‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕನ್ನಡದಲ್ಲಿ ಹಿಟ್ ಆಯಿತು. ಈ ಚಿತ್ರ ಕಳೆದ ವಾರ ‘ಬಾಯ್ಸ್ ಹಾಸ್ಟೆಲ್’ (Boys Hostel Movie) ಆಗಿ ತೆಲುಗಿನಲ್ಲೂ ರಿಲೀಸ್ ಆಗಿದೆ. ಅಲ್ಲಿನ ಯುವಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಒಳ್ಳೆಯ ಕಮಾಯಿ ಮಾಡುತ್ತಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದ ಚಿತ್ರ ಯುವಜನತೆಯ ಸೆಳೆದಿದೆ. ಮುಂದಿನ ದಿನಗಳಲ್ಲಿ ಕನ್ನಡದ ಮತ್ತಷ್ಟು ಸಿನಿಮಾಗಳು ಪರಭಾಷೆಯಲ್ಲಿ ಮಿಂಚಲು ರೆಡಿ ಆಗಿವೆ.
ಇಂದು (ಆಗಸ್ಟ್ 30) ರಕ್ಷಾ ಬಂಧನ. ಈ ಕಾರಣಕ್ಕೆ ಚಿತ್ರತಂಡದಿಂದ ಆಫರ್ ನೀಡಲಾಗಿದೆ. ಚಿತ್ರಮಂದಿರದಲ್ಲಿ ಒಂದು ಟಿಕೆಟ್ ಖರೀದಿ ಮಾಡಿದರೆ ಮತ್ತೊಂದು ಟಿಕೆಟ್ ಉಚಿತವಾಗಿ ಸಿಗಲಿದೆ. ಈ ಮೂಲಕ ಯುವಜನತೆಯ ಆಕರ್ಷಿಸಲು ಸಿನಿಮಾ ತಂಡ ಹೊಸ ಪ್ಲ್ಯಾನ್ ಮಾಡಿದೆ.
‘ಬಾಯ್ಸ್ ಹಾಸ್ಟೆಲ್’ ಚಿತ್ರವನ್ನು ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಅಕ್ಕಿನೇನಿ ನಾಗಾರ್ಜುನ ಅವರು ಸಿನಿಮಾ ನೋಡಿದ್ದರು. ‘ನಾನು ಬಾಯ್ಸ್ ಹಾಸ್ಟೆಲ್ ಸಿನಿಮಾ ನೋಡಿದೆ. ಕ್ರೇಜಿ ಆಗಿದೆ. ನನ್ನ ಹಾಸ್ಟೆಲ್ ದಿನಗಳು ನೆನಪಾದವು’ ಎಂದು ಅಕ್ಕಿನೇನಿ ನಾಗಾರ್ಜುನ ಅವರು ಬರೆದುಕೊಂಡಿದ್ದರು.
‘ಹಾಸ್ಟೆಲ್ ಹುಡುಗರು’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಎಲ್ಲರೂ ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಟಾಲಿವುಡ್ನಲ್ಲೂ ಒಳ್ಳೆಯ ಬಾಯಿ ಮಾತಿನ ಪ್ರಚಾರ ಸಿಗುತ್ತಿದೆ. ಇದು ಚಿತ್ರಕ್ಕೆ ಸಹಕಾರಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ.
‘ಗುಲ್ಮೊಹರ್ ಫಿಲ್ಮ್ಸ್’ ಹಾಗೂ ‘ವರುಣ್ ಸ್ಟುಡಿಯೋಸ್’ ಸಂಸ್ಥೆಗಳು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾನ ನಿರ್ಮಿಸಿವೆ. ವಿದೇಶದಲ್ಲಿಯೂ ಬಿಡುಗಡೆ ಆಗಿ ಚಿತ್ರ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತು. ತೆಲುಗಿನಲ್ಲಿ ‘ಚಾಯ್ ಬಿಸ್ಕೆಟ್ ಫಿಲ್ಮ್ಸ್’ ಮತ್ತು ‘ಅನ್ನಪೂರ್ಣ ಸ್ಟುಡಿಯೋಸ್’ ಸಂಸ್ಥೆ ಜಂಟಿಯಾಗಿ ‘ಬಾಯ್ಸ್ ಹಾಸ್ಟೆಲ್’ ಸಿನಿಮಾ ಅನ್ನು ಆಗಸ್ಟ್ 26ರಂದು ಬಿಡುಗಡೆ ಮಾಡಿವೆ. ರಮ್ಯಾ ಬದಲು ರಶ್ಮಿ ಗೌತಮ್ ತೆಲುಗಿನಲ್ಲಿ ಬಣ್ಣ ಹಚ್ಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ