶನ್​ಗೆ ವಂಚನೆ ಯತ್ನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ನೀಡಿದ ಆರೋಪಿ ಅರುಣಾ ಕುಮಾರಿ
Follow us on

ನಕಲಿ ಬ್ಯಾಂಕ್​ ಸಿಬ್ಬಂದಿ ಎಂದು ಹೇಳಿಕೊಂಡು ನಟ ದರ್ಶನ್​ಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ಅರುಣಾ ಕುಮಾರಿ ಪ್ರಯತ್ನಿಸಿದ್ದರು ಎನ್ನಲಾಗಿತ್ತು. ಈ ವಿಚಾರದಲ್ಲಿ ಅರುಣಾ ಕುಮಾರಿ ಉಲ್ಟಾ ಹೊಡೆದಿದ್ದಾರೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಆರೋಪಿ ಅರುಣಾ ಕುಮಾರಿ, ‘ನಾನು ತಪ್ಪು ಮಾಡಿದ್ದರೆ ಕಾನೂನು ರೀತಿ ಕ್ರಮಕೈಗೊಳ್ಳಲಿ. ದೊಡ್ಡ ವ್ಯಕ್ತಿಗಳ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ನಟ ದರ್ಶನ್​ ಬಗ್ಗೆ ಮಾತನಾಡುವ ಯೋಗ್ಯತೆ ನನಗಿಲ್ಲ. ನಾನು ಯಾರಿಂದಲೂ ಹಣ ಪಡೆದಿಲ್ಲ, ಸಾಲ ಕೊಡಿಸಿಲ್ಲ. ನನ್ನ ಬಳಿ ಸಾಕ್ಷ್ಯಾಧಾರ ಇದೆ ಎಂದು ನಾನು ಹೇಳಿಲ್ಲ. ನಾನು ಯಾವುದೇ ನಕಲಿ ಐಡಿ ಕಾರ್ಡ್​ ಬಳಸಿಲ್ಲ. ನಾನು ಎಲ್ಲವನ್ನೂ ಪೊಲೀಸರ ಬಳಿ ಹೇಳಿದ್ದೇನೆ. ನಾನು ಅಪರಾಧಿ ಎಂದು ಸಾಬೀತಾದರೆ ಶಿಕ್ಷೆ ಅನುಭವಿಸುವೆ’ ಎಂದಿದ್ದಾರೆ.

‘ನಾನು ವಂಚನೆ ಮಾಡಿದ್ದೇನೆ ಅನ್ನುವುದಕ್ಕೆ ಸಾಕ್ಷಿ ಏನಿದೆ? ವಂಚನೆ ಮಾಡಿದ್ದೀನಿ ಎನ್ನುವುದಕ್ಕೆ ನನಗೆ ಸಾಕ್ಷಿ ತೋರಿಸಿ. ಎಲ್ಲವೂ ಸುಳ್ಳು. ಯಾವುದಕ್ಕೂ ಫ್ರೂಫ್ ಅನ್ನುವುದೇ ಇಲ್ಲ. ಕಾನೂನು ಇದೆಯಲ್ಲಾ, ಅದು ನೋಡಿಕೊಳ್ಳುತ್ತೆ. ಇದು ನನ್ನ ಮರ್ಯಾದೆಯ ಪ್ರಶ್ನೆ. ತಂದೆ ತಾಯಿ ಇಬ್ಬರೂ ಕೂಡ ಪೇಷೆಂಟ್​​ಗಳೇ. ನನಗೆ ಶಕ್ತಿ ಇಲ್ಲ. ನನಗೆ ಅನ್ಯಾಯ ಆಗಿದೆ. ಕಾನೂನು ನನಗೆ ನ್ಯಾಯ ಕೊಡಿಸುತ್ತದೆ. ನಾನು ಹೆಣ್ಣಾಗಿ ಇಷ್ಟೇ ಕೇಳಿಕೊಳ್ಳುವುದು. ನನ್ನ ತಂದೆ ತಾಯಿ ಮರ್ಯಾದೆ ಹೋಗ್ತಿದೆ. ಅವರಿಗೋಸ್ಕರ ಈ ಘಟನೆಯನ್ನ ಇಲ್ಲೇ ಬಿಟ್ಟು ಬಿಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ ಅವರು.

‘ಪ್ರತಿಯೊಂದು ಸ್ಟೇಟ್​​ಮೆಂಟ್ ನಾನು ಪೊಲೀಸರಿಗೆ ಕೊಟ್ಟಿದ್ದೀನೆ. ಎರಡು ದಿನ ಕಾಯಿರಿ. ನಿಮಗೆ ರಿಸಲ್ಟ್​​ ಗೊತ್ತಾಗುತ್ತದೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ’ ಎಂದು ಅರುಣಾ ಕೈಮುಗಿದು ಹೋಗಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ ಹೆಸರಲ್ಲಿ ದೋಖಾ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ವಂಚನೆ ಯತ್ನ ಪ್ರಕರಣದ ಸುದ್ದಿಯಿಂದ ಬೇಸತ್ತಿದ್ದ ಅಭಿಮಾನಿಗಳಿಗೆ ದರ್ಶನ್​ ಕಡೆಯಿಂದ ಗುಡ್​ನ್ಯೂಸ್​