AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್ ಕುಮಾರ್-ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಮಗಳ ಪ್ರೀತಿಯ ಸಂದೇಶ

Shiva Rajkumar-Geetha Shivarajkumar: ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಪುತ್ರಿ ನಿವೇದಿತ ವಿಷ್ ಮಾಡಿದ್ದು ಹೀಗೆ...

ಶಿವರಾಜ್ ಕುಮಾರ್-ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಮಗಳ ಪ್ರೀತಿಯ ಸಂದೇಶ
ಶಿವಣ್ಣ-ಗೀತಕ್ಕ
ಮಂಜುನಾಥ ಸಿ.
|

Updated on: May 19, 2023 | 8:24 PM

Share

ಶಿವರಾಜ್ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್​ಕುಮಾರ್ (Geetha Shivarajkumar) ಚಂದನವನದ ಕ್ಯೂಟ್ ತಾರಾ ಜೋಡಿ. ಶಿವರಾಜ್ ಕುಮಾರ್​ಗೆ ಇಂಡಸ್ಟ್ರಿಯಲ್ಲಿ ಹಲವು ಗೆಳೆಯರಿದ್ದಾರೆ ಆದರೆ ಶಿವಣ್ಣನಿಗೆ ಆಪ್ತ ಗೆಳತಿ ಅವರ ಪತ್ನಿಯೇ. ಸಿನಿಮಾ ಕಾರ್ಯಕ್ರಮ ಆಗಿರಲಿ ಖಾಸಗಿ ಕಾರ್ಯಕ್ರಮ ಆಗಿರಲಿ ಪತ್ನಿಯನ್ನು ಸದಾ ಜೊತೆಗೊಯ್ಯುತ್ತಾರೆ ಶಿವಣ್ಣ. ಪತ್ನಿಯ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವಗಳನ್ನು ಶಿವಣ್ಣ ಹೊಂದಿದ್ದಾರೆ. ಈ ತಾರಾ ಜೋಡಿಗೆ ಇಂದು ವಿಶೇಷ ದಿನ. ಇಂದು (ಮೇ 19) ಅವರ ವಿವಾಹ ವಾರ್ಷಿಕೋತ್ಸವ.

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ಅವರು 1986 ಮೇ 19 ರಂದು ವಿವಾಹವಾದರು. 37 ವರ್ಷಗಳ ಯಶಸ್ವಿ ದಾಂಪತ್ಯ ಈ ಜೋಡಿಯದ್ದು. ಇಂದು ಶಿವಣ್ಣನವರ ಕುಟುಂಬ ಸದಸ್ಯರು ಸೇರಿದಂತೆ ಹಲವರು ಈ ಕ್ಯೂಟ್ ಜೋಡಿಗೆ ಶುಭ ಹಾರೈಕೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಶಿವಣ್ಣ ದಂಪತಿಯ ಪುತ್ರಿ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ಆದ ಚಿತ್ರವನ್ನು ಹಂಚಿಕೊಂಡು ಅಪ್ಪ-ಅಮ್ಮನಿಗೆ ವಿಶೇಷ ಸಂದೇಶ ಪ್ರಕಟಿಸಿದ್ದಾರೆ.

ನಿಮ್ಮಿಬ್ಬರ ಮಧ್ಯೆ ಇರೋ ಮುಗ್ಧ ಸ್ನೇಹ, ಸ್ನೇಹವನ್ನ ಮೀರಿ ಇರೋ ಪ್ರೀತಿ ನೋಡ್ತಾ ಇದ್ದರೆ ಕಳೆದುಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗೆ ಕಾಣಿಸುತ್ತೆ. ಜನುಮದ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು! ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ನಿವೇದಿತಾ, ಅಪ್ಪ-ಅಮ್ಮನೊಂದಿಗೆ ತಾವು ಇರುವ ಹಳೆಯ ಹಾಗೂ ಇತ್ತೀಚೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಗೀತಾ ಶಿವರಾಜ್​ಕುಮಾರ್ ಮಾಜಿ ಸಿಎಂ ಬಂಗಾರಪ್ಪನವರ ಮಗಳು. ಮೊದಲಿಗೆ ಅಣ್ಣಾವ್ರಿಗೆ ರಾಜಕಾರಣಿಯ ಕುಟುಂಬದಿಂದ ಮಗನಿಗೆ ಹೆಣ್ಣು ತರುವುದು ಇಷ್ಟವಿರಲಿಲ್ಲವಂತೆ. ಆದರೆ ಪಾರ್ವತಮ್ಮ ಹಾಗೂ ಅವರ ಸಹೋದರ ಚಿನ್ನಪ್ಪನವರ ಬಲವಂತಕ್ಕೆ ಬಂಗಾರಪ್ಪನವರ ಮನೆಗೆ ಹೋಗಿ ಅವರ ಪತ್ನಿ ಹಾಗೂ ಮಕ್ಕಳನ್ನು ಕಂಡು ಮಾತನಾಡಿಸಿ ಅವರ ಸಂಸ್ಕಾರ, ಸಂಪ್ರದಾಯಕ್ಕೆ ಮನಸೋತು ಒಪ್ಪಿದರಂತೆ.

ಇದನ್ನೂ ಓದಿ: ಪ್ರಚಾರಕ್ಕೆ ಬರ್ತಾರಾ ಶಿವಣ್ಣ? ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್​ಕುಮಾರ್ ಕೊಟ್ಟರು ಉತ್ತರ

ಇನ್ನು ಶಿವಣ್ಣ ಹಾಗೂ ಗೀತಕ್ಕೆ ಪರಸ್ಪರರ ಬಗ್ಗೆ ಬಹಳ ಪ್ರೀತಿ ಹಾಗೂ ವಿಶ್ವಾಸಗಳನ್ನು ಹೊಂದಿರುವವರು. ಕೆಲ ವರ್ಷಗಳ ಹಿಂದೆ ಶಿವಣ್ಣನಿಗೆ ಹೃದಯ ಸಮಸ್ಯೆ ಎದುರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗ ಪತಿಯ ಆರೋಗ್ಯಕ್ಕೆ ಹರಕೆ ಹೊತ್ತು ತಿರುಪತಿಗೆ ಮುಡಿ ಕೊಟ್ಟಿದ್ದರು ಗೀತಾ ಶಿವರಾಜ್​ಕುಮಾರ್, ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದ ಶಿವಣ್ಣ, ಯಾವ ಮಹಿಳೆ ತಾನೆ ತನ್ನ ತಲೆಕೂದಲು ಕೊಡುತ್ತಾಳೆ, ಆದರೆ ನನ್ನ ಪತ್ನಿ ನನ್ನ ಆರೋಗ್ಯಕ್ಕಾಗಿ ಆ ಕಾರ್ಯ ಮಾಡಿದಳು ಎಂದು ಭಾವುಕರಾಗಿದ್ದರು.

ಗೀತಾ ಶಿವರಾಜ್​ಕುಮಾರ್ ಈಗ ನಿರ್ಮಾಪಕಿಯೂ ಹೌದು, ಪತಿಯೊಟ್ಟಿಗೆ ಹೆಗಲಿಗೆ ಹೆಗಲು ಕೊಟ್ಟು ಸಿನಿಮಾ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಶಿವಣ್ಣ-ಗೀತಕ್ಕ ಸೇರಿ ಶಕ್ತಿಧಾಮ ಶಾಲೆ ನಡೆಸುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆಯ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಈ ಜೋಡಿ ನೂರು ಕಾಲ ಹೀಗೆಯೇ ಖುಷಿಯಿಂದ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ನಟ, ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ ಸಹ ಅಣ್ಣ ಹಾಗೂ ಅತ್ತಿಗೆಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳನ್ನು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?