ಅಂಡರ್ವರ್ಲ್ಡ್ ಡಾನ್ ಆಗಿದ್ದ ಜಯರಾಜ್ ಜೀವನ ಕಥೆ ಆಧರಿಸಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ‘ಹೆಡ್ ಬುಷ್’ ಎಂದು ನಾಮಕರಣ ಮಾಡಲಾಗಿದ್ದು, ಧನಂಜಯ ನಾಯಕ. ಈ ಸಿನಿಮಾದಲ್ಲಿ ಜಯರಾಜ್ ಗರ್ಲ್ಫ್ರೆಂಡ್ ಆಗಿ ಪಾಯಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಸ್ಯಾಂಡಲ್ವುಡ್ಗೆ ಕಾಲಿಡುವುದಕ್ಕೂ ಮೊದಲೇ ಕಿರಿಕ್ ಮಾಡಿಕೊಂಡಿದ್ದಾರೆ. ಹಾಗಂತ ಇದು ಭಾಷಾ ವಿಚಾರಕ್ಕೆ ಅಲ್ಲ. ಅವರು ವೈಯಕ್ತಿಕ ವಿಚಾರಕ್ಕೆ.
ಪಾಯಲ್ ರಜಪೂತ್ ತೆಲಂಗಾಣದ ಪೆಡ್ಡಪಲ್ಲಿಗೆ ತೆರಳಿದ್ದರು. ಅಲ್ಲಿ ಅವರು ದೊಡ್ಡ ಮಾಲ್ ಒಂದನ್ನು ಉದ್ಘಾಟನೆ ಮಾಡಿದ್ದರು. ಈ ವೇಳೆ ಅವರು ಮಾಸ್ಕ್ ಧರಿಸಿರಲಿಲ್ಲ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆ ನಡೆದಿದ್ದು ಜುಲೈ 11ರಂದು. ಪಾಯಲ್ ನೋಡೋಕೆ ದೊಡ್ಡ ಅಭಿಮಾನಿ ಬಳಗ ಸೇರಿತ್ತು. ಆದರೆ ಪಾಯಲ್ ಸೆಲೆಬ್ರಿಟಿ ಆಗಿದ್ದರೂ ಮಾಸ್ಕ್ ಧರಿಸಿರಲಿಲ್ಲ. ಸೆಲೆಬ್ರಿಟಿಗಳನ್ನು ಸಾಕಷ್ಟು ಜನರು ಫಾಲೋ ಮಾಡುತ್ತಿರುತ್ತಾರೆ. ಆದರೆ, ಇದನ್ನು ಪಾಯಲ್ ಮರೆತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೋರ್ಟ್ನಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರಿಗೆ ಪ್ರಕರಣ ದಾಖಲು ಮಾಡಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ.
ಜಯರಾಜ್ ಗರ್ಲ್ಫ್ರೆಂಡ್ ಈಗಲೂ ಪಂಜಾಬ್ನಲ್ಲಿ ಇಬ್ಬರು ಮಕ್ಕಳೊಂದಿಗೆ ಬದುಕಿದ್ದಾರೆ. ವಿಶೇಷ ಎಂದರೆ ಪಾಯಲ್ ಅವರು ಭೇಟಿ ಮಾಡೋಕೆ ಉತ್ಸುಕರಾಗಿದ್ದಾರೆ. 70-80ರ ಅವಧಿಯಲ್ಲಿ ಈ ಕಥೆ ಸಾಗಲಿದೆ. ಶೂನ್ಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
2017ರಲ್ಲಿ ತೆರೆಗೆ ಬಂದ ಪಂಜಾಬಿ ಸಿನಿಮಾ ‘ಚನ್ನ ಮೇರೆಯಾ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಪಾಯಲ್. ಟಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ‘ಆರ್ಎಕ್ಸ್ 100’ ಸಿನಿಮಾದಲ್ಲಿ ಪಾಯಲ್ ನಟಿಸಿದ್ದರು. ಇದು ಅವರ ಮೊದಲ ತೆಲುಗು ಸಿನಿಮಾ. ನಂತರ ‘ಆರ್ಡಿಎಕ್ಸ್ ಲವ್’ ಸಿನಿಮಾ ಸೇರಿ ಸಾಕಷ್ಟು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಹೆಡ್ ಬುಷ್ ಅವರ ಮೊದಲ ಕನ್ನಡ ಸಿನಿಮಾ.
ಇದನ್ನೂ ಓದಿ: Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ
Published On - 9:23 pm, Sat, 21 August 21