‘ನೀವು ನನಗೆ ಈ ರೀತಿ ಮಾಡಬಾರದಿತ್ತು’; ವಿಜಯ್​ ಬಗ್ಗೆ ಬರೆದುಕೊಂಡ ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​

|

Updated on: Jun 17, 2021 | 6:07 PM

ಎಲ್ಲರ ಜತೆ ನಗುನಗುತ್ತಾ ಮಾತನಾಡುತ್ತಿದ್ದ ವಿಜಯ್​ ರಸ್ತೆ ಅಪಘಾತದಲ್ಲಿ ಮೃತಪಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಸಂಚಾರಿ ವಿಜಯ್​ ಬಗ್ಗೆ ಬಿಗ್​​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಬರೆದುಕೊಂಡಿದ್ದಾರೆ.

‘ನೀವು ನನಗೆ ಈ ರೀತಿ ಮಾಡಬಾರದಿತ್ತು’; ವಿಜಯ್​ ಬಗ್ಗೆ ಬರೆದುಕೊಂಡ ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​
ಚಕ್ರವರ್ತಿ ಚಂದ್ರಚೂಡ
Follow us on

ಸಂಚಾರಿ ವಿಜಯ್​ ಮೃತಪಟ್ಟಿದ್ದಾರೆ ಅನ್ನೋದನ್ನು ಸಾಕಷ್ಟು ಜನರಿಂದ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಎಲ್ಲರ ಜತೆ ನಗುನಗುತ್ತಾ ಮಾತನಾಡುತ್ತಿದ್ದ ವಿಜಯ್​ ರಸ್ತೆ ಅಪಘಾತದಲ್ಲಿ ಮೃತಪಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಸಂಚಾರಿ ವಿಜಯ್​ ಬಗ್ಗೆ ಬಿಗ್​​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಬರೆದುಕೊಂಡಿದ್ದಾರೆ.

‘ನಾನಾಗ ಬೈ ಎಲೆಕ್ಷನ್ ಕೆಲಸದಲ್ಲಿದ್ದೆ. ಸಂಚಾರಿ ವಿಜಯ್​ ಫೋನ್ ಮಾಡಿ ‘ನೀವೀಗ ಸುಳ್ಯಕ್ಕೆ ಬರ್ತೀರೋ ಇಲ್ವೋ? ಈ ಹಾಡು ನೀವೇ ತೆಗೀಬೇಕು. ಇದರ ಫಾರ್ಮೆಟ್ ಬೇರೆಯವರಿಗೆ ಗೊತ್ತಾಗಲ್ಲ. ಲೈನ್ಸ್ ತುಂಬಾ ಗಾಢವಾಗಿ ಬರೆದಿದೀರಾ’ ಅಂತ ಜಗಳ ಆಡಿದ. ಅಲ್ಲಿಗೆ ತೆರಳಿದೆ. ಹಾಡು ಎಲ್ಲಾ ಶೂಟ್ ಆಯ್ತು. ವಿಜೀನ ಗುಂಡಿಗಿಳಿಸಿ ಸಾಯೋ ದೃಶ್ಯ ಶೂಟ್ ಮಾಡುವಾಗ ಅದೆಷ್ಟು ನಕ್ಕಿದೀವಿ ಎಂದರೆ ವಿಜಿದು ನಂದು ನೂರು ಕೋತಿಯಾಟ. ನವೀನ್​ ಸಾಂಗ್ ಮುಗಿಸಿ ಅಂತ ಕೇಳಿಕೊಂಡರು. ಆಗ ಅಷ್ಟು ಖುಷಿಯಾಗಿದ್ವಿ. ಈಗ ನಿಂತು ಹೋದ ಜೀವಗಾನವನ್ನು ನಮ್ ಕರ್ಮ ನಾವೇ ಗುಂಡಿಗಿಳಿಸಿ ಬಂದ್ವಿ’ ಎಂದು ಬೇಸರದ ಮಾತುಗಳನ್ನಾಡಿದ್ದಾರೆ.

‘ಸತ್ತ ಶಾಟ್ ತೆಗೆದ ಮೇಲೆ ಮತ್ತೆ ನಗುತಾ ಎದ್ದು ಬರುವ ಶಾಟ್ ತಗಿಯೋದು ಸಿನಿಮಾ ಸಂಪ್ರದಾಯ. ಬನ್ನಿ ಸಾಮಿ ತೆಗೆಯೋಣ. ಈ ವೀಡಿಯೋ ಹಾಡನ್ನು ‘ಮೇಲೊಬ್ಬ ಮಾಯಾವಿ’ ಟೀಮ್ ವಿಜಿಗೆ ಗೌರವಾರ್ಥ ಬಿಡುಗಡೆ ಮಾಡಿದೆ. ನಾನಿಲ್ಲಿ ಒಬ್ಬನೇ ಇದೀನಿ. ಜೀವ ಹಿಂಡುತ್ತೆ. ಹೃದಯ ಕಲಕುತ್ತೆ. ಇದು ಬರೋಯೋವಾಗಲೂ ಕಣ್ಣೀರು. ಹಿಂಗ್ ಮಾಡಬಾರದಿತ್ತು ರೀ ನೀವು ನನಗೆ’ ಎಂದು ಚಕ್ರವರ್ತಿ ಬರೆದುಕೊಂಡಿದ್ದಾರೆ.

ಇನ್ನು, ಸಂಚಾರಿ ವಿಜಯ್​ ಹೆಸರಲ್ಲಿ ಚಕ್ರವರ್ತಿ ಒಂದು ಗಿಣಿಯನ್ನು ದತ್ತು ಪಡೆದುಕೊಂಡಿದ್ದಾರೆ. ಸದ್ಯ ಲಾಕ್​ಡೌನ್​ ಇರುವುದರಿಂದ ಎಲ್ಲ ಮೃಗಾಲಯಗಳ ಬಾಗಿಲು ಮುಚ್ಚಿವೆ. ಇದರಿಂದಾಗಿ ಅಲ್ಲಿನ ಪ್ರಾಣಿ ಪಕ್ಷಿಗಳ ಆಹಾರ ಮತ್ತು ದಿನನಿತ್ಯದ ನಿರ್ವಹಣೆ ಕಷ್ಟ ಆಗುತ್ತಿದೆ. ಹಾಗಾಗಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಳ್ಳುವಂತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಕರೆ ನೀಡಿದ್ದರು. ಅಂತೆಯೇ ಸಂಚಾರಿ ವಿಜಯ್​ ಹೆಸರಲ್ಲಿ ಚಕ್ರವರ್ತಿ ಗಿಣಿಯನ್ನು ದತ್ತು ಪಡೆದಿದ್ದಾರೆ.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಸಮಾಧಿಗೆ ಹಾಲು, ತುಪ್ಪ ಬಿಟ್ಟ ಕುಟುಂಬಸ್ಥರು