ಚಂದನ್​ ಶೆಟ್ಟಿ ಕಂಠದಲ್ಲಿ ‘ಇಂಟರ್​ವಲ್​’ ಸಿನಿಮಾ ಸಾಂಗ್​; ಇದು ಗಣೇಶನ ಹಾಡು

|

Updated on: Sep 11, 2024 | 7:16 PM

ಶಶಿರಾಜ್ ಅವರು ‘ಇಂಟರ್​ವಲ್​’ ಸಿನಿಮಾಗೆ ಹೀರೋ ಆಗಿದ್ದಾರೆ. ಗಣೇಶ ಚರ್ತುರ್ಥಿ ಪ್ರಯುಕ್ತ ಈ ಸಿನಿಮಾದ ಹೊಸ ಸಾಂಗ್​ ರಿಲೀಸ್​ ಆಗಿದೆ. ಚಂದನ್​ ಶೆಟ್ಟಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಹಬ್ಬದ ಸೀಸನ್​ನಲ್ಲಿ ಬಿಡುಗಡೆ ಆಗಿರುವ ಈ ಹಾಡು ಗಣೇಶನಿಗೆ ಸಂಬಂಧಿಸಿದ್ದು ಎಂಬುದು ವಿಶೇಷ. ‘ಇಂಟರ್​ವಲ್​’ ಸಿನಿಮಾ ತಂಡದ ಬಗ್ಗೆ ಇಲ್ಲಿದೆ ಮಾಹಿತಿ..

ಚಂದನ್​ ಶೆಟ್ಟಿ ಕಂಠದಲ್ಲಿ ‘ಇಂಟರ್​ವಲ್​’ ಸಿನಿಮಾ ಸಾಂಗ್​; ಇದು ಗಣೇಶನ ಹಾಡು
‘ಇಂಟರ್​ವಲ್’
Follow us on

ಕೆಲವು ದಿನಗಳ ಹಿಂದೆ ಫಸ್ಟ್ ಲುಕ್ ಪೋಸ್ಟರ್ ಮೂಲಕ ‘ಇಂಟರ್​​ವಲ್’ ಸಿನಿಮಾ ಗಮನ ಸೆಳೆದಿತ್ತು. ಹೊಸ ನಿರ್ದೇಶಕ ಭರತ್ ವರ್ಷ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ಯುವಕರು ಮೆಚ್ಚುವಂತಹ ಕಥೆ ಇರಲಿದೆ ಎಂಬುದಕ್ಕೆ ಫಸ್ಟ್​ ಲುಕ್​ ಸುಳಿವು ನೀಡಿತ್ತು. ಈಗ ‘ಆನಂದ್ ಆಡಿಯೋ’ ಮೂಲಕ ‘ಇಂಟರ್​ವಲ್’ ಸಿನಿಮಾದ ಹೊಸ ಸಾಂಗ್​ ಬಿಡುಗಡೆ ಆಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಕಡೆಗಳಿಂದ ಈ ಹಾಡಿಗೆ ಪಾಸಿಟಿವ್​ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಇದು ಗಣೇಶ ಚತುರ್ಥಿ ಸೀಸನ್​. ಗಣಪತಿ ಹಬ್ಬ ಎಂದರೆ ಯುವಕರಿಗೆ ಸಖತ್​ ಉತ್ಸಾಹ. ಈಗ ‘ಇಂಟರ್​ವಲ್​’ ಸಿನಿಮಾದಿಂದ ರಿಲೀಸ್​ ಆಗಿರುವ ಸಾಂಗ್​ ಕೂಡ ಗಣಪತಿಗೆ ಸಂಬಂಧಿಸಿದೆ ಎಂಬುದು ವಿಶೇಷ. ಈಗಾಗಲೇ ಗಣೇಶನ ಬಗ್ಗೆ ಇರುವ ಫೇಮಸ್​ ಹಾಡುಗಳ ಸಾಲಿಗೆ ಈ ಸಾಂಗ್​ ಕೂಡ ಸೇರ್ಪಡೆ ಆಗಿದೆ. ‘ಭರತವರ್ಷ್ ಪಿಕ್ಚರ್ಸ್’ ಬ್ಯಾನರ್​ ಮೂಲಕ ‘ಇಂಟರ್​ವಲ್’ ಸಿನಿಮಾ ಮೂಡಿಬಂದಿದೆ. ಈ ಗೀತೆಗೆ ಚಂದನ್ ಶೆಟ್ಟಿ ಅವರು ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಸಂದೇಶ ಕಳಿಸುವವರಿಗೆ ದರ್ಶನ್ ಪ್ರಕರಣ ಎಚ್ಚರಿಕೆ ಘಂಟೆ: ಚಂದನ್ ಶೆಟ್ಟಿ

ಈ ಹಾಡಿಗೆ ವಿಜಯ್ ಈಶ್ವರ್ ಅವರು ಸಾಹಿತ್ಯ ಬರೆದಿದ್ದಾರೆ. ವಿಕಾಸ್ ವಸಿಷ್ಠ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಗಣ ಗಣ ಗಣಪತಿ ಫಂಕ್ಷನ್ ಹಲೋ ಎವ್ರಿಬಡಿ ಸ್ವಲ್ಪ ಅಟೆನ್ಷನ್..’ ಎಂದು ಆರಂಭ ಆಗುವ ಈ ಸಾಂಗ್ ಬಹುತೇಕರ ಜೀವನದ ಗತವೈಭವವನ್ನು ತೆರೆದಿಡುವಂತಿದೆ. ಈ ಹಾಡಿನ ಜೊತೆಯಲ್ಲಿ ಸಿನಿಮಾದ ಕೆಲವು ಪಾತ್ರಗಳ ಪರಿಚಯ ಸಹ ಮಾಡಿಕೊಡಲಾಗಿದೆ. ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕುವ ಯುವಕರ ಗುಂಪಿನ ಹೋರಾಟದ ಕಥೆ ‘ಇಂಟರ್​ವಲ್​’ ಸಿನಿಮಾದಲ್ಲಿ ಇದೆ. ಅದಕ್ಕೆ ಜೊತೆಗೆ ರೋಚಕ ಅಂಶಗಳನ್ನು ಸೇರಿಸಿ ಸುಕಿ ಅವರು ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ.

ಬೆಂಗಳೂರು, ಶಿವಮೊಗ್ಗ ಸುತ್ತಮುತ್ತ ಶೂಟಿಂಗ್​ ಮಾಡಲಾಗಿದೆ. ಈಗ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಸ ಪೂರ್ಣಗೊಂಡಿವೆ. ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿರುವ ಶಶಿರಾಜ್ (ಬಾಲಾ) ಅವರು ‘ಇಂಟರ್​ವಲ್’ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಪ್ರಜ್ವಲ್ ಗೌಡ, ಸುಖಿ, ರಂಗನಾಥ್ ಶಿವಮೊಗ್ಗ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜ್ ಕಾಂತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಮೋದ್ ಮರವಂತೆ ಹಾಗೂ ಸುಖಿ ಸಾಹಿತ್ಯ ಬರೆದಿದ್ದಾರೆ. ಶಶಿಧರ್ ಅವರು ಸಂಕಲನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.