
ಡಾಲಿ ಧನಂಜಯ್ (Daali Dhananjay) ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ. ತಮ್ಮ ನಟನೆ ಮಾತ್ರವಲ್ಲದೆ ನಿರ್ಮಾಣದಿಂದಲೂ ಅದ್ಭುತ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುತ್ತಾ ಬರುತ್ತಿದ್ದಾರೆ. ಡಾಲಿ ಧನಂಜಯ್ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ವೈದ್ಯೆ ಧನ್ಯತಾ ಅವರೊಟ್ಟಿಗೆ ಅದ್ದೂರಿಯಾಗಿ ವಿವಾಹವಾದರು. ಇದೀಗ ಡಾಲಿ ಧನಂಜಯ್ ಮತ್ತು ಧನ್ಯತಾ ಪೋಷಕರಾಗುತ್ತಿದ್ದು, ಖುಷಿಯ ವಿಷಯವನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಡಾಲಿ ಧನಂಜಯ್ ಅವರು ಮಾಧ್ಯಮವೊಂದರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಡಾಲಿ ಅವರು ತಮ್ಮ ಕುಟುಂಬಕ್ಕೆ ಇನ್ನೊಂದು ಜೀವ ಸೇರ್ಪಡೆ ಆಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಾವು ತಂದೆ ಆಗುತ್ತಿರುವುದಾಗಿ ಡಾಲಿ ಧನಂಜಯ್ ಹೇಳಿದ್ದಾರೆ. ಡಾಲಿ ಧನಂಜಯ್ ಪತ್ನಿ ಧನ್ಯತಾ ಅವರು ವೈದ್ಯೆಯಾಗಿದ್ದು, ಫೆಬ್ರವರಿ 16 ರಂದು ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಈ ಜೋಡಿ ಮತ್ತೊಂದು ಜೀವವನ್ನು ಸ್ವಾಗತಿಸುತ್ತಿದೆ.
ಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಜನಪ್ರಿಯ ನಟ ಆದರೆ ಅವರು ನಾಯಕನಾಗಿ ನಟಿಸಿದ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷಗಳಾಗುತ್ತಾ ಬಂದಿವೆ. ಆದರೆ ಮುಂದಿನ ಕೆಲ ತಿಂಗಳಲ್ಲಿ ಅವರ ಕೆಲವು ಸಿನಿಮಾಗಳು ಬಿಡುಗಡೆ ಆಗಲಿವೆ. ಪ್ರಸ್ತುತ ಅವರು ‘ಹಲಗಲಿ’, ‘666 ಆಪರೇಷನ್ ಡ್ರೀಮ್ ಪ್ರಾಜೆಕ್ಟ್’, ‘ಜಿಂಗೊ’, ‘ಅಣ್ಣ ಫ್ರಂ ಮೆಕ್ಸಿಕೊ’ ಮತ್ತು ‘ಉತ್ತರಕಾಂಡ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ‘ಹೆಗ್ಗಣ ಮುದ್ದು’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Sat, 24 January 26