AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಲ್ಮ್​ ಚೇಂಬರ್​ನಲ್ಲಿಂದು ಮಹತ್ವದ ಸಭೆ; ನಿರ್ಧಾರವಾಗಲಿದೆ ದರ್ಶನ್ ಸಿನಿ ಭವಿಷ್ಯ

ಇಂದು ಸಂಜೆ ನಾಲ್ಕು ಗಂಟೆಗೆ ಕಾರ್ಯಕಾರಿ ಸಮತಿ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ದರ್ಶನ್ ವಿಚಾರ ಪ್ರಮುಖವಾಗಿ ಚರ್ಚೆ ಆಗಲಿದೆ. ಈ ಸಭೆಯಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿದ್ದಾರೆ.

ಫಿಲ್ಮ್​ ಚೇಂಬರ್​ನಲ್ಲಿಂದು ಮಹತ್ವದ ಸಭೆ; ನಿರ್ಧಾರವಾಗಲಿದೆ ದರ್ಶನ್ ಸಿನಿ ಭವಿಷ್ಯ
ದರ್ಶನ್
ರಾಜೇಶ್ ದುಗ್ಗುಮನೆ
|

Updated on:Jun 13, 2024 | 2:05 PM

Share

ನಟ ದರ್ಶನ್ (Darshan) ಅವರು ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯನ್ನು ಇವರು ಹತ್ಯೆ ಮಾಡಿದ ಆರೋಪ ಹೊತ್ತಿದ್ದಾರೆ. ಈ ಪ್ರಕರಣದಿಂದ ದರ್ಶನ್ ಅವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಜೋರಾಗಿವೆ. ಈ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದಿದೆ. ಈ ವೇಳೆ ದರ್ಶನ್ ಭವಿಷ್ಯ ನಿರ್ಧಾರ ಆಗೋ ಸಾಧ್ಯತೆ ಇದೆ.

ಇಂದು (ಜೂನ್ 13) ಸಂಜೆ ನಾಲ್ಕು ಗಂಟೆಗೆ ಕಾರ್ಯಕಾರಿ ಸಮತಿ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ದರ್ಶನ್ ವಿಚಾರ ಪ್ರಮುಖವಾಗಿ ಚರ್ಚೆ ಆಗಲಿದೆ. ಈ ಸಭೆಯಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ.

ಈ ಬಗ್ಗೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿದ್ದಾರೆ. ‘ಆ ಸಭೆಯಲ್ಲಿ ಎನು ನಿರ್ಧಾರವಾಗುತ್ತೋ ಅದಕ್ಕೆ ನಾವೆಲ್ಲ ಬದ್ಧರಾಗಿರ್ತಿವಿ. ಎಲ್ಲರೂ ಒಂದು ನಿರ್ಧಾರಕ್ಕೆ ಬರುತ್ತಾರೆ. ಕೇಸ್ ಕಾನೂನಿನ ಅಂಗಳದಲ್ಲಿ ಇರುವುದರಿಂದ ನಾವು ಮಧ್ಯೆ ಹೋಗೋಕೆ ಆಗಲ್ಲ. ಬ್ಯಾನ್ ಮಾಡೋದು ಕಷ್ಟ, ಚಿತ್ರರಂಗ ಅವರಿಗೆ ಅಸಹಕಾರ ವ್ಯಕ್ತಪಡಿಸಬಹುದು ಅಷ್ಟೇ. ಬ್ಯಾನ್ ಅನ್ನೋ ಪದ ಪ್ರಜಾಪ್ರಭುತ್ವದಲ್ಲಿ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ದರ್ಶನ್ ಪ್ರಕರಣ ಉಲ್ಲೇಖಿಸಿ ಸ್ಟಾರ್ಸ್​ ಆರಾಧನ ಸಂಸ್ಕೃತಿಯನ್ನು ಟೀಕಿಸಿದ ರಾಮ್​ ಗೋಪಾಲ್ ವರ್ಮಾ

‘ಮುಂಚೇ ಕೆಲವರನ್ನು ಬ್ಯಾನ್ ಮಾಡಿ ಆ ಬಳಿಕ ಹಿಂದೆ ತೆಗೆದುಕೊಂಡಿದ್ದೇವೆ. ಈ ಬಗ್ಗೆ ನ್ಯಾಯಲಯ ಕ್ರಮ ತೆಗೆದುಕೊಳ್ಳುತ್ತದೆ. ಅಸಹಾಕಾರ ತೋರುವುದರಿಂದ ಅವರ ಸಿನಿಮಾಗಳನ್ನು ಯಾರೂ ನಿರ್ದೆಶನ ಮಾಡಲ್ಲ, ಯಾರು ನಿರ್ಮಾಣ ಮಾಡಲ್ಲ. ಕಾರ್ಮಿಕ ವರ್ಗ ಸಾಥ್ ಕೊಡುವುದಿಲ್ಲ’ ಎಂದು ಉಮೇಶ್ ಬಣಕರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:40 pm, Thu, 13 June 24