
ಚಿತ್ರರಂಗದಲ್ಲಿ ದಿನ ಬೆಳಗಾದರೆ ಸಾಕಷ್ಟು ಸಿನಿಮಾಗಳು ಸೆಟ್ಟೇರುತ್ತವೆ. ಕೆಲವು ಪೂರ್ಣಗೊಂಡು ರಿಲೀಸ್ ಕೂಡ ಆಗುತ್ತವೆ. ಈ ಪೈಕಿ ಕೆಲವು ಸಿನಿಮಾಗಳು ಟೈಟಲ್ ಮೂಲಕ ಸದ್ದು ಮಾಡಿದರೆ, ಇನ್ನೂ ಕೆಲವು ಕಥೆಯ ಕಾರಣಕ್ಕೆ ಸದ್ದು ಮಾಡುತ್ತವೆ. ಈಗ ಕನ್ನಡದಲ್ಲಿ ‘ಬಾಸ್’ ಹೆಸರಿನ (Boss) ಸಿನಿಮಾ ಬರುತ್ತಿದೆ. ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ. ಲವ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ತನುಷ್ ಶಿವಣ್ಣ ನಾಯಕ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಈ ಚಿತ್ರ ಟೈಟಲ್ ಹಾಗೂ ಕಥೆಯ ಕಾರಣಕ್ಕೆ ಚರ್ಚೆ ಆಗುತ್ತಿದೆ.
‘ಬಾಸ್’ ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ ಅನ್ನೋದು ವಿಶೇಷ. ಸೆಲೆಬ್ರಿಟಿಯೊಬ್ಬ ಪ್ರೇಯಸಿಗಾಗಿ ವ್ಯಕ್ತಿಯನ್ನು ಕೊಂದು, ಆ ಶವನ ಮೋರಿಗೆ ಎಸೆಯುತ್ತಾನೆ. ನಂತರ ಸೆಲೆಬ್ರಿಟಿ ಆ ಕೇಸ್ನ ಮುಚ್ಚಿ ಹಾಕಲು ಪ್ರಯತ್ನಿಸುತ್ತಾನಂತೆ. ಇದು ಚಿತ್ರದ ಕಥೆ! ‘ಇದು ನೈಜ ಘಟನೆ ಆಧಾರಿತ ಸಿನಿಮಾ. ಆದರೆ, ಇದು ಅದಲ್ಲ’ ಎನ್ನುತ್ತಾರೆ ನಿರ್ದೇಶಕರು.
ಬೆಂಗಳೂರಿನಲ್ಲಿ ಒಂದೇ ಹಂತದಲ್ಲಿ ‘ಬಾಸ್’ ಶೂಟಿಂಗ್ ಪೂರ್ಣಗೊಂಡಿದೆ. ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಈ ಚಿತ್ರದಲ್ಲಿ ತನುಷ್ ಶಿವಣ್ಣಗೆ ಜೊತೆಯಾಗಿ ಮೋನಿಕಾ ಗೌಡ ನಟಿಸಿದ್ದಾರೆ. ‘ಬಾಸ್’ ಚಿತ್ರಕ್ಕೆ ‘ಸತ್ಯಮೇವ ಜಯತೇ’ ಎಂಬ ಅಡಿಬರ ಇದೆ. ಕೆಲವೇ ದಿನಗಳಲ್ಲಿ ಟೀಸರ್ ಕೂಡ ಬರಲಿದೆ. ಇದಾದ ಬಳಿಕ ಸಿನಿಮಾ ಬಗ್ಗೆ ಕ್ಲ್ಯಾರಿಟಿ ಸಿಗಲಿದೆ ಎಂಬುದು ಅವರ ಆಲೋಚನೆ.
ಇದನ್ನೂ ಓದಿ: ನಿಲ್ಲಲೇ ಇಲ್ಲ ‘ಬಾಸ್ ಬಾಸ್ ಡಿ ಬಾಸ್’ ಜೈಕಾರ: ಬೇಸರದಿಂದ ಮಾತು ನಿಲ್ಲಿಸಿದ ರಚಿತಾ ರಾಮ್
ಈ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರದಲ್ಲಿ ತನುಷ್ ನಟಿಸಿದ್ದಾರೆ. ‘ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರ ಮಾಡಿದ್ದೇನೆ. ನನ್ನನ್ನು ಎಲ್ಲರೂ ಬಾಸ್ ಎನ್ನುತ್ತಾರೆ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು ಶಿವಣ್ಣ. ಈ ಚಿತ್ರದಲ್ಲಿ ಮಲಯಾಳಂ ನಟ ವಿಜೇಶ್ ಲೀ ಪೊಲೀಸ್ ಪಾತ್ರ ಮಾಡಿದ್ದಾರೆ. ಸಂದೀಪ್, ಸುಜನ್ ಶೆಟ್ಟಿ, ವೀರೇನ್ ಕೇಶವ್, ಜೋಶ್ ಅಕ್ಷಯ್, ಮಹೇಶ್, ದುನಿಯಾ ಮಹೇಶ್, ಮನು, ಮಂಡ್ಯ ರವಿ, ಪೃಥ್ವಿ, ನಿಶಾಂತ್, ಮಹೇಂದ್ರ ರಾವ್, ಮೋಹಿತ್, ಲಕ್ಷ್ಮಣ್ ಪೂಜಾರಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಛಾಯಾಗ್ರಹಣ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.