ಚಂದನ್​ ಶೆಟ್ಟಿ ಹೊಸ ಸಾಂಗ್​ ‘ಲಕ ಲಕ ಲ್ಯಾಂಬೋರ್ಗಿನಿ’ ಹೇಗಿದೆ? ಒಂದೇ ದಿನಕ್ಕೆ ಮಿಲಿಯನ್​ ವೀಕ್ಷಣೆ

Chandan Shetty | Laka Laka Lamborghini: ಚಂದನ್​ ಶೆಟ್ಟಿ ಅವರು ಈವರೆಗೆ ಮಾಡಿದ ಹಾಡುಗಳ ಪೈಕಿ ಇದು ಅತಿ ದುಬಾರಿ ಸಾಂಗ್​. ಆರ್​. ಕೇಶವ್ ಅವರು ತಮ್ಮ ಪುತ್ರಿಯ ಹುಟ್ಟುಹಬ್ಬಕ್ಕಾಗಿ ಈ ಹಾಡನ್ನು ನಿರ್ಮಿಸಿದ್ದಾರೆ.

ಚಂದನ್​ ಶೆಟ್ಟಿ ಹೊಸ ಸಾಂಗ್​ ‘ಲಕ ಲಕ ಲ್ಯಾಂಬೋರ್ಗಿನಿ’ ಹೇಗಿದೆ? ಒಂದೇ ದಿನಕ್ಕೆ ಮಿಲಿಯನ್​ ವೀಕ್ಷಣೆ
ಚಂದನ್​ ಶೆಟ್ಟಿ, ರಚಿತಾ ರಾಮ್​ ಅವರ ‘ಲಕ ಲಕ ಲ್ಯಾಂಬೋರ್ಗಿನಿ’ ಹಾಡು ರಿಲೀಸ್​
Edited By:

Updated on: Dec 30, 2021 | 12:11 PM

ಸಿನಿಮಾ ಸಂಗೀತ ಮತ್ತು ಮ್ಯೂಸಿಕ್​ ವಿಡಿಯೋಗಳ ಮೂಲಕ ಚಂದನ್ ಶೆಟ್ಟಿ (Chandan Shetty) ಗುರುತಿಸಿಕೊಂಡಿದ್ದಾರೆ. ಅವರ ರ‍್ಯಾಪ್​ ಗೀತೆಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಂದನ್​ ಶೆಟ್ಟಿ ಜೊತೆಗೆ ರಚಿತಾ ರಾಮ್​ (Rachita Ram) ಕೂಡ ಕೈ ಜೋಡಿಸಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ‘ಲಕ ಲಕ ಲ್ಯಾಂಬೋರ್ಗಿನಿ’ (Laka Laka Lamborghini) ಹಾಡು ಮೂಡಿಬಂದಿದೆ. ಬಿಂದ್ಯಾ ಮೂವೀಸ್​ ಮೂಲಕ ನಿರ್ಮಾಣವಾದ ಈ ಹಾಡು ಡಿ.29ರಂದು ಬಿಡುಗಡೆ ಆಗಿದೆ. ರಿಲೀಸ್​ ಆಗಿ ಒಂದು ದಿನ ಕಳೆಯುವುದರೊಳಗೆ ಯೂಟ್ಯೂಬ್​ನಲ್ಲಿ 13 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಗೀತೆಯ ಹೆಚ್ಚುಗಾರಿಕೆ. ಈ ಹಾಡಿನಲ್ಲಿ ಬಾಲ ಕಲಾವಿದೆ ಬೇಬಿ ಬಿಂದ್ಯಾ ಕೆ. ಗೌಡ ಕೂಡ ಕಾಣಿಸಿಕೊಂಡಿದ್ದಾಳೆ.

ಆರ್​. ಕೇಶವ್​ ನಿರ್ಮಾಣ ಮಾಡಿರುವ ಈ ಮ್ಯೂಸಿಕ್​ ವಿಡಿಯೋಗಾಗಿ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಶೇಖರ್​ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್​ ಸಂಕಲನ, ಮುರಳಿ ಮಾಸ್ಟರ್​ ನೃತ್ಯ ನಿರ್ದೇಶನ, ಮೋಹನ್​ ಬಿ. ಕೆರೆ ಕಲಾ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಿರ್ದೇಶಕ ನಂದಕಿಶೋರ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ನಿರ್ಮಾಪಕ ಕೆ. ಮಂಜು ಅವರು ಈ ಹಾಡನ್ನು ರಿಲೀಸ್​ ಮಾಡಿದ್ದಾರೆ.

ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ಕೊಡುಗೆಯಾಗಿ ಈ ಹಾಡನ್ನು ನಿರ್ಮಿಸಿದ್ದಾರೆ ಎಂಬುದು ವಿಶೇಷ. ಹೊಸವರ್ಷದ ಪ್ರಯುಕ್ತ ಬಿಡುಗಡೆ ಆಗಿರುವ ಈ ಗೀತೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಂದನ್​ ಶೆಟ್ಟಿ ಅವರು ಈವರೆಗೆ ಮಾಡಿದ ಹಾಡುಗಳ ಪೈಕಿ ಇದು ಅತಿ ದುಬಾರಿ ಸಾಂಗ್​.

‘ನನ್ನ ಆಲೋಚನೆಯಲ್ಲಿ ಇದು ಇರಲ್ಲಿಲ್ಲ. ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ನನ್ನ ಮಗಳು ಬಿಂದ್ಯಾಳನ್ನು ಕೇಳಿದಾಗ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಅಂತ ಆಸೆಪಟ್ಟಳು. ನಂತರ ಕೆ. ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿದೆ. ಈ ಹಾಡು ನಿರ್ಮಾಣವಾಗಲು ನನ್ನ ಮಗಳು ಬಿಂದ್ಯಾ ಕಾರಣ‌. ಚಂದನ್ ಶೆಟ್ಟಿ, ರಚಿತಾ ರಾಮ್​ ಜೊತೆ ನನ್ನ ಮಗಳು ಅಭಿನಯಿಸಿದ್ದಾಳೆ’ ಎಂದು ಖುಷಿ ಹಂಚಿಕೊಂಡರು ನಿರ್ಮಾಪಕ ಕೇಶವ್. ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ, ನಿರ್ಮಾಪಕ ಕೇಶವ್ ಅವರ ಪತ್ನಿ ಇಂದಿರಾ ಕೂಡ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು.

YouTube video player

ಹಾಡಿನ ಬಗ್ಗೆ ಮಾತನಾಡಿದ ನಿರ್ದೇಶಕ ನಂದಕಿಶೋರ್​, ‘ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಆದರೆ ಮ್ಯೂಸಿಕ್​ ವಿಡಿಯೋಗೆ ಆ್ಯಕ್ಷನ್​-ಕಟ್​ ಹೇಳಿರುವುದು ಇದೇ ಮೊದಲು. ಮಕ್ಕಳು ತಮ್ಮ ಹುಟ್ಟುಹಬ್ಬಕ್ಕೆ ಚಾಕೊಲೇಟ್, ಬಿಸ್ಕತ್ತು ಇತ್ಯಾದಿ ಕೇಳುತ್ತಾರೆ. ಆದರೆ ಈ ಹುಡುಗಿ ಆಲ್ಬಂ ಸಾಂಗ್ ಬೇಕು ಅಂತ ಕೇಳಿ, ನೂರು ಜನಕ್ಕೆ ಅನ್ನ ನೀಡಿದ್ದಾಳೆ’ ಎಂದರು.

ಇದನ್ನೂ ಓದಿ:

‘ಪ್ರೀತಿ ತೋರಿಸೋ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡ್ದಾಗ ಬೇಜಾರಾಗತ್ತೆ’: ರಚಿತಾ ರಾಮ್​

‘ನಾನು ಸಿಗರೇಟ್​ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್​ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ

Follow Us