Basavaraj Bommai: ಮಾರ್ಚ್​ ಮೊದಲ ವಾರದಲ್ಲಿ ಅಂಬರೀಷ್​ ಸ್ಮಾರಕ ಉದ್ಘಾಟನೆ: ಸಿಎಂ ಬಸವರಾಜ ಬೊಮ್ಮಾಯಿ

|

Updated on: Feb 07, 2023 | 10:25 PM

Rebel Star Ambareesh Memorial: ‘ಒಂದೂವರೆ ವರ್ಷದ ಹಿಂದೆ ಅಂಬರೀಷ್​ ಸ್ಮಾರಕದ ನಿರ್ಮಾಣಕ್ಕೆ ಹಣ ನೀಡಿ ಕೆಲಸ ಆರಂಭಿಸಿದ್ದೆವು. ಆ ಸ್ಮಾರಕದ ಕಾರ್ಯ ಈಗ ಪೂರ್ಣಗೊಂಡಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Basavaraj Bommai: ಮಾರ್ಚ್​ ಮೊದಲ ವಾರದಲ್ಲಿ ಅಂಬರೀಷ್​ ಸ್ಮಾರಕ ಉದ್ಘಾಟನೆ: ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ, ಅಂಬರೀಷ್
Follow us on

ಖ್ಯಾತ ನಟ ‘ರೆಬಲ್​ ಸ್ಟಾರ್​’ ಅಂಬರೀಷ್​ ಸ್ಮಾರಕ (Ambareesh Memorial) ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದಾರೆ. ಮಂಗಳವಾರ (ಫೆ.7) ಸಂಜೆ ‘ಪುನೀತ್​ ರಾಜ್​ಕುಮಾರ್​ ರಸ್ತೆ’ (Puneeth Rajkumar Road) ಉದ್ಘಾಟನೆ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ. ‘ಪುನೀತ್​ ರಾಜ್​ಕುಮಾರ್​​ ಹಾಗೆಯೇ ನನ್ನ ಆತ್ಮೀಯ ಸ್ನೇಹಿತ ಅಂಬರೀಷ್​ ಕೂಡ ಬಂಗಾರದ ಹೃದಯ ಹೊಂದಿದ್ದ ವ್ಯಕ್ತಿ. ಅವರು ಮನಸ್ಸು ಮಾಡಿದ್ದರೆ ಎಷ್ಟೋ ಹಣ ಗಳಿಸಬಹುದಿತ್ತು. ಆದರೆ ಅವರು ಅಪಾರ ಜನರ ಪ್ರೀತಿ-ಸ್ನೇಹ ಗಳಿಸಿದ್ದರು. ಅವರ ಸ್ಮಾರಕ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಮಾರ್ಚ್​ ಮೊದಲ ವಾರ ಆ ಸ್ಮಾರಕ ಉದ್ಘಾಟನೆ ಮಾಡೋಣ’ ಎಂದು ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.

‘ಒಂದು ಕಾಲದಲ್ಲಿ ನಾನು ಮತ್ತು ಅಂಬರೀಷ್​ ಅವರು ಪ್ರತಿ ದಿನ ಒಟ್ಟಿಗೆ ಇರುತ್ತಿದ್ದೆವು. ಹಳ್ಳಿ, ದೇಶ, ವಿದೇಶದಲ್ಲಿ ಅವರಿಗೆ ಸ್ನೇಹಿತರು ಇದ್ದಾರೆ. ಅಂಥ ಸ್ನೇಹಿತರಲ್ಲಿ ನಾನೂ ಒಬ್ಬ. ಸುಮಾರು ಒಂದೂವರೆ ವರ್ಷದ ಹಿಂದೆ ಅಂಬರೀಷ್​ ಸ್ಮಾರಕದ ನಿರ್ಮಾಣಕ್ಕೆ ಹಣ ನೀಡಿ ಕೆಲಸ ಆರಂಭಿಸಿದ್ದೆವು. ಆ ಸ್ಮಾರಕದ ಕಾರ್ಯ ಈಗ ಪೂರ್ಣಗೊಂಡಿದೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Puneeth Rajkumar Road: ಪುನೀತ್​ ರಾಜ್​ಕುಮಾರ್​ ರಸ್ತೆ ಉದ್ಘಾಟನೆ: ಅದ್ದೂರಿ ಕಾರ್ಯಕ್ರಮದ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ
‘ಅಂಬರೀಷ್​​ಗೆ ಅನಾರೋಗ್ಯ ಉಂಟಾದಾಗ ಬದುಕಿಸಿದವರು ಇವರೇ’; ಹಳೆ ಘಟನೆ ನೆನೆದ ಸುಂದರ್ ರಾಜ್
ಅಂಬಿ ಸಮಾಧಿಗೆ ಎಡೆ ಇಟ್ಟು ನಮಿಸಿದ ಸುಮಲತಾ ಅಂಬರೀಷ್​; ಸಾಥ್​ ನೀಡಿದ ರಾಕ್​ಲೈನ್​ ವೆಂಕಟೇಶ್​
‘ರೆಬೆಲ್​ ಸ್ಟಾರ್​​’ 70ನೇ ಜನ್ಮದಿನಕ್ಕೆ ಕೇಕ್​ ಕತ್ತರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ಸುಮಲತಾ ಅಂಬರೀಷ್​
‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್​ ನೆನೆದು ರಾಕ್​ಲೈನ್​ ಭಾವುಕ

ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು:

‘ಬೆಂಗಳೂರಿನ ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರನ್ನು ಇಡಬೇಕು ಎಂದು ಅವರ ಅನೇಕ ಸ್ನೇಹಿತರು ಆಸೆಪಟ್ಟಿದ್ದಾರೆ. ಆ ರಸ್ತೆಗೆ ಅವರ ಹೆಸರು ಸೂಕ್ತ. ಅವರ ವ್ಯಕ್ತಿತ್ವದ ಬಗ್ಗೆ ತಿಳಿದಿರುವ ಎಲ್ಲರೂ ಹೌದು ಎನ್ನುತ್ತಾರೆ. ಯಾಕೆಂದರೆ, ಅವರು ಅಲ್ಲಿ ಸಮಯ ಕಳೆಯುತ್ತಿದ್ದರು. ಕುದುರೆಯ ಓನರ್​ ಆಗಿದ್ದರು. ಅದರ ಜೊತೆಗೆ ನಮ್ಮ ಚಿತ್ರೋದ್ಯಮದ ವಾಣಿಜ್ಯ ಮಂಡಳಿ ಕೂಡ ಅಲ್ಲೇ ಇದೆ. ಗಾಂಧಿನಗರವೂ ಹತ್ತಿರ ಇದೆ. ಹಾಗಾಗಿ ಆ ರಸ್ತೆಗೆ ರೇಸ್​ ಕೋರ್ಸ್​ ರಸ್ತೆ ಎನ್ನುವುದಕ್ಕಿಂತ ರೆಬೆಲ್​ ಸ್ಟಾರ್​ ರಸ್ತೆ ಎಂದರೆ ಬಹಳ ಚೆನ್ನಾಗಿ ಇರುತ್ತದೆ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.

ಇದನ್ನೂ ಓದಿ: Puneeth Rajkumar Road: ಪುನೀತ್​ ಜೀವನ ಚರಿತ್ರೆ ಸಾರುವ ಸ್ಮಾರಕ ನಿರ್ಮಾಣಕ್ಕೆ ಸಿಎಂ ಭರವಸೆ; ರಸ್ತೆ ಉದ್ಘಾಟನೆ ವೇಳೆ ಘೋಷಣೆ

‘ಅಂಬರೀಷ್​ಗೂ ಬಹಳ ಖುಷಿ ಆಗುತ್ತದೆ’:

‘ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು ಇಡಬೇಕು ಎಂದು ನಾನು ತೀರ್ಮಾನಿಸಿದ್ದೇನೆ. ಇದರಿಂದ ಅಂಬರೀಷ್​ಗೆ ಬಹಳ ಖುಷಿ ಆಗುತ್ತದೆ. ಸರಿಯಾದ ರಸ್ತೆಗೆ ನೀನು ನನ್ನ ಹೆಸರನ್ನು ಇಟ್ಟಿದ್ದೀಯ ಅಂತ ಅವನು ಹೇಳುತ್ತಾನೆ’ ಎಂದಿದ್ದಾರೆ ಬೊಮ್ಮಾಯಿ.

‘ಅಂಬರೀಷ್​, ಪುನೀತ್​ ರಾಜ್​ಕುಮಾರ್​, ವಿಷ್ಣುವರ್ಧನ್​, ಡಾ. ರಾಜ್​ಕುಮಾರ್​ ಅವರಂತಹ ವ್ಯಕ್ತಿತ್ವಗಳು ನಮ್ಮನ್ನು ರಂಜಿಸಲು ಹುಟ್ಟಿದ್ದು ಮಾತ್ರವಲ್ಲ. ನಮ್ಮ ಪ್ರೀತಿ-ವಿಶ್ವಾಸವನ್ನು ಗಳಿಸಿದ ಜೀವಗಳು ಅವು. ಅವರ ಹೆಸರು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:25 pm, Tue, 7 February 23