ರನ್ಯಾ ಬಳಿಕ ಸ್ಯಾಂಡಲ್​ವುಡ್​ನ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್

Ragini Dwivedi-Sanjana Galrani: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಸಿಲುಕಿಕೊಂಡಿರುವುದು ದೇಶದಾದ್ಯಂತ ಸುದ್ದಿಯಾಗಿದೆ. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಇನ್ನಿಬ್ಬರು ನಟಿಯರಿಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದಾರೆ. ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರ ವಿರುದ್ಧ ಸುಪ್ರೀಂಕೋರ್ಟ್ಗೆ ಮೊರೆ ಹೋಗಿದ್ದಾರೆ.

ರನ್ಯಾ ಬಳಿಕ ಸ್ಯಾಂಡಲ್​ವುಡ್​ನ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್
Sanjana Galrani Ragini

Updated on: Mar 12, 2025 | 11:12 AM

ನಟಿ ರನ್ಯಾ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ರನ್ಯಾ ಪ್ರಕರಣ ಇದೀಗ ದೇಶದಾದ್ಯಂತ ಕುತೂಹಲ ಕೆರಳಿಸಿದೆ. ಪ್ರಕರಣದ ತನಿಖೆ ಆದಷ್ಟು ಕುತೂಹಲಕಾರಿ ವಿಷಯಗಳು ಹೊರಗೆ ಬರುತ್ತಿವೆ. ರನ್ಯಾರ ಹಿಂದೆ ರಾಜಕಾರಣಿಗಳು, ಪೊಲೀಸ್ ಉನ್ನತ ಅಧಿಕಾರಿಗಳು ಇದ್ದಾರೆ ಎನ್ನಲಾಗುತ್ತಿದೆ. ನಟಿ ರನ್ಯಾರ ಮೇಲೆ ದೇಶದ ಗಮನ ನೆಟ್ಟಿರುವಾಗಲೇ ಸ್ಯಾಂಡಲ್​ವುಡ್​ನ ಇನ್ನಿಬ್ಬರು ನಟಿಯರಿಗೆ ಸಂಕಷ್ಟ ಶುರುವಾಗಿದೆ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಎಫ್​ಐಆರ್ ರದ್ದು ಪ್ರಶ್ನಿಸಿ ಸಿಸಿಬಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗುತ್ತಿದೆ.

2020 ರಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಪೊಲೀಸರು ಬಂಧಿಸಿದ್ದರು. ನಟಿಯರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್​ಐಆರ್ ರದ್ದು ಕೋರಿ ಅರ್ಜಿ ಹಾಕಿದ್ದರು. ಅಲ್ಲದೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಗಿಣಿ ವಿರುದ್ಧ ಪ್ರಕರಣವನ್ನು ಸಾಕ್ಷ್ಯಗಳ ಕೊರತೆಯಿಂದಾಗಿ ರದ್ದು ಮಾಡಿತ್ತು. ಸಂಜನಾ ವಿರುದ್ಧ ದಾಖಲಾಗಿದ್ದ ಎಫ್​ಐಆರ್ ಸಹ ರದ್ದಾಗಿತ್ತು.

ಇದೀಗ ಸಿಸಿಬಿಯು ಹೈಕೋರ್ಟ್​ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದೆ. ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಮೇರೆಗೆ ಇಬ್ಬರು ನಟಿಯರ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಿಂದೆ ದರ್ಶನ್ ಪ್ರಕರಣದಲ್ಲಿಯೂ ಸಹ ರಾಜ್ಯ ಪೊಲೀಸರು ಹೈಕೋರ್ಟ್​ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದರಿಂದ ಹೆಚ್ಚಿನ ಉಪಯೋಗವೇನೂ ಆದಂತಿಲ್ಲ. ಇದೀಗ ಐದು ವರ್ಷ ಹಳೆಯ ಪ್ರಕರಣದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಹಿಂದೆ ಖಾವಿ ಕೃಪಾಕಟಾಕ್ಷ: ಪ್ರಭಾವಿ ಸ್ವಾಮೀಜಿ ಶಾಮೀಲು

ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರು ಮಾದಕ ವಸ್ತು ಸರಬರಾಜಿಗೆ ಸಹಕಾರ ನೀಡಿದ್ದಾರೆ. ಮಾದಕ ವಸ್ತು ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ರಾಗಿಣಿ, ಸಂಜನಾ ಜೊತೆಗೆ ಇನ್ನೂ ಕೆಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅದೇ ಸಮಯದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ನಟ, ನಟಿಯರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಲೂಸ್ ಮಾದ ಯೋಗಿ, ದಿಗಂತ್ ಸೇರಿದಂತೆ ಇನ್ನೂ ಹಲವರನ್ನು ಕರೆಸಿ ವಿಚಾರಣೆ ನಡೆಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ