ರಾಧಿಕಾ ಕುಮಾರಸ್ವಾಮಿಗೆ ಬಂತು CCB ಬುಲಾವ್, ನಾಳೆಯೇ ವಿಚಾರಣೆ

| Updated By: ಸಾಧು ಶ್ರೀನಾಥ್​

Updated on: Jan 07, 2021 | 6:05 PM

ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ರಾಧಿಕಾ ಕುಮಾರಸ್ವಾಮಿಗೆ ಬಂತು CCB ಬುಲಾವ್, ನಾಳೆಯೇ ವಿಚಾರಣೆ
Follow us on

ಬೆಂಗಳೂರು: ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಯುವರಾಜ್​ ಸ್ವಾಮಿ ವಂಚನೆ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿಬಂದಿತ್ತು. ಟಿವಿ9 ನಿನ್ನೆ ಬೆಳಗ್ಗೆ 9 ಗಂಟೆಗೆ ಈ ಕುರಿತು ವಿಸ್ತೃತ ವರದಿ ಪ್ರಸಾರಮಾಡಿತ್ತು.

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್​ರನ್ನು CCB ಅಧಿಕಾರಿಗಳು ಇತ್ತೀಚೆಗೆ ವಿಚಾರಣೆ ನಡೆಸಿದ್ದರು. ಆ ವೇಳೆ ರಾಧಿಕಾ ಕುಮಾರಸ್ವಾಮಿ ಅಕೌಂಟ್​ಗೆ ವರ್ಗಾವಣೆಯಾದ ಹಣದ ಬಗ್ಗೆ ಕೆಲವು ದಾಖಲೆಗಳನ್ನು ಸಲ್ಲಿಸಿದ್ದರು. ಜೊತೆಗೆ ಪ್ರಕರಣದಲ್ಲಿಯಾಗಲಿ ಅಥವಾ ಹಣ ವರ್ಗಾವಣೆಯಲ್ಲಿ ರಾಧಿಕಾ ಕುಮಾರಸ್ವಾಮಿ ಯಾವುದೇ ಅಕ್ರಮ ಎಸಗಿಲ್ಲ ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದರು.

ಆದರೆ ತಾಜಾ ಬೆಳವಣಿಗೆಯಲ್ಲಿ.. ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ಬಂದಿದೆ ಎಂದು ರಾಧಿಕಾ ಸಹೋದರ ರವಿರಾಜ್ ಅವರೇ ಟಿವಿ 9ಗೆ ಮಾಹಿತಿ ನೀಡಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗೋದು ಕನ್​ಫರ್ಮ್. ನಾನೂ ಸಹ ರಾಧಿಕಾ ಜೊತೆ ಹೋಗುವೆ. ಖಂಡಿತ ಸಿಸಿಬಿ ವಿಚಾರಣೆಗೆ ಹಾಜರಾಗ್ತೀವಿ ಅಂತಾ ರವಿರಾಜ್ ಹೇಳಿದ್ದಾರೆ.

ರಾಧಿಕಾ ಕುಮಾರಸ್ವಾಮಿಗೆ ಶೀಘ್ರವೇ ಸಿಸಿಬಿ ನೋಟಿಸ್​? ಅಣ್ಣನ ಬಳಿ ಸಿಕ್ಕಿವೆ ಬೇನಾಮಿ ಅಕೌಂಟ್ ಡೀಟೇಲ್ಸ್​

ನಿಜಕ್ಕೂ ‘ನಟಿ’ ರಾಧಿಕಾ ಕುಮಾರಸ್ವಾಮಿ ಸಂಭಾವನೆ ಇಷ್ಟಿದೆಯಾ.. ರಮ್ಯಾ, ರಶ್ಮಿಕಾಗಿಂತಲೂ ಹೆಚ್ಚಾಯ್ತಾ!?

Published On - 5:37 pm, Thu, 7 January 21