‘ಮಫ್ತಿಗೆ ಪ್ರೀಕ್ವೆಲ್ ಮಾತ್ರವಲ್ಲ ಸೀಕ್ವೆಲ್ ಕೂಡ ಬರುತ್ತೆ’; ಸರ್​ಪ್ರೈಸ್ ನೀಡಿದ ಶಿವರಾಜ್​ಕುಮಾರ್

|

Updated on: May 26, 2023 | 12:32 PM

‘ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲು ಮಫ್ತಿ ಚಿತ್ರವನ್ನು ರೀ ರಿಲೀಸ್ ಮಾಡಬೇಕು ಎಂಬುದು ನಮ್ಮ ಆಲೋಚನೆ. ಈ ಬಗ್ಗೆ ಜಯಣ್ಣ ಬಳಿ ಮಾತಾಡ್ತೀನಿ’ ಎಂದರು ಶಿವಣ್ಣ.

‘ಮಫ್ತಿಗೆ ಪ್ರೀಕ್ವೆಲ್ ಮಾತ್ರವಲ್ಲ ಸೀಕ್ವೆಲ್ ಕೂಡ ಬರುತ್ತೆ’; ಸರ್​ಪ್ರೈಸ್ ನೀಡಿದ ಶಿವರಾಜ್​ಕುಮಾರ್
ಶಿವಣ್ಣ
Follow us on

ಶಿವರಾಜ್​ಕುಮಾರ್ (Shivarajkumar) ನಟನೆಯ, ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಸಿನಿಮಾ ಇಂದು (ಮೇ 26) ಸೆಟ್ಟೇರಿದೆ. ಬೆಂಗಳೂರಿನ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಿತು. ‘ಗೀತಾ  ಪಿಕ್ಷರ್ಸ್​​’ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಮುಹೂರ್ತದ ವೇಳೆ ಶಿವಣ್ಣ ಅವರು ಫ್ಯಾನ್ಸ್​ಗಳಿಗೆ ಒಂದು ಸರ್​ಪ್ರೈಸ್ ನೀಡಿದ್ದಾರೆ. ಈ ಚಿತ್ರದ ಮೊದಲ ಭಾಗ ‘ಮಫ್ತಿ’ ರೀ-ರಿಲೀಸ್​ಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಶಿವಣ್ಣ. ಅಷ್ಟೇ ಅಲ್ಲ ‘ಮಫ್ತಿ’ಗೆ (Mufti Movie) ಸೀಕ್ವೆಲ್ ಕೂಡ ಬರಲಿದೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ಭೈರತಿ ರಣಗಲ್ ಪ್ಯಾನ್ ಇಂಡಿಯಾ ಸಿನಿಮಾನ’ ಎನ್ನುವ ಪ್ರಶ್ನೆ ಇಡಲಾಯಿತು. ಇದಕ್ಕೆ ಉತ್ತರಿಸಿದ ಶಿವಣ್ಣ, ‘ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕು ಎಂದಿದ್ದರೆ ಅದು ಆಗಿಯೇ ಆಗುತ್ತದೆ. ಮಫ್ತಿ ಸಿನಿಮಾ ಹಿಂದಿಯಲ್ಲಿ ಡಬ್ ಆಗಿತ್ತು. ತಮಿಳಿನಲ್ಲೂ ಈ ಚಿತ್ರ ಬಂದಿದೆ. ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲು ಮಫ್ತಿ ಚಿತ್ರವನ್ನು ರೀ ರಿಲೀಸ್ ಮಾಡಬೇಕು ಎಂಬುದು ನಮ್ಮ ಆಲೋಚನೆ. ಈ ಬಗ್ಗೆ ಜಯಣ್ಣ ಬಳಿ ಮಾತಾಡ್ತೀನಿ’ ಎಂದರು ಶಿವಣ್ಣ.

ಇದನ್ನೂ ಓದಿ: ‘ನಾನು ನಟ ಮಾತ್ರ.. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ’: ಚುನಾವಣಾ ಪ್ರಚಾರದ ವೇಳೆ ಶಿವಣ್ಣನ ನೇರ ಮಾತು

‘ಮಫ್ತಿ’ ಸಿನಿಮಾದ ಕಥೆ ಕೇಳಿದಾಗ ಶಿವಣ್ಣನಿಗೆ ಒಂದು ಅಳುಕಿತ್ತು. ಆ ಬಳಿಕ ಅವರು ಪಾತ್ರವನ್ನು ಇಷ್ಟಪಟ್ಟರು. ‘ನರ್ತನ್ ಸಿನಿಮಾ ಬಗ್ಗೆ ಹೇಳಿದಾಗ ಒಂದು ಗೊಂದಲ ಹಾಗೂ ಅಳುಕಿತ್ತು. ನಾನಿದ್ದೇನೆ ಎಂದು ಅವರು ಹೇಳಿದರು. ಶೂಟಿಂಗ್​ನಲ್ಲಿ ಭಾಗಿ ಆದ ಬಳಿಕ ಪಾತ್ರ ಇಷ್ಟವಾಗುತ್ತಾ ಹೋಯಿತು. ಈಗ ಇದಕ್ಕೆ ಪ್ರೀಕ್ವೆಲ್ ಬರುತ್ತಿದೆ. ಸಿನಿಮಾದಲ್ಲಿ ಭಾವನೆಗಳಿಗೆ ಸಾಕಷ್ಟು ಅರ್ಥ ಇದೆ. ಶ್ರೀಮುರಳಿ ಪಾತ್ರ ಕೂಡ ಉತ್ತಮವಾಗಿತ್ತು. ಭೈರತಿ ರಣಗಲ್ ಚಿತ್ರ ಮಫ್ತಿಯ ಪ್ರೀಕ್ವೆಲ್. ಬಳಿಕ ಸೀಕ್ವೆಲ್ ಕೂಡ ಬರುತ್ತೆ’ ಎಂದರು ಶಿವಣ್ಣ.

‘ಮಫ್ತಿ’ ಸಿನಿಮಾ ರಿಲೀಸ್ ಆದ ಬಳಿಕ ನರ್ತನ್ ದೊಡ್ಡ ಗ್ಯಾಪ್ ತೆಗೆದುಕೊಂಡರು. ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ. ‘ಸಿನಿಮಾ ಇಷ್ಟು ವಿಳಂಬ ಆಗೋಕೆ ನನ್ನ ತಪ್ಪೂ ಇಲ್ಲ ಅವರ (ನರ್ತನ್​) ತಪ್ಪೂ ಇಲ್ಲ’ ಎಂದರು ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ