ಗೃಹ ಸಚಿವರನ್ನು ಭೇಟಿ ಮಾಡಲಿರುವ ಇಂದ್ರಜಿತ್ ಲಂಕೇಶ್; ಹೆಚ್ಚಾಯ್ತು ಕುತೂಹಲ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಕ್ರಕರಣಗಳು ಮಿತಿ ಮೀರಿವೆ. ಯುವ ಜನತೆ ಮಾದಕ ಜಾಲದ ಸುಳಿಗೆ ಸಿಲುಕಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಇಂದ್ರಜಿತ್ ಮಾಧ್ಯಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಡ್ರಗ್ಸ್ ವಿಚಾರದಲ್ಲಿ ಹೇಳಿಕೆ ಕೊಟ್ಟು ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರು ಇಂದು (ಜುಲೈ 15) ಗೃಹ ಸಚಿವ ಬಸವರಾಜು ಬೊಮ್ಮಾಯಿರವರನ್ನು ಭೇಟಿ ಮಾಡಲಿದ್ದಾರೆ. ಇಂದ್ರಜಿತ್ ಲಂಕೇಶ್ ಹೊಸ ಬಾಂಬ್ ಸದ್ಯದ ಪ್ರಕರಣಗಳಿಗೆ ತಿರುವು ನೀಡುತ್ತಾ ಎಂಬ ಕುತೂಹಲ ಮೂಡಿದೆ. ಈಗ ಮತ್ತೆ ಕೆಲವು ಪ್ರಕರಣಗಳನ್ನ ಉಲ್ಲೇಖಿಸಿ ಇಂದ್ರಜಿತ್ ಗೃಹ ಸಚಿವರನ್ನ ಭೇಟಿ ಮಾಡಲಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿವೆ. ಯುವ ಜನತೆ ಮಾದಕ ಜಾಲದ ಸುಳಿಗೆ ಸಿಲುಕಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಇಂದ್ರಜಿತ್ ಮಾಧ್ಯಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಉದ್ಯಮಿಗಳು, ಪ್ರಭಾವಿಗಳು ಸಾಮಾನ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ ಅಂತ ಇಂದ್ರಜಿತ್ ಲಂಕೇಶ್ ಅಭಿಪ್ರಾಯಪಟ್ಟಿದ್ದಾರೆ.
ಸಿಡಿ ಪ್ರಕರಣದಲ್ಲಿ ವ್ಯವಸ್ಥೆ ಒತ್ತಡ ಹೇರಿತ್ತು. ಅರುಣಾ ಕುಮಾರಿ ವಿಚಾರದಲ್ಲೂ ಇದು ಮುಂದುವರೆದಿದೆ. ಹೀಗಾದರೆ ವ್ಯವಸ್ಥೆಯ ಮೇಲಿ ಜನಸಾಮಾನ್ಯರ ನಂಬಿಕೆ ಹೋಗುತ್ತದೆ ಅಂತ ಉಲ್ಲೇಖಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂದು ಗೃಹ ಸಚಿವರನ್ನ ಭೇಟಿ ಮಾಡುತ್ತಿರುವುದು ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಇಂದ್ರಜಿತ್ ಲಂಕೇಶ್ 9 ಘಂಟೆ ಸುಮಾರಿಗೆ ಗೃಹ ಸಚಿವರನ್ನ ಭೇಟಿ ಮಾಡಿ ನಂತರ ಮಾತನಾಡಲಿದ್ದಾರೆ.
ಇದನ್ನೂ ಓದಿ
(Indrajit Lankesh will meet the Home Minister today)
Published On - 9:21 am, Thu, 15 July 21