ಸರೋಜಾ ದೇವಿ ನಿಧನ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ
B Saroja Devi demise: ಖ್ಯಾತ ನಟಿ ಬಿ ಸರೋಜಾ ದೇವಿ ಅವರು ನಿನ್ನೆ ನಿಧನ ಹೊಂದಿದ್ದು, ಹಲವಾರು ಮಂದಿ ಸಿನಿಮಾ ತಾರೆಯರು, ರಾಜಕಾರಣಿಗಳು, ಸಚಿವರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಹ ಟ್ವೀಟ್ ಮಾಡಿ ಸರೋಜಾ ದೇವಿ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಟ್ವೀಟ್ ಇಲ್ಲಿದೆ...

ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಬಿ ಸರೋಜಾ ದೇವಿ (Saroja Devi) ಅವರು ನಿನ್ನೆ (ಜುಲೈ 14) ನಿಧನ ಹೊಂದಿದ್ದು, ಚಿತ್ರರಂಗದ ಗಣ್ಯರು, ರಾಜಕಾರಣಿಗಳು ನಟಿಯ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು (ಜುಲೈ 15) ಬಿ ಸರೋಜಾ ದೇವಿ ಅವರ ಅಂತಿಮ ಕಾರ್ಯ ನಡೆಯಲಿದ್ದು, ಹಲವಾರು ಮಂದಿ ಗಣ್ಯರು, ಕುಟುಂಬದವರು ಕಾರ್ಯದಲ್ಲಿ ಭಾಗಿ ಆಗಲಿದ್ದಾರೆ. ಹಲವಾರು ಮಂದಿ ಸಚಿವರುಗಳು, ರಾಜಕಾರಣಿಗಳು ಬಿ ಸರೋಜಾ ದೇವಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮಾಡಿ, ‘ಕನ್ನಡದ ಹಿರಿಯ ನಟಿ, ಪಂಚ ಭಾಷೆಗಳಲ್ಲಿ ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಮಾಡಿರುವ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ. ಸರೋಜಾ ದೇವಿ ಅವರ ನಿಧನದ ಸುದ್ದಿ ನಿಜಕ್ಕೂ ಆಘಾತ ತಂದಿದೆ. ಇವರು ಪಂಚ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಚಿತ್ರರಂಗದಲ್ಲಿನ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು. ಅಗಲಿದ ಅವರ ಆತ್ಮಕ್ಕೆ ದೇವರು ಶಾಂತಿ ಸಿಗಲೆಂದು ಹಾಗೂ ಅಪಾರ ಅಭಿಮಾನಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್
ಕನ್ನಡದ ಹಿರಿಯ ನಟಿ, ಪಂಚ ಭಾಷೆಗಳಲ್ಲಿ ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಮಾಡಿರುವ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ. ಸರೋಜಾ ದೇವಿ ಅವರ ನಿಧನದ ಸುದ್ದಿ ನಿಜಕ್ಕೂ ಆಘಾತ ತಂದಿದೆ. ಇವರು ಪಂಚ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಚಿತ್ರರಂಗದಲ್ಲಿನ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ… pic.twitter.com/WHOEP9XJi6
— Pralhad Joshi (@JoshiPralhad) July 14, 2025
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸರೋಜಾ ದೇವಿ ನಿಧನಕ್ಕೆ ಟ್ವೀಟ್ ಮಾಡುವುದರ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಖ್ಯಾತ ಚಲನಚಿತ್ರ ನಟಿ ಬಿ. ಸರೋಜಾ ದೇವಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಭಾರತೀಯ ಸಿನಿಮಾ ಮತ್ತು ಸಂಸ್ಕೃತಿ ಕ್ಷೇತ್ರದ ಗೌರವಾನ್ವಿತ ಮತ್ತು ಅನುಕರಣೀಯ ವ್ಯಕ್ತಿಯಾಗಿದ್ದಾರೆ. ಸಿನಿಮಾ ರಂಗಕ್ಕೆ ಅವರ ವೈವಿಧ್ಯಮಯ ಕಾಣ್ಕೆ ತಲೆಮಾರುಗಳಾದ್ಯಂತ ಅಳಿಸಲಾಗದ ಗುರುತಾಗಿವೆ. ವಿವಿಧ ಭಾಷೆಗಳಲ್ಲಿ ಅವರು ಮಾಡಿರುವ ಕಾರ್ಯ ಅವರ ವೈವಿಧ್ಯಮಯ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
1938 ರಲ್ಲಿ ಜನಿಸಿದ ಬಿ ಸರೋಜಾ ದೇವಿ ಅವರು 1950ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ವರೆಗೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜ್ಕುಮಾರ್, ಎನ್ಟಿಆರ್, ಎಂಜಿಆರ್ ಇನ್ನೂ ಹಲವಾರು ಖ್ಯಾತ ನಟರುಗಳೊಟ್ಟಿಗೆ ಸರೋಜಾ ದೇವಿ ನಟಿಸಿದ್ದರು. ಅವರ ಕೊನೆಯ ಸಿನಿಮಾ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’. ಇಂದು ಚನ್ನಪಟ್ಟಣದಲ್ಲಿರುವ ಅವರ ತೋಟದಲ್ಲಿ ಅಂತಿಮ ಕಾರ್ಯ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




