‘ನಾನು ನೋಡೋದೂ ಇಲ್ಲ’; ಅಶ್ಲೀಲ ಕಮೆಂಟ್ಗಳಿಗೆ ಡೋಂಟ್ ಕೇರ್ ಎಂದ ನಿವೇದಿತಾ
ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಯವರೊಂದಿಗಿನ ವಿಚ್ಛೇದನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಮೇಲೆ ನಡೆಯುತ್ತಿರುವ ಟ್ರೋಲಿಂಗ್‌ಗೆ ಅವರು ಪ್ರತಿಕ್ರಿಯಿಸಿ, ನಕಾರಾತ್ಮಕ ಅಭಿಪ್ರಾಯಗಳನ್ನು ಅವರು ಗಮನಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ (Chandan Shetty) ವಿಚ್ಛೇದನ ಪಡೆದು ಬೇರೆ ಆಗಿದ್ದಾರೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಸಖತ್ ಆ್ಯಕ್ಟೀವ್ ಆಗಿದ್ದು, ಸಾಕಷ್ಟು ರೀಲ್ಸ್ ಮಾಡುತ್ತಿದ್ದಾರೆ. ಕೆಲವು ಫೋಟೋ ಹಾಗೂ ವಿಡಿಯೋಗಳಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡರು ಎಂದು ಕೆಲವರು ಅವರನ್ನು ಟ್ರೋಲ್ ಮಾಡಿದ್ದೂ ಇದೆ. ಇದಕ್ಕೆ ಅವರು ಬೇಸರ ಮಾಡಿಕೊಂಡಿಲ್ಲ. ಬದಲಿಗೆ, ನೀವು ಟ್ರೋಲ್ ಮಾಡೋದಾದರೆ ಮಾಡಿ ನನಗೇನೂ ಬೇಸರ ಇಲ್ಲ ಎಂದು ಅವರು ಹೇಳಿದ್ದಾರೆ.
‘ಮುದ್ದು ರಾಕ್ಷಸಿ’ ಚಿತ್ರದಲ್ಲಿ ಚಂದನ್ ಹಾಗೂ ನಿವೇದಿತಾ ಒಟ್ಟಾಗಿ ನಟಿಸಿದ್ದಾರೆ. ವಿಚ್ಛೇದನದ ಬಳಿಕವೂ ಇವರು ಒಟ್ಟಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಅವರು ಮಾತನಾಡಿದರು. ತಮ್ಮ ಬಗ್ಗೆ ಬರುತ್ತಿರೋ ಟ್ರೋಲ್ಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದರು.
‘ಬ್ಲೇಮ್ ಗೇಮ್ ನಡೆಯುತ್ತಲೇ ಇರುತ್ತದೆ. ಈ ರೀತಿ ಕೆಟ್ಟದಾಗಿ ಕಮೆಂಟ್ ಮಾಡಬಾರದು ಎಂದು ಅವರಿಗೇ ಅನಿಸಬೇಕು. ಏಕೆಂದರೆ, ಮಾನವೀಯತೆ ಎಲ್ಲರಲ್ಲೂ ಇರಲ್ಲ. ನನ್ನ ಕೆಲಸದ ಮೇಲೆ ಗಮನ ಹರಿಸುತ್ತೇನೆ. ಈ ಮೂಲಕ ನಾನು ನಾನು ಇದರಿಂದ ಓವರ್ಕಮ್ ಮಾಡುತ್ತೇನೆ. ಯಾರಾದರೂ ನನ್ನ ಬಗ್ಗೆ ಏನಾದರೂ ತಿಳಿದುಕೊಂಡರೆ ಅದು ಅವರ ಪ್ರಾಬ್ಲಂ. ಇದಕ್ಕೆ ನಾನು ಕುಗ್ಗಲ್ಲ. ಏಕೆಂದರೆ ನಾನು ಅಷ್ಟು ವೀಕ್ ಅಲ್ಲ. ನನ್ನ ಕೆಲಸವನ್ನು ಪ್ಯಾಷನೇಟ್ ಆಗಿ ಮಾಡುತ್ತೇನೆ’ ಎಂದು ನಿವೇದಿತಾ ಹೇಳಿದ್ದಾರೆ.
‘ಕಮೆಂಟ್ ಮಾಡುವವರು ಮಾಡಿಕೊಳ್ಳಳಿ. ನಾನು ಅದನ್ನು ಓದೋದೂ ಇಲ್ಲ. ಬೇರೆಯವರಿಗೆ ಕೆಟ್ಟದ್ದು ಬಯಸಿದರೆ ಅವರಿಗೆ ಖುಷಿ ಸಿಗುತ್ತದೆ ಎಂದರೆ ಕಮೆಂಟ್ ಮಾಡಿಕೊಳ್ಳಲಿ. ಇದೆಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ. ಒಂದಷ್ಟು ನೆಗೆಟಿವ್ ಇದ್ದರೂ ತುಂಬಾ ಇಷ್ಟಪಡುವವರು ಇದ್ದಾರೆ. ಪ್ರೀತಿಯಿಂದ ಮಾತನಾಡುವವರು ಜಾಸ್ತಿ ಜನ ಇದ್ದಾರೆ. ಅದನ್ನು ನೋಡಿದಾಗ ಖುಷಿ ಆಗುತ್ತದೆ’ ಎಂಬುದು ನಿವೇದಿತಾ ಮಾತು.
ಇದನ್ನೂ ಓದಿ:
‘ಪ್ರತಿ ಹೆಣ್ಣು ಮಗುವಿಗೂ ಅವರದ್ದೇ ಆದ ಸಂಪಾದನೆ ಇರಬೇಕು. ಆಗ ಅವರು ಯಶಸ್ಸು ಕಾಣಬಹುದು. ಎಲ್ಲರ ಜೀವನದಲ್ಲೂ ಕಷ್ಟ ಇರುತ್ತದೆ. ಫ್ರೀಡಂ ಆಫ್ ಸ್ಪೀಚ್ ಇದೆ ಅನ್ನೋ ಕಾರಣಕ್ಕೆ ಏನೂ ಕಮೆಂಟ್ ಮಾಡಬೇಡಿ. ನನಗೆ ಅದರಿಂದ ಬೇಸರ ಇಲ್ಲ. ನನ್ನ ಟ್ರೋಲ್ ಮಾಡಿ, ನಾನು ತಲೆಕೆಡಿಸಿಕೊಳ್ಳಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Wed, 12 March 25