ನಟಿ ಸಂಜನಾ ಗಲ್ರಾನಿ CCB ವಶ, ಕಚೇರಿಗೆ ಕರೆದೊಯ್ಯುವ ಸಾಧ್ಯತೆ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಕೇಸ್ಗೆ ಸಂಬಂಧಿಸಿ ಇಂದು ಬೆಳ್ಳಂ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದರು. ಈಗ ಸಂಜನಾ ಅವರನ್ನು ಸಿಸಿಬಿ ಅಧಿಕಾರಿಗಳು ಇಂದಿರಾನಗರದ ಫ್ಲ್ಯಾಟ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಸಂಜನಾ ಅವರಿಂದ ಅವರ ಮೊಬೈಲನ್ನೂ ಸಹ ವಶಕ್ಕೆ ಪಡೆದಿದ್ದು, ಇಂದಿರಾನಗರದ ಫ್ಲ್ಯಾಟ್‌ನಲ್ಲೇ ಸಿಸಿಬಿಯಿಂದ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ವಿಚಾರಣೆಗಾಗಿ ನಟಿ ಸಂಜನಾಳನ್ನು ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ.
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಕೇಸ್ಗೆ ಸಂಬಂಧಿಸಿ ಇಂದು ಬೆಳ್ಳಂ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದರು. ಈಗ ಸಂಜನಾ ಅವರನ್ನು ಸಿಸಿಬಿ ಅಧಿಕಾರಿಗಳು ಇಂದಿರಾನಗರದ ಫ್ಲ್ಯಾಟ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.
ಸಂಜನಾ ಅವರಿಂದ ಅವರ ಮೊಬೈಲನ್ನೂ ಸಹ ವಶಕ್ಕೆ ಪಡೆದಿದ್ದು, ಇಂದಿರಾನಗರದ ಫ್ಲ್ಯಾಟ್‌ನಲ್ಲೇ ಸಿಸಿಬಿಯಿಂದ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ವಿಚಾರಣೆಗಾಗಿ ನಟಿ ಸಂಜನಾಳನ್ನು ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ.