ಕನ್ನಡ ಚಿತ್ರರಂಗದಲ್ಲಿ (Sandalwood) ಭಿನ್ನ-ಭಿನ್ನ ಜಾನರ್ನ ಸಿನಿಮಾಗಳು ತೆರೆಗೆ ಬರುತ್ತಿದ್ದು, ಗಮನ ಸೆಳೆಯುತ್ತಿದೆ. ಮಾಸ್ ಎಂಟರ್ಟ್ರೈನರ್, ಲವ್ ಸ್ಟೋರಿ, ಧಾರ್ಮಿಕ ಆಚರಣೆಯುಳ್ಳ ಕತೆಗಳು, ಹಾಸ್ಯಮಯ ಕತೆಗಳು ಹೀಗೆ ಭಿನ್ನ ಜಾನರ್ ಸಿನಿಮಾಗಳು ಬರುತ್ತಿವೆ. ಇದೀಗ ಹೊಸ ತಂಡವೊಂದು ‘ಕ್ರೇಜಿ ಕೀರ್ತಿ’ ಹೆಸರಿನ ಸಿನಿಮಾದೊಟ್ಟಿಗೆ ಬರುತ್ತಿದ್ದು, ಈ ಸಿನಿಮಾವನ್ನು ಯುವಕರಿಗೆಂದೇ ನಿರ್ಮಾಣ ಮಾಡಲಾಗಿದೆಯಂತೆ.
ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್ ನವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಬಾಲಾಜಿ ಮಾಧವ ಶೆಟ್ಟಿ ಈ ಸಿನಿಮಾದ ನಿರ್ದೇಶಕರಾಗಿದ್ದು, ನಿರ್ಮಾಪಕರೂ ಸಹ ಅವರೇ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ಹಾಗೂ ಇತರೆ ಕೆಲವು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆಗೆ ಲಭ್ಯವಿದೆ.
ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಬಾಲಾಜಿ ಮಾಧವ ಶೆಟ್ಟಿ ಮಾತನಾಡಿ, ”ಇದು ನನ್ನ ಪ್ರಥಮ ಚಿತ್ರ. ಸಾಕಷ್ಟು ಶ್ರಮ ಹಾಕಿ ಈ ಚಿತ್ರ ಮಾಡಿದ್ದೇನೆ. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಕಾಲೇಜು ವಿದ್ಯಾರ್ಥಿಗಳ ಲೈಫ್ ಸ್ಟೈಲ್ ಕುರಿತ ಕಥೆಯನ್ನು ಸಿನಿಮಾ ಒಳಗೊಂಡಿದೆ. ಒಂದೊಳ್ಳೆಯ ರೊಮ್ಯಾಂಟಿಕ್ ಕಥಾಹಂದರ ಸಿನಿಮಾದಲ್ಲಿದೆ. ಮನಸ್ಸಿಗೆ ಇಷ್ಟವಾಗುವಂತಹ ಹಾಡುಗಳು ಸಿನಿಮಾದ ಧನಾತ್ಮಕ ಅಂಶ. ಇನ್ನು, ಈ ಸಿನಿಮಾ ಇಷ್ಟೊಂದು ಚೆನ್ನಾಗಿ ಮೂಡಿ ಬರಲು ಕಾರಣ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್. ಅವರಿಗೆ ನಮ್ಮ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಇದೆ. ಪಾತ್ರದ ಜೊತೆಗೆ ಸಿನಿಮಾ ಹೇಗೆ ಬರಬೇಕು, ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ತಿಳಿಹೇಳುವ ಮೂಲಕ ಓಂ ಪ್ರಕಾಶ್ ರಾವ್ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣರಾಗಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ವಿದೇಶಕ್ಕೆ ಹೊರಟ ‘ಹಾಸ್ಟೆಲ್ ಹುಡುಗರು’: ಹೊಸಬರ ಸಿನಿಮಾಗೆ ಸಿಕ್ಕಿದೆ ಭರ್ಜರಿ ಸಕ್ಸಸ್
”ಈ ಸಿನಿಮಾದಲ್ಲಿ ನಟಿಸಲು ನನಗೆ ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಒಂದು ಪಾತ್ರ ಇದೆ, ಅದನ್ನು ನೀವೇ ಮಾಡಬೇಕು ಎಂದು ಹೇಳಿದಾಗ ಮೊದಲಿಗೆ ಕಥೆ ಕೇಳಿದೆ. ಚೆನ್ನಾಗಿದೆ ಎನಿಸಿತು ಹಾಗಾಗಿ ಒಪ್ಪಿಕೊಂಡೆ. ಕೊರೊನಾ ಸಮಯದಲ್ಲಿ ನನಗೆ ಈ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದು ವಿಶೇಷ. ಆ ಕಾರಣಕ್ಕೆ ನಾನು ಸಿನಿಮಾದ ತೆರೆಯ ಮೇಲೂ ಮತ್ತು ಹಿಂದೆಯೂ ಇದ್ದು, ಒಂದೊಳ್ಳೆಯ ಸಿನಿಮಾ ಆಗಲು ಅವರ ಜೊತೆ ಕೈ ಜೋಡಿಸಿದ್ದೇನೆ. ಸಿನಿಮಾದ ನಾಯಕ ಅಭಿಲಾಶ್ಗೆ ಒಳ್ಳೆಯ ಭವಿಷ್ಯ ಇದೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಸಿನಿಮಾ ಯಶಸ್ಸು ಕಾಣಲಿ ಎಂದು ಓಂ ಪ್ರಕಾಶ್ ರಾವ್ ಹಾರೈಕೆಗಳನ್ನು ನೀಡಿದರು.
‘ಕ್ರೇಜಿ ಕೀರ್ತಿ’ ಸಿನಿಮಾದ ನಾಯಕನಾಗಿ ಅಭಿಲಾಶ್ ನಟಿಸಿದ್ದಾರೆ. ನಾಯಕಿ ಸಾರಿಕ ರಾವ್, ಸಿನಿಮಾದಲ್ಲಿ ಅವರ ಹೆಸರು ಕೀರ್ತಿ, ಸಿನಿಮಾದಲ್ಲಿ ಇನ್ನೊಬ್ಬ ನಾಯಕಿಯೂ ಇದ್ದು, ಎರಡನೇ ನಾಯಕಿ ಪಾತ್ರವನ್ನು ರಿಶಾ ಗೌಡ ನಿರ್ವಹಿಸುತ್ತಿದ್ದಾರೆ. ಹಿರಿಯ ನಟರಾದ ರಂಗಾಯಣ ರಘು, ಸುಧಾ ಬೆಳವಾಡಿ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಲಯ ಕೋಕಿಲ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ