AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್​-2 ಟೀಸರ್​ ಲೀಕ್​ ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ- ಯಶ್​

ಮೆಷಿನ್​ ಗನ್​ನಲ್ಲಿ ಬುಲೆಟ್​ ಹಾರಿಸೋದು, ಕಾದ ಗನ್ನಿನ ನಳಿಕೆ ಮೂಲಕ ರಾಕಿ ಭಾಯ್​ ಸಿಗರೇಟ್​ ಹಚ್ಚಿಕೊಳ್ಳೋ ದೃಶ್ಯಗಳು ಕಣ್ಣಿಗೆ ಸಾಕಷ್ಟು ಮುದ ನೀಡಿದೆ. ಇನ್ನು, ರವೀನಾ ಟಂಡನ್​ ರಾಜಕಾರಣಿ ಲುಕ್​ನಲ್ಲಿ ಮಿಂಚಿದ್ದಾರೆ.

ಕೆಜಿಎಫ್​-2 ಟೀಸರ್​ ಲೀಕ್​ ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ- ಯಶ್​
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on:Jan 13, 2021 | 9:54 AM

Share

ಯಶ್​ ಅಭಿನಯದ ಕೆಜಿಎಫ್​-2 ಸಿನಿಮಾ ಟೀಸರ್ ಅಂದುಕೊಂಡಿದ್ದಕ್ಕಿಂತಲೂ ಒಂದು ದಿನ ಮೊದಲೇ ರಿಲೀಸ್​ ಆಗಿದೆ. ರಾಕಿ ಭಾಯ್​ ಭರ್ಜರಿ ಎಂಟ್ರಿ ಕೊಟ್ಟಿದ್ದು, ಚಿತ್ರದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

ಕೆಜಿಎಫ್​-1 ಚಿತ್ರದಲ್ಲಿ ‘ಪವರ್​ಫುಲ್​ ಪೀಪಲ್​ ಕೇಮ್​ ಫ್ರಮ್​ ಪವರ್​ಫುಲ್​ ಪ್ಲೇಸಸ್​’ ಎನ್ನುವ ಡೈಲಾಗ್​ ಬಳಕೆ ಮಾಡಲಾಗಿತ್ತು. ಈ ಬಾರಿ ‘ಪವರ್​ಫುಲ್​ ಪೀಪಲ್​ ಮೇಕ್​ ಪ್ಲೇಸಸ್​ ಪವರ್​ಫುಲ್​’ ಎನ್ನುವ ಡೈಲಾಗ್​ ಬಳಸಲಾಗಿದ್ದು, ಸಖತ್​ ಥ್ರಿಲ್​ ನೀಡಿದೆ. ಅಲ್ಲದೆ, ಸಿನಿಮಾದಲ್ಲಿ ಸಂಜಯ್​ ದತ್​ ಹಾಗೂ ಯಶ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೆಷಿನ್​ ಗನ್​ನಲ್ಲಿ ಬುಲೆಟ್​ ಹಾರಿಸೋದು, ಕಾದ ಗನ್ನಿನ ನಳಿಕೆ ಮೂಲಕ ರಾಕಿ ಭಾಯ್​ ಸಿಗರೇಟ್​ ಹಚ್ಚಿಕೊಳ್ಳೋ ದೃಶ್ಯಗಳು ಕಣ್ಣಿಗೆ ಸಾಕಷ್ಟು ಮುದ ನೀಡಿದೆ. ಇನ್ನು, ರವೀನಾ ಟಂಡನ್​ ರಾಜಕಾರಣಿ ಲುಕ್​ನಲ್ಲಿ ಮಿಂಚಿದ್ದಾರೆ.

ಇನ್ನು, ಚಿತ್ರದ ಟೀಸರ್​ ಲೀಕ್​ ಆದ ಬಗ್ಗೆ ಯಶ್​ ಉತ್ತರ ನೀಡಿದ್ದಾರೆ. ಯಾರೋ ಪುಣ್ಯಾತ್ಮರು, ಮಹಾನುಭಾವರು ಟೀಸರ್​ ಲೀಕ್​ ಮಾಡಿದ್ದಾರೆ. ಅವರಿಗೆ ಇದರಿಂದ ಏನು ಖುಷಿ ಸಿಗತ್ತೋ ಗೊತ್ತಿಲ್ಲ.  ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ. ಅಭಿಮಾನಿಗಳಿಗೋಸ್ಕರ ರಾತ್ರಿಯೇ ರಿಲೀಸ್​ ಮಾಡಿದ್ದೇವೆ, ಎಂದಿದ್ದಾರೆ ಯಶ್.

Published On - 9:58 pm, Thu, 7 January 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More