ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ (James) ಚಿತ್ರ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಆದರೆ ಅಪ್ಪು ಅಭಿಮಾನಿಗಳು ಜೇಮ್ಸ್ ಚಿತ್ರದ ಅಪ್ಡೇಟ್ ಬರದಿರುವ ಬಗ್ಗೆ ಬಹಳ ಬೇಸರಗೊಂಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಅಭಿಮಾನಿಯೋರ್ವ ಬೇಸರದಿಂದ ಬರೆದ ಪತ್ರವೂ ವೈರಲ್ ಆಗಿತ್ತು. ಈ ಘಟನೆಗಳ ನಂತರ, ಚಿತ್ರತಂಡ ಆದಷ್ಟು ಬೇಗ ಚಿತ್ರದ ಕುರಿತು ಅಪ್ಡೇಟ್ ನೀಡಬೇಕು ಎಂದು ಅಭಿಮಾನಿಗಳು ಕೋರಿಕೊಂಡಿದ್ದರು. ಇದೀಗ ಫ್ಯಾನ್ಸ್ ಕೋರಿಕೆಗೆ ಉತ್ತರ ಬಂದಿದೆ. ಚಿತ್ರತಂಡ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡುವ ದಿನಾಂಕವನ್ನು ನಿರ್ದೇಶಕ ಬಹದ್ದೂರ್ ಚೇತನ್ (Bahaddur Chethan) ಘೋಷಿಸಿದ್ದಾರೆ.
ಜೇಮ್ಸ್ ಬಹಳ ದೊಡ್ಡ ಬಜೆಟ್ ಚಿತ್ರ. ಚಿತ್ರದ ಕೆಲಸಗಳು ನಡೆಯುತ್ತಿವೆ. ಅಭಿಮಾನಿಗಳ ಕೋರಿಕೆಯೆಂದರೆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬರಲಿ ಎಂದು. ಅದನ್ನು ಖಂಡಿತ ಈಡೇರಿಸುತ್ತೇವೆ ಎಂದು ಚೇತನ್ ಹೇಳಿದ್ದಾರೆ. ಅಲ್ಲದೇ ಅವರು ಫ್ಯಾನ್ಸ್ಗೆ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಿದ್ದು, ದೀಪಾವಳಿಗೆ ಹೊಸ ಪೋಸ್ಟರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯ ಕುರಿತ ಪ್ರಶ್ನೆಗೂ ಅವರು ಉತ್ತರಿಸಿದ್ದು, ಕ್ರಿಸ್ಮಸ್ನಲ್ಲಿ ಟೀಸರ್ ಬಿಡುಗಡೆ ಮಾಡಲಾಗುವುದು ಎಂದಿದ್ಧಾರೆ. ಇದರಿಂದ ಅಭಿಮಾನಿಗಳ ಕಾಯುವಿಕೆಗೆ ಉತ್ತರ ಸಿಕ್ಕಿದ್ದು, ಸದ್ಯದಲ್ಲೇ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಲಿವೆ.
ಬಹದ್ದೂರ್ ಚೇತನ್ ಮಾತನಾಡಿರುವ ವಿಡಿಯೋ:
ಇತ್ತೀಚೆಗೆ ವೈರಲ್ ಅಭಿಮಾನಿಯೊಬ್ಬ ಡೆತ್ ನೋಟ್ ಮಾದರಿಯ ಪತ್ರದಲ್ಲಿ ಜೇಮ್ಸ್ ಕುರಿತ ಅಪ್ಡೇಟ್ ಬರದಿರುವುದರಿಂದ ಬೇಸರಗೊಂಡಿದ್ದೇನೆ. ಇದಕ್ಕೆ ಚೇತನ್ ಕಾರಣ ಎಂದು ಬರೆದಿದ್ದು ವೈರಲ್ ಆಗಿತ್ತು. ಆದರೆ ಆ ಪತ್ರದ ಆಶಯ ಚಿತ್ರದ ಅಪ್ಡೇಟ್ ಬರಲಿ ಎಂಬುದಾಗಿತ್ತೇ ಹೊರತು, ಸಾಯುವ ಕುರಿತು ಆಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿ, ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು. ಅದರ ಕುರಿತಂತೆಯೂ ಚೇತನ್ ಪ್ರತಿಕ್ರಿಯೆ ನೀಡಿದ್ದು, ಅಭಿಮಾನಿಗಳು ದುಡುಕಬೇಡಿ. ಆ ಪತ್ರದ ಕುರಿತಂತೆ ನನಗೂ ಕಾಲ್ ಬಂದಿತ್ತು ಎಂದಿದ್ಧಾರೆ. ನಾವೂ ಅಪ್ಪು ಅವರ ಅಭಿಮಾನಿಯಾಗಿ ಚಿತ್ರ ಮಾಡುತ್ತಿದ್ದೇವೆ. ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದೂ ಚೇತನ್ ನುಡಿದಿದ್ದಾರೆ.
ಶಿವರಾಜ್ ಕುಮಾರ್ ಅಭಿಮಾನಿಯಾಗಿ ಮೊದಲ ಶೋವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಚಿತ್ರ ಬಹಳ ಅದ್ಭುತವಾಗಿದೆ. ಒಂದು ಸಂಪೂರ್ಣ ಎಂಟರ್ಟೈನಿಂಗ್ ಚಿತ್ರ ಎಂದು ಚೇತನ್ ಹೊಗಳಿದ್ದಾರೆ.
ಇದನ್ನೂ ಓದಿ:
Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್
Aryan Khan: ಆರ್ಯನ್ಗೆ ಜಾಮೀನು: ಒಂದೇ ಮಾತಲ್ಲಿ ರಮ್ಯಾ ಪ್ರತಿಕ್ರಿಯೆ; ಖುಷಿಪಟ್ಟ ಸೆಲೆಬ್ರಿಟಿಗಳು ಯಾರೆಲ್ಲ?