ಐಷಾರಾಮಿ ಮನೆ, ಕಾರು.. ಹೀಗಿದೆ ನೋಡಿ ‘ಪಂಜರದ ಗಿಣಿ’ ರಾಗಿಣಿಯ ಆಸ್ತಿಪಾಸ್ತಿ!
ಬೆಂಗಳೂರು: ಡ್ರಗ್ಸ್ ದಂಧೆ ಕೇಸ್ ತನಿಖೆ ಆರಂಭವಾಗುತ್ತಿದ್ದಂತೆ ನಶೆರಾಣಿಯರು ಫುಲ್ ಶೇಕ್ ಆಗಿಬಿಟ್ಟಿದ್ದಾರಂತೆ. ಹೌದು, ಇದೀಗ ಮಾದಕ ನಟಿಯರು ಮಾಡಿರುವ ಬೇನಾಮಿ ಆಸ್ತಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ ಅನ್ನೋ ಮಾತು ಕೇಳಿಬಂದಿದೆ. ಈ ಕುರಿತು ಬೇರೆಲ್ಲೂ ಇಲ್ಲದ ರೋಚಕ ಸಂಗತಿಯ ಕಂಪ್ಲೀಟ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ. ಹೌದು, CCB ಆಯ್ತು, ED ಬಂದು ಹೋಯ್ತು! ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್, CCB, ED ಬಳಿಕ ಇದೀಗ ಕೇಸ್ನ ತನಿಖೆಗೆ ಆದಾಯ […]
ಬೆಂಗಳೂರು: ಡ್ರಗ್ಸ್ ದಂಧೆ ಕೇಸ್ ತನಿಖೆ ಆರಂಭವಾಗುತ್ತಿದ್ದಂತೆ ನಶೆರಾಣಿಯರು ಫುಲ್ ಶೇಕ್ ಆಗಿಬಿಟ್ಟಿದ್ದಾರಂತೆ. ಹೌದು, ಇದೀಗ ಮಾದಕ ನಟಿಯರು ಮಾಡಿರುವ ಬೇನಾಮಿ ಆಸ್ತಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ ಅನ್ನೋ ಮಾತು ಕೇಳಿಬಂದಿದೆ. ಈ ಕುರಿತು ಬೇರೆಲ್ಲೂ ಇಲ್ಲದ ರೋಚಕ ಸಂಗತಿಯ ಕಂಪ್ಲೀಟ್ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ.
ಹೌದು, CCB ಆಯ್ತು, ED ಬಂದು ಹೋಯ್ತು! ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್, CCB, ED ಬಳಿಕ ಇದೀಗ ಕೇಸ್ನ ತನಿಖೆಗೆ ಆದಾಯ ತೆರಿಗೆ (IT) ಇಲಾಖೆಯು ಸಹ ಎಂಟ್ರಿ ಕೊಟ್ಟಿದೆ. ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ನ ತನಿಖೆಗೆ ಎಂಟ್ರಿ ಕೊಟ್ಟ IT ಇಲಾಖೆಯಿಂದ ಇದೀಗ ಸಂಜನಾ ಹಾಗೂ ರಾಗಿಣಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.
ಯಾಕಂದ್ರೆ, ಆರೋಪಿಗಳ ಆದಾಯದ ಮೇಲೆ ಹದ್ದಿನ ಕಣ್ಣಿಟ್ಟಿರೋ ಇಲಾಖೆಗೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರೋದು ಕಂಡುಬಂದಿದೆ. ಹೀಗಾಗಿ, ಬಂಧಿತ ಆರೋಪಿಗಳ ಆದಾಯದ ಬಗ್ಗೆ IT ಟೀಂ ಪರಿಶೀಲನೆ ಸಹ ನಡೆಸಿದೆ.
ಬೇನಾಮಿ ಸಂಪತ್ತಿನ ರಾಣಿ ರಾಗಿಣಿ? ಹಾಗಿದ್ರೆ ಯಾರು ಏನೇನು ಆಸ್ತಿ ಹೊಂದಿದ್ದಾರೆ? ಎಷ್ಟು ಆಸ್ತಿ ಹೊಂದಿದ್ದಾರೆ? ಡ್ರಗ್ಸ್ ದಂಧೆ ಕೇಸ್ನಲ್ಲಿ ಜೈಲು ಸೇರಿರೋ ರಾಗಿಣಿ ಮಾಡಿರೋ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಅಂದ ಹಾಗೆ, ರಾಗಿಣಿ ದ್ವಿವೇದಿ ಹೆಸರಲ್ಲಿ ಬೆಂಗಳೂರಿನಲ್ಲಿ ಎರಡು ಐಷಾರಾಮಿ ಫ್ಲ್ಯಾಟ್ ಹಾಗೂ ಒಂದು 1 ಮನೆಯಿದೆ. ಜೊತೆಗೆ, ತುಪ್ಪದ ಹುಡುಗಿ ಮಿನರಲ್ ವಾಟರ್ ಕಂಪನಿ ಒಂದರಲ್ಲಿ ಪಾಲು ಸಹ ಹೊಂದಿರೋ ಮಾಹಿತಿ ಸಿಕ್ಕಿದೆ.
ಇದಲ್ಲದೆ, ರಾಗಿಣಿ 1 ಇನೋವಾ ಕಾರು, 1 ಬಿಎಂಡಬ್ಲ್ಯೂ ಕಾರು ಸಹ ಹೊಂದಿದ್ದಾರೆ. ಜಾಹೀರಾತು ಮತ್ತು ಇವೆಂಟ್ ಸೇರಿ 4 ಕಂಪನಿಯಲ್ಲಿ ಬಂಡವಾಳ ಹೂಡಿಕೆ ಸಹ ಮಾಡಿದ್ದಾರೆ. ಅಷ್ಟೇ ಅಲ್ಲ, KPLನ ಬಳ್ಳಾರಿ ಟಸ್ಕರ್ಸ್ ತಂಡದಲ್ಲೂ ಹೂಡಿಕೆ ಮಾಡಿದ್ದು ತಂಡದ ಸಹ ಮಾಲೀಕತ್ವ ಕೂಡ ಹೊಂದಿದ್ದಾರೆ.