ಧ್ರುವ ಸರ್ಜಾ ಬರ್ತ್​ಡೇ ದಿನ ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’

|

Updated on: Sep 07, 2023 | 10:39 AM

ಅಕ್ಟೋಬರ್ 6 ಧ್ರುವ ಸರ್ಜಾ ಜನ್ಮದಿನ. ಈ ದಿನ ಶುಕ್ರವಾರ ಕೂಡ ಹೌದು. ಅಣ್ಣ ಚಿರು ಮೇಲೆ ಧ್ರುವಗೆ ಅಪಾರ ಪ್ರೀತಿ ಇತ್ತು. ಅವರನ್ನು ಕಳೆದುಕೊಂಡಿರೋ ನೋವು ಸದ್ಯಕ್ಕೆ ಮರೆ ಆಗುವಂಥದ್ದಲ್ಲ. ಈಗ ಜನ್ಮದಿನದಂದೇ ಅಣ್ಣನ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಧ್ರುವ ಸರ್ಜಾ ಖುಷಿಯಾಗಿದ್ದಾರೆ. ಚಿತ್ರತಂಡದ ನಿರ್ಧಾರವನ್ನು ಅವರು ಶ್ಲಾಘಿಸಿದ್ದಾರೆ.

ಧ್ರುವ ಸರ್ಜಾ ಬರ್ತ್​ಡೇ ದಿನ ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’
ಚಿರು-ಧ್ರುವ
Follow us on

ಚಿರಂಜೀವಿ ಸರ್ಜಾ (Chiranjeevi Sarja) ಅವರು ನಮ್ಮನ್ನು ಅಗಲಿ ಕೆಲವು ವರ್ಷಗಳು ಕಳೆದಿವೆ. ಅವರ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಚಿತ್ರದ (Rajamartanda Movie) ಶೂಟಿಂಗ್ ಪೂರ್ಣಗೊಂಡಿತ್ತು. ಆದರೆ, ಡಬ್ಬಿಂಗ್ ಕೆಲಸಗಳು ಆಗಿರಲಿಲ್ಲ. ಚಿರು ಪಾತ್ರಕ್ಕೆ ಧ್ರುವ ಸರ್ಜಾ ಅವರು ಧ್ವನಿ ನೀಡಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ಕಾರಣಾಂತರಗಳಿಂದ ಮುಂದೂಡಲ್ಪಡುತ್ತಲೇ ಇತ್ತು. ಈಗ ಸಿನಿಮಾಗೆ ಬಿಡುಗಡೆ ದಿನಾಂಕ ನಿಗದಿ ಆಗಿದೆ. ಧ್ರುವ ಸರ್ಜಾ ಬರ್ತ್​ಡೇ ದಿನ ‘ರಾಜಮಾರ್ತಾಂಡ’ ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿದೆ.

ಅಕ್ಟೋಬರ್ 6 ಧ್ರುವ ಸರ್ಜಾ ಜನ್ಮದಿನ. ಈ ದಿನ ಶುಕ್ರವಾರ ಕೂಡ ಹೌದು. ಅಣ್ಣ ಚಿರು ಮೇಲೆ ಧ್ರುವಗೆ ಅಪಾರ ಪ್ರೀತಿ ಇತ್ತು. ಅವರನ್ನು ಕಳೆದುಕೊಂಡಿರೋ ನೋವು ಸದ್ಯಕ್ಕೆ ಮರೆ ಆಗುವಂಥದ್ದಲ್ಲ. ಈಗ ಜನ್ಮದಿನದಂದೇ ಅಣ್ಣನ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಧ್ರುವ ಸರ್ಜಾ ಖುಷಿಯಾಗಿದ್ದಾರೆ. ಚಿತ್ರತಂಡದ ನಿರ್ಧಾರವನ್ನು ಅವರು ಶ್ಲಾಘಿಸಿದ್ದಾರೆ.

ಚಿರು ನಿಧನಕ್ಕೂ ಮುಂಚೆ ‘ರಾಜಮಾರ್ತಾಂಡ’ ಚಿತ್ರದಲ್ಲಿ ನಟಿಸಿದ್ದರು. ಶೂಟಿಂಗ್ ಕೂಡ ಪೂರ್ಣಗೊಂಡಿತ್ತು. ಡಬ್ಬಿಂಗ್ ಕೆಲಸಗಳು ಬಾಕಿ ಇದ್ದವು. ಆದರೆ, ಈ ಸಂದರ್ಭದಲ್ಲಿ ಚಿರಂಜೀವಿ ಅವರು ಹೃದಯಾಘಾತದಿಂದ ಮೃತಪಟ್ಟರು. ಬಾಕಿ ಇದ್ದ ಡಬ್ಬಿಂಗ್ ಕೆಲಸವನ್ನು ಧ್ರುವ ಸರ್ಜಾ ಪೂರ್ಣಗೊಳಿಸಿದ್ದಾರೆ. ಈ ವಿಚಾರ ಅಭಿಮಾನಿಗಳು ಖಷಿಪಟ್ಟಿದ್ದಾರೆ.

‘ರಾಜಮಾರ್ತಾಂಡ’ ಚಿತ್ರವನ್ನು ಶಿವಕುಮಾರ್ ನಿರ್ಮಿಸಿದ್ದಾರೆ. ರಾಮನಾರಾಯಣ್ ನಿರ್ದೇಶಿಸಿದ್ದಾರೆ.  ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಧರ್ಮವಿಶ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.  ವೆಂಕಟೇಶ್ ಯು.ಡಿ.ವಿ. ಸಂಕಲನ, ಕೆ. ಗಣೇಶ್ ಛಾಯಾಗ್ರಹಣ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಭೂಷಣ್, ಹರ್ಷ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಅಳಿಯ ಚಿರಂಜೀವಿ ಸರ್ಜಾ ನಟಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ನೋಡಿ ಸುಂದರ್​ ರಾಜ್​ ಹೇಳಿದ್ದೇನು?

‘ರಾಜಮಾರ್ತಾಂಡ’ ಚಿತ್ರದ ಪಾತ್ರವರ್ಗ ಕೂಡ ದೊಡ್ಡದಾಗಿದೆ. ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಬಣ್ಣ ಹಚ್ಚಿದ್ದಾರೆ. ಚಿಕ್ಕಣ್ಣ, ಭಜರಂಗಿ ಲೋಕಿ, ದೇವರಾಜ್, ಶಂಕರ್ ಅಶ್ವಥ್, ಸುಮಿತ್ರ, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Thu, 7 September 23