AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಚಿಕ್ಕಣ್ಣ ಜಸ್ಟ್ ಮಿಸ್, ನತದೃಷ್ಟ ಪ್ರದೋಷ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಆರೋಪಿಗಳ ಬಂಧನವಾಗಿದೆ. ನಟ ಚಿಕ್ಕಣ್ಣ ಈ ಪ್ರಕರಣದಿಂದ ಕೊದಲೆಳೆ ಅಂತರದಿಂದ ಪಾರಾಗಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಚಿಕ್ಕಣ್ಣ ಜಸ್ಟ್ ಮಿಸ್, ನತದೃಷ್ಟ ಪ್ರದೋಷ್
Follow us
ಮಂಜುನಾಥ ಸಿ.
|

Updated on:Jul 21, 2024 | 8:13 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಆರೋಪಿಗಳಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕೊಲೆ ಪ್ರಕರಣದಲ್ಲಿ 17 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಹಲವಾರು ಮಂದಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಅದರಲ್ಲಿ ನಟ ಚಿಕ್ಕಣ್ಣ ಸಹ ಒಬ್ಬರು. ಅಸಲಿಗೆ ಚಿಕ್ಕಣ್ಣ ಸಹ ಆರೋಪಿಗಳಲ್ಲಿ ಒಬ್ಬರಾಗಿ ಜೈಲಿನಲ್ಲಿರಬೇಕಿತ್ತು, ಆದರೆ ಅವರ ಅದೃಷ್ಟ ಚೆನ್ನಾಗಿದ್ದು ಕೂದಲೆಳೆ ಅಂತರದಲ್ಲಿ ಈ ಪ್ರಕರಣದಿಂದ ಪಾರಾದರು. ಆದರೆ ಪ್ರದೋಷ್​ ಅದೃಷ್ಟ ಕೊನೆಯ ಕ್ಷಣದಲ್ಲಿ ಕೈಕೊಟ್ಟು ಆರೋಪಿಯಾದ. ಹೇಗೆ? ಇಲ್ಲಿದೆ ವಿವರ.

ರೇಣುಕಾ ಸ್ವಾಮಿ ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಇನ್ನೂ ಕೆಲವರು, ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್​ನಲ್ಲಿ ಕುಡಿದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ದರು. ನಟ ದರ್ಶನ್ ಪಟ್ಟಣಗೆರೆ ಶೆಡ್​ಗೆ ಹೋಗುವಾಗ ಚಿಕ್ಕಣ್ಣರನ್ನು ಸಹ ಕರೆದರಂತೆ. ಆದರೆ ಚಿಕ್ಕಣ್ಣ ದರ್ಶನ್​ ಜೊತೆ ಹೋಗಲು ಒಪ್ಪದೆ ತಡವಾಗಿದೆ ಮನೆಗೆ ಹೋಗುವೆ ಎಂದು ಹೇಳಿ ಮನೆಯ ಕಡೆ ಹೊರಟಿದ್ದಾರೆ.

ಆದರೆ ಅದೇ ಪಾರ್ಟಿಯಲ್ಲಿದ್ದ ಪ್ರದೋಶ್, ಬೇಡವೆಂದರೂ ನಾನೂ ಬರ್ತೀನಿ ಬಾಸ್ ಎಂದುಕೊಂಡು ದರ್ಶನ್ ಜೊತೆಗೆ ಹೋಗಿದ್ದರಂತೆ. ಅಸಲಿಗೆ ಪ್ರದೋಶ್, ದರ್ಶನ್​ ಗ್ಯಾಂಗ್​ನಲ್ಲಿಯೇ ಇರಲಿಲ್ಲವಂತೆ. ಪಾರ್ಟಿ ನಡೆಯುವಾಗ ನನಗೆ ತುಸು ಕೆಲಸ ಇದೆ ಎಂದು ದರ್ಶನ್ ಪಾರ್ಟಿಯಿಂದ ಹೊರಬಂದರಂತೆ. ಆಗ ಪ್ರದೋಶ್ ಸಹ ಬಾಸ್ ನಾನೂ ಬರ್ತೀನಿ ಎಂದುಕೊಂಡು ಅವರ ಜೊತೆ ಹೋದರಂತೆ. ದರ್ಶನ್ ಬೇಡ ಎಂದರೂ ಸಹ ದರ್ಶನ್ ಜೊತೆಗೆ ಕಾರಿನಲ್ಲಿ ಹೋಗಿದ್ದಾರೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿರುವ ವಿಚಾರ ಪಾರ್ಟಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲವಂತೆ. ಆದರೆ ಪ್ರದೋಶ್ ಪಾರ್ಟಿ ಬಳಿಕ ದರ್ಶನ್​ ಅನ್ನು ಬಲವಂತ ಮಾಡಿ ಅವರ ಜೊತೆಗೆ ಪಟ್ಟಣಗೆರೆ ಶೆಡ್​ಗೆ ಹೋಗಿದ್ದಾನೆ. ಇದರಿಂದಾಗಿ ಆತ ಪ್ರಕರಣದ ಆರೋಪಿಯಾಗಿದ್ದಾನೆ. ಕೊಲೆ ನಡೆದ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಪ್ರದೋಶ್ ಅನ್ನು ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಕೊಟ್ಟ ಹಣವನ್ನು ಪ್ರದೋಶ್, ಇತರರಿಗೆ ಹಂಚಿಕೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಚಿಕ್ಕಣ್ಣ ಜಸ್ಟ್ ಮಿಸ್, ನತದೃಷ್ಟ ಪ್ರದೋಷ್

ಪ್ರಕರಣದಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನವಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿಟ್ಟು ವಿಚಾರಣೆ ಮಾಡುವ ಸಂದರ್ಭದಲ್ಲಿ ನಟ ಚಿಕ್ಕಣ್ಣ ಅವರನ್ನು ಸಹ ಪೊಲೀಸರು ವಿಚಾರಣೆಗೆ ಕರೆದಿದ್ದರು. ತಾವು ಪಾರ್ಟಿಯಲ್ಲಿ ಮಾತ್ರವೇ ಇದ್ದು ಆ ನಂತರ ಮನೆಗೆ ಹೋಗಿದ್ದಾಗಿ ಚಿಕ್ಕಣ್ಣ ಹೇಳಿದ್ದರು. ಚಿಕ್ಕಣ್ಣನ ಅದೃಷ್ಟ ಚೆನ್ನಾಗಿತ್ತು ಪ್ರಕರಣದಿಂದ ಸ್ವಲ್ಪದರಲ್ಲಿ ಪಾರಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:52 am, Sun, 21 July 24