AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಣ್ ರಾಜ್ ನಟನೆಯ ಸಿನಿಮಾ ಸೇರಿ ಈ ವಾರ ಕನ್ನಡದಲ್ಲಿ ಹಲವು ಚಿತ್ರಗಳು ರಿಲೀಸ್; ಇಲ್ಲಿದೆ ವಿವರ

‘ಕೃಷ್ಣಂ ಪ್ರಣಯ ಸಖಿ’ ಹಾಗೂ ‘ಭೀಮ’ ಚಿತ್ರದ ಅಬ್ಬರ ಕೊಂಚ ಕಡಿಮೆ ಆದ ಹಿನ್ನೆಲೆಯಲ್ಲಿ ಈ ವಾರ ರಿಲೀಸ್ ಆಗುವ ಸಿನಿಮಾಗಳು ಹೈಪ್ ಪಡೆದುಕೊಳ್ಳೋ ಸಾಧ್ಯತೆ ಇದೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.  

ಕಿರಣ್ ರಾಜ್ ನಟನೆಯ ಸಿನಿಮಾ ಸೇರಿ ಈ ವಾರ ಕನ್ನಡದಲ್ಲಿ ಹಲವು ಚಿತ್ರಗಳು ರಿಲೀಸ್; ಇಲ್ಲಿದೆ ವಿವರ
ಕಿರಣ್ ರಾಜ್ ಸಿನಿಮಾ ಸೇರಿ ಈ ವಾರ ಕನ್ನಡದಲ್ಲಿ ಹಲವು ಚಿತ್ರಗಳು ರಿಲೀಸ್; ಇಲ್ಲಿದೆ ವಿವರ
ರಾಜೇಶ್ ದುಗ್ಗುಮನೆ
|

Updated on:Sep 11, 2024 | 11:55 AM

Share

ಈ ವಾರ ಗುರುವಾರ (ಸೆಪ್ಟೆಂಬರ್ 12) ಹಾಗೂ ಶುಕ್ರವಾರ (ಸೆಪ್ಟೆಂಬರ 13) ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಕನ್ನಡದಲ್ಲಿ ಕೆಲವು ಚಿತ್ರಗಳು ಬಿಡುಗಡೆ ಕಾಣುತ್ತಿವೆ. ‘ಕೃಷ್ಣಂ ಪ್ರಣಯ ಸಖಿ’ ಹಾಗೂ ‘ಭೀಮ’ ಚಿತ್ರದ ಅಬ್ಬರ ಕೊಂಚ ಕಡಿಮೆ ಆದ ಹಿನ್ನೆಲೆಯಲ್ಲಿ ಈ ವಾರ ರಿಲೀಸ್ ಆಗುವ ಸಿನಿಮಾಗಳು ಹೈಪ್ ಪಡೆದುಕೊಳ್ಳೋ ಸಾಧ್ಯತೆ ಇದೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

‘ರಾನಿ’

‘ರಾನಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಕಿರಣ್ ರಾಜ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ರಾಧ್ಯಾ ಆರ್, ರವಿ ಶಂಕರ್, ಯಶ್ ಶೆಟ್ಟಿ, ಧರ್ಮಣ್ಣ ಕಡೂರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಉಮೇಶ್ ಹೆಗ್ಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ.

ಕಾಲಾಪತ್ಥರ್

ವಿಕ್ಕಿ ವರುಣ್​, ಧನ್ಯಾ ರಾಮ್​ಕುಮಾರ್ ಮೊದಲಾದವರು ‘ಕಾಲಾಪತ್ಥರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿಕ್ಕಿ ವರುಣ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 13ರಂದು ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ರಸ್ತೆ ಅಪಘಾತಕ್ಕೆ ಒಳಗಾದ ‘ಕನ್ನಡತಿ’ ಕಿರಣ್​ ರಾಜ್​; ಸಿನಿಮಾ ರಿಲೀಸ್​ಗೂ ಮೊದಲೇ ಕಹಿ ಸುದ್ದಿ

ವಿಕಾಸಪರ್ವ

ವಿಕಾಸಪರ್ವ ಹೆಸರಿನ ಚಿತ್ರದಲ್ಲಿ ರೋಹಿತ್ ನಾಗೇಶ್, ಸ್ವಾತಿ ಎಚ್​ವಿ, ಅಶ್ವಿನ್ ಹಾಸನ್ ಮೊದಲಾದವರು ನಟಿಸುತ್ತಿದ್ದಾರೆ. ಅನ್ಬು ಅರಸ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

ಎ.ಆರ್.​ಎಂ.

ಇದಲ್ಲದೆ ಮಲಯಾಳಂನಲ್ಲಿ ‘ಎ.ಆರ್​.ಎಂ’ ಹೆಸರಿನ ಸಿನಿಮಾ ಮೂಡಿಬರುತ್ತಿದೆ. ಟುವಿನೋ ಥಾಮಸ್, ಕೃತಿ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:54 am, Wed, 11 September 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?