AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟಾಕಿ, ಹಾಲಿನ ಅಭಿಷೇಕ ಇಲ್ಲ; ಬಡಮಕ್ಕಳಿಗೆ ಪುಸ್ತಕ ಕೊಟ್ಟು ‘ಭಜರಂಗಿ 2’ ಸ್ವಾಗತಿಸಿದ ಹುಬ್ಬಳ್ಳಿಯ ಶಿವಣ್ಣನ ಫ್ಯಾನ್ಸ್​

Shivarajkumar | Bhajarangi 2: ಹಾರ, ಪಟಾಕಿ, ಹಾಲಿನ ಅಭಿಷೇಕಕ್ಕೆ ದುಂದು ವೆಚ್ಚ ಮಾಡುವ ಬದಲು ಸಮಾಜಮುಖಿ ಕೆಲಸದ ಮೂಲಕ ಶಿವರಾಜ್​ಕುಮಾರ್​ ಅಭಿಮಾನಿಗಳು ‘ಭಜರಂಗಿ 2’ ಚಿತ್ರವನ್ನು ಸ್ವಾಗತಿಸಿದ್ದಾರೆ. ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ.

ಪಟಾಕಿ, ಹಾಲಿನ ಅಭಿಷೇಕ ಇಲ್ಲ; ಬಡಮಕ್ಕಳಿಗೆ ಪುಸ್ತಕ ಕೊಟ್ಟು ‘ಭಜರಂಗಿ 2’ ಸ್ವಾಗತಿಸಿದ ಹುಬ್ಬಳ್ಳಿಯ ಶಿವಣ್ಣನ ಫ್ಯಾನ್ಸ್​
ಪುಸ್ತಕ ವಿತರಿಸಿದ ಹುಬ್ಬಳಿಯ ಶಿವರಾಜ್​ಕುಮಾರ್​ ಫ್ಯಾನ್ಸ್​
TV9 Web
| Edited By: |

Updated on:Oct 29, 2021 | 12:02 PM

Share

ಸ್ಟಾರ್​ ಸಿನಿಮಾ ರಿಲೀಸ್​ ಆದರೆ ಥಿಯೇಟರ್​ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಶಿವರಾಜ್​ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಇಂದು (ಅ.29) ಬಿಡುಗಡೆ ಆಗಿದ್ದು, ಎಲ್ಲೆಡೆ ಸಂಭ್ರಮ ಕಳೆಕಟ್ಟಿದೆ. ಬಹುತೇಕ ಎಲ್ಲ ಚಿತ್ರಮಂದಿರಗಳ ಎದುರು ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಆದರೆ ಹುಬ್ಬಳ್ಳಿಯಲ್ಲಿರುವ ಶಿವಣ್ಣನ ಫ್ಯಾನ್ಸ್​ ಹೊಸ ಹಾದಿ ಹಿಡಿದಿದ್ದಾರೆ. ಬಡಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವ ಮೂಲಕ ‘ಭಜರಂಗಿ 2’ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅವರ ಈ ಕೆಲಸ ಎಲ್ಲರಿಗೂ ಮಾದರಿ ಆಗುವಂತಿದೆ.

‘ಜೈ ರಾಜವಂಶ’ ಅಭಿಮಾನಿಗಳಿಂದ ಈ ಮಹತ್ವದ ಕಾರ್ಯ ಆಗಿದೆ. ಒಳ್ಳೆಯ ಕೆಲಸದ ಮೂಲಕ ಅವರು ಅಭಿಮಾನ ಮೆರೆದಿದ್ದಾರೆ. ಹಾರ, ಪಟಾಕಿ, ಹಾಲಿನ ಅಭಿಷೇಕಕ್ಕೆ ದುಂದು ವೆಚ್ಚ ಮಾಡುವ ಬದಲು ಸಮಾಜಮುಖಿ ಕೆಲಸದ ಮೂಲಕ ‘ಹ್ಯಾಟ್ರಿಕ್​ ಹೀರೋ’ಗೆ ಹೆಮ್ಮೆ ತರುವಂತೆ ಮಾಡಿದ್ದಾರೆ ಅವರ ಫ್ಯಾನ್ಸ್​. ಕನಸು ಎಂಬ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರಕ್ಕೆ ಪುಸ್ತಕ ವಿತರಣೆ ಮಾಡಲಾಗಿದೆ. ಇದರಿಂದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿದೆ. ಈ ಪುಸ್ತಕಗಳು ಸಾವಿರಾರು ರೂಪಾಯಿ ಮೌಲ್ಯದ್ದಾಗಿವೆ. ವಿವಿಧ ಪಠ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ನೀಡಲಾಗಿದೆ.

ಹುಬ್ಬಳ್ಳಿಯ ಈ ಅಭಿಮಾನಿಗಳ ಕೆಲಸ ನಿಜಕ್ಕೂ ಶ್ಲಾಘನೀಯ. ಸಂಭ್ರಮದ ನೆಪದಲ್ಲಿ ಹಾಲಿನ ಅಭಿಷೇಕ, ಹಾರ, ಪಟಾಕಿ ಮುಂತಾದ ವಸ್ತುಗಳಿಗೆ ದುಡ್ಡು ಖರ್ಚು ಮಾಡಿದರೆ ಆ ಸಂಭ್ರಮ ಒಂದೇ ದಿನಕ್ಕೆ ಮುಗಿದುಹೋಗುತ್ತದೆ. ಆದರೆ ಅದೇ ದುಡ್ಡಿನಲ್ಲಿ ಶಿವಣ್ಣನ ಅಭಿಮಾನಕ್ಕಾಗಿ ಈ ರೀತಿ ಪಠ್ಯ ಪುಸ್ತಕಗಳನ್ನು ವಿತರಿಸಿದರೆ ಅದರಿಂದ ಎಷ್ಟೋ ಮಕ್ಕಳ ಭವಿಷ್ಯಕ್ಕೆ ಅನುಕೂಲ ಆಗುತ್ತದೆ. ಅಂಥ ಕೆಲಸ ಮಾಡಿರುವ ಹುಬ್ಬಳಿಯ ಶಿವರಾಜ್​ಕುಮಾರ್​ ಅಭಿಮಾನಿಗಳು​ ಎಲ್ಲರಿಗೂ ಮಾದರಿ ಆಗಿದ್ದಾರೆ. ಹೀಗೆ ಅರ್ಥಪೂರ್ಣವಾಗಿ ‘ಭಜರಂಗಿ 2’ ಚಿತ್ರವನ್ನು ಸ್ವಾಗತಿಸಲಾಗಿದೆ.

ಈ ಸಿನಿಮಾಗೆ ನಿರ್ದೇಶಕ ಎ. ಹರ್ಷ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಭಾವನಾ ಮೆನನ್​​, ಭಜರಂಗಿ ಲೋಕಿ, ಶ್ರುತಿ, ಚೆಲುವರಾಜು, ಕುರಿ ಪ್ರತಾಪ್​ ಮುಂತಾದವರು ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ‘ಭಜರಂಗಿ 2’ ಶ್ರೀಮಂತವಾಗಿ ಮೂಡಿಬಂದಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಅಭಿಮಾನಿಗಳ ಜೊತೆ ಕುಳಿತು ಶಿವರಾಜ್​ಕುಮಾರ್​ ಫಸ್ಟ್​ ಡೇ ಫಸ್ಟ್​ ಶೋ ನೋಡಿದ್ದಾರೆ.

ಇದನ್ನೂ ಓದಿ:

Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್

Bhajarangi 2: ಫ್ಯಾನ್ಸ್​ ಜತೆ ಕುಳಿತು ‘ಭಜರಂಗಿ 2’ ನೋಡಿದ ಶಿವಣ್ಣನ ಮೊದಲ ಪ್ರತಿಕ್ರಿಯೆ ಏನು?

Published On - 11:59 am, Fri, 29 October 21

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ